ಅಬುಧಾಬಿ, ಡಿ. 17 : ಈ ಬಾರಿಯ ಐಪಿಎಲ್ ಮಿನಿ ಹರಾಜು ಬಾರಿ ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ಬೆಂಗಳೂರು ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ? ಯಾರು ಹೊರ ಹೋಗಲಿದ್ದಾರೆ ? ಎನ್ನುವ ಪ್ರಶ್ನೆಗಳಿಗೆ ನಿನ್ನೆ ತೆರೆ ಬಿದ್ದಿದ್ದು, ಅಬುಧಾಬಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ, ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಇನ್ನೊಂದು ಕಡೆ, ಅಯ್ಯರ್ ನಿರೀಕ್ಷಿತ ಮೊತ್ತಕ್ಕೆ ಹರಾಜಿನಲ್ಲಿ ಖರೀದಿಯಾಗಿಲ್ಲ. ಅವರನ್ನು ಏಳು ಕೋಟಿಗೆ, ಬೆಂಗಳೂರು ತಂಡ ಖರೀದಿಸಿದೆ.
ಬೆಂಗಳೂರು ತಂಡಕ್ಕೆ 16.40 ಕೋಟಿ ತಂಡ ಬ್ಯಾಲನ್ಸ್ ಇತ್ತು. ಇದರಲ್ಲಿ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಒಟ್ಟು ಎಂಟು ಆಟಗಾರರನ್ನು ಖರೀದಿಸಬಹುದಾಗಿತ್ತು. ಸದ್ಯ, ಬೆಂಗಳೂರು ತಂಡದ ಪರ್ಸ್ ನಲ್ಲಿ 1.90 ಕೋಟಿ ಮಾತ್ರ ಉಳಿದುಕೊಂಡಿದೆ. ಹಾಲೀ ಚಾಂಪಿಯನ್ ಆಗಿರುವ ಬೆಂಗಳೂರು ತಂಡವನ್ನು ಇನ್ನಷ್ಟು ಬಲಿಷ್ಠವಾಗಿಸಲು ತಂಡದ ನಾಲ್ವರು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆ ಮೂಲಕ, ದೊಡ್ಡ ಮಟ್ಟದ ಬದಲಾವಣೆಗೆ ಬೆಂಗಳೂರು ತಂಡ ಮುಂದಾದಂತಿದೆ.
ಬಿಡುಗಡೆಯಾಗಿರುವ ಆಟಗಾರರು: ಮಯಾಂಕ್ ಅಗರ್ವಾಲ್, ಮನೋಜ್ ಭಂಡಗೆ, ಸ್ವಾಸ್ತಿಕ್ ಚಿಕಾರ, ಮೋಹಿತ್ ರಾಥಿ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಲುಂಗಿ ಎನ್‌ಗಿಡಿ.
ಹರಾಜಿನಲ್ಲಿ ಖರೀದಿಸಲಾದ ಆಟಗಾರರು: ವೆಂಕಟೇಶ್ ಅಯ್ಯರ್ (7 ಕೋಟಿ ರೂ), ಜೇಕಬ್ ಡಫಿ (2 ಕೋಟಿ ರೂ.), ಸಾತ್ವಿಕ್ ದೇಶ್ವಾಲ್ ( 30 ಲಕ್ಷ), ಮಂಗೇಶ್ ಯಾದವ್ ( 30 ಲಕ್ಷ)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್.

