ನವದೆಹಲಿ : ಭಾರತ-ಪಾಕಿಸ್ತಾನ ಮ್ಯಾಚ್ ಫಿಕ್ಸ್ – ಪಿಸಿಬಿಯನ್ನು ವ್ಯಂಗ್ಯವಾಡುತ್ತಿದ್ದಾರೆ ಸ್ಟಾರ್ ಆಟಗಾರರು !

Advertisement

ನವದೆಹಲಿ : ಭಾರತ-ಪಾಕಿಸ್ತಾನ ಮ್ಯಾಚ್ ಫಿಕ್ಸ್ – ಪಿಸಿಬಿಯನ್ನು ವ್ಯಂಗ್ಯವಾಡುತ್ತಿದ್ದಾರೆ ಸ್ಟಾರ್ ಆಟಗಾರರು !

Advertisement

ನವದೆಹಲಿ, ಫೆ. 11 : ಶ್ರೀಲಂಕಾದ ಕೊಲೊಂಬಾ ಕ್ರೀಡಾಂಗಣದಲ್ಲಿ ಫೆ.15ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ನಾವು ಆಡೋದಿಲ್ಲ, ಬದಲಿಗೆ ಬಹಿಷ್ಕರಿಸುತ್ತಿದ್ದೇವೆ ಎಂದಿದ್ದ ಪಾಕಿಸ್ತಾನ ಇದೀಗ ದಿಢೀರ್​ ಯು-ಟರ್ನ್​ ಹೊಡೆದಿರುವುದು ಸದ್ಯ ಭಾರೀ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ.

Advertisement

ಬಿಸಿಸಿಐ ಮತ್ತು ಐಸಿಸಿ ವಿರುದ್ಧ ಕಿಡಿಕಾರಿದ್ದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ನಾವು ಬಾಂಗ್ಲಾದೇಶಕ್ಕೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದ್ದು, ಅವರಿಗಾಗಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿದ್ದು ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು. ಬಿಸಿಬಿ ಮತ್ತು ಬಿಸಿಬಿ ಜಂಟಿಯಾಗಿ ಸಲ್ಲಿಸಿದ್ದ ಷರತ್ತುಗಳನ್ನು ಯಾವಾಗ ಐಸಿಸಿ ಮುಲಾಜಿಲ್ಲದೇ ತಿರಸ್ಕರಿಸಿತೋ, ಆಗಲೇ ಬಾಂಗ್ಲಾ ಮತ್ತು ಪಾಕ್​, ಇನ್ನೂ ನಮ್ಮ ಆಟ ನಡೆಯುವುದಿಲ್ಲ ಎಂದು ತಮ್ಮ ನಿರ್ಧಾರಗಳಲ್ಲಿ ಉಲ್ಟಾ ಹೊಡೆಯಿತು.

ಈ ನಿಟ್ಟಿನಲ್ಲಿ ನೀವು ಆಟದ ದೃಷ್ಟಿಯಿಂದ ಭಾರತದೊಂದಿಗೆ ಫೆ.15ರಂದು ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯವನ್ನು ಆಡಬೇಕು ಎಂದು ಬಾಂಗ್ಲಾದೇಶ ಪ್ರೆಸ್​ನೋಟ್​ ಮೂಲಕ ಸ್ಪಷ್ಟಪಡಿಸಿತು. ಹೀಗೆ ಹೇಳುತ್ತಿದ್ದಂತೆ, ನಾವು ಟೀಮ್ ಇಂಡಿಯಾ ವಿರುದ್ಧ ಆಡಲು ತಯಾರಿದ್ದೇವೆ ಎಂದು ಮೊಹ್ಸಿನ್ ನಖ್ವಿ ಹೇಳಿದರು. ಪಾಕ್​ನಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಕ್ರಿಕೆಟ್​ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರು ಲೇವಡಿ ಮಾಡತೊಡಗಿದ್ದಾರೆ.

ಈ ಬಗ್ಗೆ ಕಮೆಂಟ್ ಮಾಡಿರುವ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್, “ಇದರಲ್ಲಿ ಶಾಕಿಂಗ್​ ಏನೂ ಇಲ್ಲ. ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಆಡುತ್ತದೆ ಎಂದು ಎಲ್ಲರಿಗೂ ಮೊದಲೇ ತಿಳಿದಿತ್ತು. ಇದೆಲ್ಲವೂ ಕೇವಲ ಅವರ ಹೈಡ್ರಾಮಾ ಅಷ್ಟೇ. ಪಂದ್ಯವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿಕೊಂಡು ಪಿಸಿಬಿ ಆಡಿದ ನಾಟಕ ಇದೀಗ ತನ್ನದೇ ಸರ್ಕಾರವನ್ನು ಅವಮಾನಿಸಿದೆ. ಇದು ನಿಜಕ್ಕೂ ಹಾಸ್ಯಸ್ಪದ ಎಂದಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ