ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ಡಿ ವಲಯ 15, ಜೆಸಿಐ ಭಾರತ ಆಶ್ರಯದಲ್ಲಿ ಜೆಸಿ ಉತ್ಸವದಂಗವಾಗಿ ಡಿಸೆಂಬರ್ 7 ಭಾನುವಾರದಂದು ಬೆಳಗ್ಗೆ 9 ಗಂಟೆಯಿಂದ ಬೆಳ್ತಂಗಡಿ ಸಂತೆಕಟ್ಟೆಯ ಸಮಾಜಮಂದಿರ ಬಯಲು ರಂಗಮಂದಿರದಲ್ಲಿ ತಾಲೂಕು ಮಟ್ಟದ ಮುಕ್ತ ಚೆಸ್ ಸ್ಪರ್ಧೆ, ತಾಲೂಕು ಮಟ್ಟದ ಮುಕ್ತ ಕೇರಂ ಸ್ಪರ್ಧೆ, ಡ್ರಾಯಿಂಗ್ ಸ್ಪರ್ಧೆ ಹಾಗೂ ಭಾವಗೀತೆ ಸ್ಪರ್ಧೆ ನಡೆಯಲಿದೆ.

ತಾಲೂಕು ಮಟ್ಟದ ಮುಕ್ತ ಚೆಸ್ ಹಾಗೂ ಕೇರಂ ಸ್ಪರ್ಧೆ ಮುಕ್ತವಾಗಿದ್ದು ಯಾವುದೇ ವಿಭಾಗ ಹಾಗೂ ವಯಸ್ಸಿನ ಮಿತಿ ಇರುವುದಿಲ್ಲ. ಚೆಸ್ ಬೋರ್ಡ್, ಕಾಯಿನ್ಸ್ ಗಳನ್ನು ಸ್ಪರ್ಧಾಳುಗಳೇ ತರಬೇಕಾಗಿದೆ. ಡ್ರಾಯಿಂಗ್ ಸ್ಪರ್ಧೆಗೆ ಬಣ್ಣ, ಪೆನ್ಸಿಲ್ ಸ್ಪರ್ಧಾಳುಗಳೇ ತರುವುದು, ಹಾಳೆ ಮತ್ತು ವಿಷಯ ಸ್ಥಳದಲ್ಲಿಯೇ ನೀಡಲಾಗುತ್ತದೆ. ಡಿಸೆಂಬರ್ 6ರ ಒಳಗಾಗಿ ಆಯಾ ಸ್ಪರ್ಧಾ ಸಂಯೋಜಕರಲ್ಲಿ ಹೆಸರು ನೋಂದಾಯಿಸಬೇಕಿದೆ. ಎಲ್ಲಾ ಸ್ಪರ್ಧೆಗಳು ಏಕಕಾಲದಲ್ಲಿ ಪ್ರಾರಂಭವಾಗಲಿರುವುದರಿಂದ ಒಬ್ಬರು ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಜಿಲ್ಲಾ ಮಟ್ಟದ ಜನಪದ ಸಮೂಹ ಗಾಯನ ಸ್ಪರ್ಧೆ :
ಜಿಲ್ಲಾ ಮಟ್ಟದ ಜನಪದ ಸಮೂಹ ಗಾಯನ ಸ್ಪರ್ಧೆಯು ಮಧ್ಯಾಹ್ನ 1:00 ಗಂಟೆಯಿಂದ ಆರಂಭವಾಗಲಿದೆ. ತಂಡದಲ್ಲಿ ಕನಿಷ್ಠ 05 ಗರಿಷ್ಠ 08 ಜನರಿಗೆ ಭಾಗವಹಿಸಲು ಅವಕಾಶ, ವೇಷಭೂಷಣ ಹಾಗೂ ಜನಪದ ಸಂಗೀತ ಪರಿಕರಕ್ಕೆ ಪ್ರಾಧ್ಯಾನ್ಯತೆ, ಮೂಲ ಜನಪದ ಆಗಿರಬೇಕು, ಸಮಯದ ಮಿತಿ 04+01, ಡಿಸೆಂಬರ್ 04ರ ಒಳಗಾಗಿ ಸ್ಪರ್ಧೆಯ ಆಯೋಜಕರಲ್ಲಿ ಹೆಸರು ನೋಂದಾಯಿಸಬೇಕು.

ಜಿಲ್ಲಾ ಮಟ್ಟದ ಜೆಸಿ ಸ್ಟಾರ್ ಸಿಂಗರ್ ಸ್ಪರ್ಧೆ :
ಜಿಲ್ಲಾ ಮಟ್ಟದ ಜೆಸಿ ಸ್ಟಾರ್ ಸಿಂಗರ್ ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ, ನವೆಂಬರ್ 27ರ ಒಳಗೆ ಹಾಡಿನ ವೀಡಿಯೋವನ್ನು ಕಳುಹಿಸಿ, ಆನ್ಲೈನ್ ಅಡಿಶನ್ ನಲ್ಲಿ ಭಾಗವಹಿಸಬೇಕಿದೆ, ಅಡಿಶನ್ ನಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಮಾತ್ರ ಈ ಸ್ಪರ್ಧೆ ನಡೆಯಲಿದೆ, ಡ್ಯುಯೆಟ್ ಸ್ಪರ್ಧೆಯಾಗಿದ್ದು ಸ್ಪರ್ಧಿಗಳು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಹಾಡಿನ ವೀಡಿಯೋವನ್ನು ಕಳುಹಿಸಬಹುದು, ಅಡಿಶನ್ ನಲ್ಲಿ ಆಯ್ಕೆಯಾದ ಸ್ಪರ್ಧಿಗಳು ನೇರವಾಗಿ ಫೈನಲ್ ಪ್ರವೇಶಿಸಲಿದ್ದು ಒಂದು ಹಾಡಿಗೆ ಮಾತ್ರ ಅವಕಾಶವಿರುತ್ತದೆ, ತೀರ್ಪುಗಾರರು ಮತ್ತು ಸಂಘಟಕರ ತೀರ್ಮಾನವೇ ಅಂತಿಮ, ಹಾಡಿನ ವೀಡಿಯೋವನ್ನು ಕಳುಹಿಸಬೇಕಾದ ಸಂಖ್ಯೆ : 9731963325

ಯಕ್ಷ ಹಾಸ್ಯ ವೈಭವ :
ಯಕ್ಷ ತೆಲಿಕೆ ತಂಡದಿಂದ ಯಕ್ಷ-ಯುವ-ರತ್ನ ಧೀರಜ್ ರೈ ಸಂಪಾಜೆ ಇವರ ಸಾರಥ್ಯದಲ್ಲಿ ಬೆಳಿಗ್ಗೆ ಗಂಟೆ 10:00 ರಿಂದ ದಿನೇಶ್ ಕೋಡಪದವು, ದಿನೇಶ್ ರೈ ಕಡಬ, ಸುಂದರ್ ಬಂಗಾಡಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸುಂದರ್ ರೈ ಮಂದಾರ ಇವರ ಕೂಡುವಿಕೆಯಲ್ಲಿ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮವು ಜೆಸಿ ಉತ್ಸವದಲ್ಲಿ ನಡೆಯಲಿದೆ.



