ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಡಿ. 06ರಂದು 04 ಗ್ರಾಮ ಪಂಚಾಯತ್ ಗಳಲ್ಲಿ ಜನಸ್ಪಂದನಾ ಸಭೆ

ಬೆಳ್ತಂಗಡಿ, ಡಿ. 02 : ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿಸೆಂಬರ್ 06 ಶನಿವಾರದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ.

ಇಡೀ ರಾಜ್ಯದಲ್ಲೇ ಬೆಳ್ತಂಗಡಿ ತಾಲೂಕಿನ ಈ ಜನಸ್ಪಂದನ ಕಾರ್ಯಕ್ರಮ ಮಾದರಿಯಾಗಿದೆ. ಸ್ಥಳದಲ್ಲೇ ಸಾರ್ವಜನಿಕರ ಹಲವಾರು ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದು ಈ ಹಿಂದೆ ಜನಸ್ಪಂದನ ನಡೆದಿರುವ ಗ್ರಾಮಸ್ಥರು ತಮ್ಮ ಅನುಭವ ತೋಡಿಕೊಂಡಿದ್ದಾರೆ.

Advertisement

ಡಿಸೆಂಬರ್ 06 ಶನಿವಾರದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮವು ಪೂರ್ವಾಹ್ನ – 9:30ಕ್ಕೆ ಗ್ರಾಮ ಪಂಚಾಯತ್ ಬಾರ್ಯ, ಪೂರ್ವಾಹ್ನ – 11:00 ಗಂಟೆಗೆ ಗ್ರಾಮ ಪಂಚಾಯತ್ ತೆಕ್ಕಾರು, ಅಪರಾಹ್ನ – 2:00 ಗಂಟೆಗೆ ಗ್ರಾಮ ಪಂಚಾಯತ್ ಇಳಂತಿಲ, ಸಂಜೆ – 4:00 ಗಂಟೆಗೆ ಗ್ರಾಮ ಪಂಚಾಯತ್ ಬಂದಾರು ಇಲ್ಲಿ ನಡೆಯಲಿದೆ. ಸಂಬಂಧಪಟ್ಟ ಗ್ರಾಮಸ್ಥರು ಈ ಜನಸ್ಪಂದನಾ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.