IPL 2026 : ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಸೆಣಸಾಟ – ಎಲ್ಲರ ಕಣ್ಣು ರಾಹುಲ್ ಮತ್ತು ಪಂತ್ ಮೇಲೆ !

ಲಕ್ನೋ : ಐಪಿಎಲ್ ನ ಡಾರ್ಕ್ ಹಾರ್ಸ್ ಗಳೆಂದೇ ಪರಿಗಣಿತವಾಗಿರುವ ಎರಡು ತಂಡಗಳಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಇದೀಗ ಸತ್ವಪರೀಕ್ಷೆಗೆ ಸಜ್ಜಾಗಿವೆ. ಲಖನೌ ತಂಡದಿಂದ ಹೊರಬಂದು ಕಳೆದ ಬಾರಿ ಮಿಂಚಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರೆ ಮೇಲೆ ಡೆಲ್ಲಿಗೆ ಹೆಚ್ಚಿನ ನಿರೀಕ್ಷೆಗಳಿವೆ. ಮತ್ತೊಂದೆಡೆ ಕಳೆದ ವರ್ಷ ಇನ್ನಿಲ್ಲದ ವೈಫಲ್ಯ ಕಂಡಿದ್ದ ನಾಯಕ ರಿಷಬ್ ಪಂತ್ ಅವರಿಂದ ಈ ಸೀಸನ್ ನಲ್ಲಿ ಭರ್ಜರಿ ಶುಭಾರಂಭವನ್ನು ಲಖನೌ ಸೂಪರ್ ಜೈಂಟ್ಸ್ ಎದುರು ನೋಡುತ್ತಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ತಿಳಿಸಿರುವಂತೆ ಕೆಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್ ನೊಂದಿಗೆ ಆರಂಭಿಕನ ಹೊಣೆಯನ್ನೂ ನಿರ್ವಹಿಸಲಿದ್ದಾರೆ. ಆದರೆ ಅವರ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಮತ್ತೊಬ್ಬ ಬ್ಯಾಟರ್ ಯಾರು ಎಂಬ ಬಗ್ಗೆ ಖಾತ್ರಿಯಿಲ್ಲ. ಪೃಥ್ವಿ ಶಾ ಅವರು ಇಳಿದರೂ ಅಚ್ಚರಿಯೇನಿಲ್ಲ. ಕೆಎಲ್ ಉತ್ತಮ ಆರಂಭ ಒದಗಿಸಿದರೆ ಸ್ಟಬ್ಸ್, ಮಿಲ್ಲರ್, ಕರುಣ್ ನಾಯರ್ ಅವರು ಇನ್ನಿಂಗ್ಸ್ ಬೆಳೆಸಿಯಾರು ಎಂಬ ನಂಬಿಕೆ ಡೆಲ್ಲಿ ತಂಡದ ಮ್ಯಾನೇಜ್ ಮೆಂಟ್ ನದ್ದು. ಬೌಲಿಂಗ್ ವಿಭಾಗಕ್ಕೆ ಬಂದಲ್ಲಿ ಮುಖೇಶ್ ಕುಮಾರ್, ಟಿ ನಟರಾಜನ್, ಕುಲ್ದೀಪ್ ಯಾದವ್, ನಾಯಕ ಅಕ್ಷರ್ ಪಟೇಲ್ ಅವರನ್ನು ಹೊಂದಿರುವ ವಿಭಾಗ ಬಲಿಷ್ಠವಾಗಿದೆ.

ಇನ್ನು ಲಖನೌ ಸೂಪರ್‌ ಜಯಂಟ್ಸ್‌ ತಂಡ ಕೆಲವು ಬದಲಾವಣೆಯೊಂದಿಗೆ ಈ ಸೀಸನ್ ನಲ್ಲಿ ಕಣಕ್ಕಿಳಿಯುತ್ತಿದೆ. ಐಪಿಎಲ್‌ನಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕವನ್ನು ಹೊಂದಿರುವ ತಂಡವಿದು. ಮಿಚೆಲ್‌ ಮಾರ್ಷ್, ಏಡೆನ್‌ ಮಾಕ್ರ್ರಮ್‌, ನಿಕೋಲಸ್‌ ಪೂರನ್‌ ಮತ್ತು ನಾಯಕ ರಿಷಭ್‌ ಪಂತ್‌ ಹೀಗೆ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳಿದ್ದರೂ ತಂಡ ಸಾಂಘಿಕವಾಗಿ ಆಡುವುದನ್ನು ರೂಢಿಸಿಕೊಳ್ಳಬೇಕಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಟ್ರೇಡ್‌ ಮೂಲಕ ಮೊಹಮ್ಮದ್‌ ಶಮಿ ಅವರನ್ನು ಸೆಳೆದುಕೊಂಡಿರುವ ಲಖನೌ ತಂಡದ ಬೌಲಿಂಗ್ ಗೆ ಹೆಚ್ಚಿನ ಬಲ ಬಂದಿದೆ. ಜೊತೆಗೆ ಮಿನಿ ಹರಾಜಿನಲ್ಲಿ 2 ಕೋಟಿ ರೂ.ಗೆ ಆ್ಯನ್ರಿಚ್‌ ನೋರ್ಜೆ ದೊರೆತಿರುವುದು ಸಹ ಪ್ಲಸ್ ಪಾಯಿಂಟ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಸಹ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗ ಸಮತೋಲನದಿಂದ ಕೂಡಿದೆ ಎಂದು ಹೇಳಲಡ್ಡಿಯಿಲ್ಲ.

ಉಭಯ ತಂಡಗಳು ಈ ಹಿಂದೆ 7 ಬಾರಿ ಮುಖಾಮುಖಿ ಆಗಿದ್ದು ಲಖನೌ ತಂಡ 3 ಬಾರಿ ಹಾಗೂ ಡೆಲ್ಲಿ 4 ಬಾರಿ ಜಯ ಗಳಿಸಿದೆ. ಈ ಬಾರಿಯ ಪಂದ್ಯವೂ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ಏಕನಾ ಕ್ರೀಡಾಂಗಣದ ಪಿಚ್ ರಿಪೋರ್ಟ್

ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಪಿಚ್ ಅನ್ನು ಅತ್ಯಂತ ಸಮತೋಲಿತ ಮೇಲ್ಮೈ ಎಂದು ಪರಿಗಣಿಸಲಾಗಿದೆ. ಪಿಚ್ ನಲ್ಲಿ ಉತ್ತಮ ಬೌನ್ಸ್ ಮತ್ತು ವೇಗವಿದೆ. ಸ್ಪಿನ್ನರ್ ಗಳೂ ಇಲ್ಲಿ ವಿಕೆಟ್ ಎತ್ತಬಹುದು. ಬ್ಯಾಟರ್ ಗಳು ಇಲ್ಲಿ ಜಾಣ್ಮೆಯಿಂದ ಹೊಡೆತಗಳ ಆಯ್ಕೆ ಮಾಡಬೇಕಾಗುತ್ತದೆ. ಇದು ಆರಂಭದಲ್ಲಿ ಬ್ಯಾಟರ್‌ಗಳಿಗೆ ನೆರವಾಗಲಿದ್ದು, ಕ್ರಮೇಣ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಹೀಗಾಗಿ ಟಾಸ್‌ ಉಭಯ ತಂಡಗಳಿಗೆ ನಿರ್ಣಾಯಕವಾಗಲಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಪಂದ್ಯ ಆರಂಭ: ರಾತ್ರಿ 7.30

ಲಖನೌ ಸಂಭಾವ್ಯ ಇಲೆವೆನ್
ರಿಷಭ್ ಪಂತ್(ನಾಯಕ), ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಐಡೆನ್ ಮಾರ್ಕ್ರಾಮ್, ವನಿಂದು ಹಸರಂಗ, ಶಹಬಾಜ್ ಅಹಮದ್, ಮೊಹಮ್ಮದ್ ಶಮಿ, ಮಯಾಂಕ್ ಯಾದವ್, ಅವೇಶ್ ಖಾನ್, ಅನ್ರಿಚ್ ನಾರ್ಟ್ಜೆ

ಡೆಲ್ಲಿ ಸಂಭಾವ್ಯ ಇಲೆವೆನ್
ಅಕ್ಷರ್ ಪಟೇಲ್(ನಾಯಕ) ಕೆಎಲ್ ರಾಹುಲ್, ಪೃಥ್ವಿ ಶಾ, ಕರುಣ್ ನಾಯರ್, ಪಾಥುಮ್ ನಿಸ್ಸಾಂಕ, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಕುಲ್ಜೀಪ್ ಯಾದವ್, ಎಲ್ ಎನ್‌ಗಿಡಿ, ಔಕಿಬ್ ನಬಿ

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.