ಉಡುಪಿ : ಶಬರಿಮಲೆಯಿಂದ ಮರಳಿ ಬಂದ ರಾತ್ರಿ ಎಣ್ಣೆ ಪಾರ್ಟಿ – ಸ್ನೇಹಿತರ ಮಧ್ಯೆ ಜಗಳ – ಓರ್ವನ ಸಾವು

ಉಡುಪಿ, ಡಿ. 15 : ಕುಡಿತದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಓರ್ವ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಮೃತನನ್ನು ಪಡುಕರೆ ಸಂತೋಷ್ ಮೊಗವೀರ (30) ಎಂದು ಗುರುತಿಸಲಾಗಿದೆ.

Advertisement

ಶಬರಿಮಲೆಗೆ ಹೋಗಿ ಬಂದಿದ್ದ ಯುವಕರು ಭಾನುವಾರ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಚರ್ಚೆ ಆರಂಭವಾಗಿ, ಹೊಡೆದಾಡಿಕೊಂಡಿದ್ದಾರೆ. ಸಂತೋಷ ಮೊಗವೀರನಿಗೆ ನಾಲ್ವರು ಮಾರಣಾಂತಿಕ ಹಲ್ಲೆ ಮಾಡಿದ್ದು ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಸಂತೋಷ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೋಟ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಟಿ ಹಾಗೂ ಠಾಣಾ ಎಸ್ಸೆ ಮಾಂತೇಶ್ ಜಾಭಗೌಡ ಮತ್ತು ಹೆಡ್ ಕಾನ್ಸ್ಟೇಬಲ್ ಪ್ರದೀಪ್, ಮತ್ತು ಅಶೋಕ್ ರವರು ಭೇಟಿ ನೀಡಿ, ಪರಿಶೀಲಿಸಿ ನಾಲ್ವರು ಯುವಕರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನ – ಮೂವರ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮಾ. 4ರಿಂದ ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ – ಹರೀಶ್ ಪೂಂಜಾ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

⚠️ Contents are protected on this website.