ಕೊಲಂಬೊ, ಫೆ. 13 : ICC T20 World Cup 2026 ಯಾರೂ ಊಹಿಸದ ರೀತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 170 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಪಡೆದ ಕಾಂಗರೂಗಳಿಗೆ ಜಿಂಬಾಬ್ವೆಯ ಮಧ್ಯಮ ವೇಗಿಗಳಾದ ಬ್ಲೆಸ್ಸಿಂಗ್ ಮುಝರಬಾನಿ ಮತ್ತು ಬ್ರಾಡ್ ಇವಾನ್ಸ್ ಭಾರೀ ಹೊಡೆತವನ್ನೇ ನೀಡಿದ್ದಾರೆ. ಇವರಿಬ್ಬರ ದಾಳಿಗೆ ಕುಸಿದ ಆಸ್ಟ್ರೇಲಿಯಾ 23 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಇದೀಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಗೆ ಸೂಪರ್ 8 ಹಾದಿ ಕಠಿಣವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬೈ ಎರಡು ವಿಕೆಟ್ ಕಳೆದುಕೊಂಡು 169 ರನ್ ಮಾಡಿದರೆ, ಮುಜುರ್ಬಾನಿ ಇವಾನ್ಸ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡವು 19.3 ಓವರ್ ಗಳಲ್ಲಿ 146 ರನ್ ಗೆ ಆಲೌಟಾಯಿತು. ಈ ಮೂಲಕ ರಜಾ ಪಡೆಯು 23 ರನ್ ಅಂತರದ ಗೆಲುವು ಸಾಧಿಸಿದೆ. 2007 ರ ಟಿ 20 ವಿಶ್ವಕಪ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯನ್ನರನ್ನು ಸೋಲಿಸಿದ್ದ ಜಿಂಬಾಬೈ 2026 ರಲ್ಲಿ ಮತ್ತೊಮ್ಮೆ ಸೋಲಿಸಿದ್ದಾರೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬೈ ತಂಡವು ಉತ್ತಮ ಪ್ರದರ್ಶನ ನೀಡಿತು. ಆಸ್ಟ್ರೇಲಿಯಾದ ಅನನುಭವಿ ಬೌಲರ್ ಗಳ ಲಾಭ ಪಡೆದ ಜಿಂಬಾಬೈ ತಂಡವು ಮೊದಲ ವಿಕೆಟ್ ಗೆ 61 ರನ್ ಗಳಿಸಿತು. ತದಿವನಾಶೆ ಮರುಮಾನಿ 35 ರನ್ ಮಾಡಿ ಔಟಾದರು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅಜೇಯ 65 ರನ್ ಗಳಿಸಿದರು.
ರಿಯಾನ್ ಬರ್ಲ್ 35 ರನ್ ಮಾಡಿದರೆ, ಕೊನೆಯಲ್ಲಿ ನಾಯಕ ಸಿಕಂದರ್ ರಾಜಾ 13 ಎಸೆತಗಳಲ್ಲಿ 25 ರನ್ ಮಾಡಿದರು. 20 ಓವರ್ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು169 ರನ್ ಮಾಡಿತು. ಆಸೀಸ್ ಪರ ಸ್ಟೋಯಿನಸ್ ಮತ್ತು ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಕುಸಿದ ಆಸೀಸ್
ಗುರಿ ಬೆನ್ನತ್ತಿದ ಆಸೀಸ್ ಸತತ ವಿಕೆಟ್ ಕಳೆದುಕೊಂಡಿತು. 29 ರನ್ ಆಗುವಷ್ಟರಲ್ಲಿ ಆಸ್ಟ್ರೇಲಿಯದ ನಾಲ್ಕು ಬ್ಯಾಟರ್ ಗಳು ಪೆವಿಲಿಯನ್ ಸೇರಿಯಾಗಿತ್ತು. ಮ್ಯಾಕ್ಸವೆಲ್ ಮತ್ತು ಮ್ಯಾಟ್ ರೆನ್ನಾ ಐದನೇ ವಿಕೆಟ್ ಗೆ 77 ರನ್ ಮಾಡಿ ತಂಡವನ್ನು ಆಧರಿಸಿದರು. ಆದರೆ ಮ್ಯಾಕ್ಸವೆಲ್ ಔಟಾಗುತ್ತಿದ್ದಂತೆ ಮತ್ತೆ ಆಸೀಸ್ ಕುಸಿತ ಕಂಡಿತು. ಗ್ಲೆನ್ ಮ್ಯಾಕ್ಸವೆಲ್ 31 ರನ್ ಮಾಡಿದರೆ, ಮ್ಯಾಟ್ ರೆನ್ಮಾ 65 ರನ್ ಮಾಡಿ ಔಟಾದರು. ರೆನ್ನಾ ಔಟಾಗುತ್ತಿದ್ದಂತೆ ಆಸೀಸ್ ಸೋಲು ಖಚಿತವಾಯಿತು. 146 ರನ್ ಗೆ ಆಸೀಸ್ ಆಲೌಟಾಯಿತು. ಈ ಮೂಲಕ ಜಿಂಬಾಬೈ 23 ರನ್ ಅಂತರದಿಂದ ಗೆಲುವು ಸಾಧಿಸಿತು. ಜಿಂಬಾಬೈ ಪರ ಬೆಸ್ಸಿಂಗ್ ಮುಜುರ್ಬಾನಿ ನಾಲ್ಕು ವಿಕೆಟ್ ಕಿತ್ತರೆ, ಬ್ರಾಡ್ ಇವಾನ್ಸ್ ಮೂರು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
- ಜಿಂಬಾಬ್ವೆ 20 ಓವರ್ ಗಳಲ್ಲಿ 169/2, ಬ್ರಯಾನ್ ಬೆನ್ನೆಟ್ ಅಜೇಯ 64(56), ತಾಡಿವಾನಶೆ ಮರುಮಾನಿ 35(21), ರಾನ್ ಬುರಿ 35(30), ಸಿಕಂದರ್ ರಝಾ ನಾಟೌಟ್ 25(13), ಕ್ಯಾಮರೂನ್ ಗ್ರೀನ್ 6ಕ್ಕೆ1, ಮಾರ್ಕಸ್ ಸ್ಟಯೋನಿಸ್ 17ಕ್ಕೆ 1
- ಆಸ್ಟ್ರೇಲಿಯಾ 19.3 ಓವರ್ ಗಳಲ್ಲಿ 146/10, ಮ್ಯಾಟ್ ರೆನ್ಶಾ 65(44), ಗ್ಲೆನ್ ಮ್ಯಾಕ್ಸ್ ವೆಲ್ 31(32), ಟ್ರಾವಿಸ್ ಹೆಡ್ 17(15), ಬ್ಲೆಸ್ಸಿಂಗ್ ಮುಝರಬಾನಿ 17ಕ್ಕೆ 4, ಬ್ರಾಡ್ ಇವಾನ್ಸ್ 23ಕ್ಕೆ 3, ರಾನ್ ಬುರಿ 9ಕ್ಕೆ 1.

