ಢಾಕಾ : ಗಂಗಾನದಿ ನೀರು ಹಂಚಿಕೆ ಒಪ್ಪಂದ ನವೀಕರಣದ ಸಂಬಂಧ ಭಾರತ ಹಾಗೂ ಬಾಂಗ್ಲಾದೇಶ ಮಧ್ಯೆ ಮಾತುಕತೆ

ಢಾಕಾ : ಗಂಗಾನದಿ ನೀರು ಹಂಚಿಕೆ ಒಪ್ಪಂದ ನವೀಕರಣದ ಸಂಬಂಧ ಭಾರತ ಹಾಗೂ ಬಾಂಗ್ಲಾದೇಶ ಮಧ್ಯೆ ಮಾತುಕತೆ ಆರಂಭವಾಗಿದೆ. 30 ವರ್ಷಗಳ ಹಿಂದೆ ಸಹಿ ಮಾಡಲ್ಪಟ್ಟ ಒಪ್ಪಂದ 2025ರ ಡಿಸೆಂಬರ್ ನಲ್ಲಿ ಕೊನೆಗೊಂಡ ಹಿನ್ನೆಲೆಯಲ್ಲಿ ಒಪ್ಪಂದ ನವೀಕರಣ ಸಂಬಂಧ ಮಾತುಕತೆ ಆರಂಭಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಗುರುವಾರ ಉಭಯ ದೇಶಗಳ ಅಧಿಕಾರಿಗಳು ಗಂಗಾ ಮತ್ತು ಪದ್ಮಾನದಿಗಳ ನೀರಿನ ಮಟ್ಟದ ಮಾಪನ ಆರಂಭಿಸಿದ್ದಾರೆ. ಮೇ 31ರ ವರೆಗೆ ಪ್ರತಿ 10 ದಿನಗಳ ವರೆಗೆ ಜಲಮಟ್ಟವನ್ನು ದಾಖಲಿಸಲಾಗುತ್ತದೆ.

ಕೇಂದ್ರ ಜಲ ಆಯೋಗದ ಉಪ ನಿರ್ದೇಶಕ ಸೌರಭ್ ಕುಮಾರ್ ಮತ್ತು ಸಹಾಯಕ ನಿರ್ದೇಶ ಸನ್ನಿ ಅರೋರಾ ಬಾಂಗ್ಲಾದೇಶಕ್ಕೆ ತೆರಳಿದ್ದರೆ, ನಾಲ್ಕು ಮಂದಿ ಬಾಂಗ್ಲಾದೇಶ ಅಧಿಕಾರಿಗಳ ತಂಡ ಭಾರತಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತ ತಂಡದ ಸುರಕ್ಷತೆಗೆ “ವಿಶೇಷ ಗಮನ ಹರಿಸಲಾಗಿದೆ” ಎಂದು ಬಾಂಗ್ಲಾದೇಶ ಜಲ ಸಂಪಸನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ಶಿಬ್ಬೇರ್ ಹುಸೈನ್ ತಿಳಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.