ಬೆಳ್ತಂಗಡಿ, ಫೆ. 20 : ಸುವರ್ಣಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ “ಜೋಡು ಜೀಟಿಗೆ” ಸತ್ಯೋದು ಸಾದಿಗ್‌ಧರ್ಮೊದ ಬೊಲ್ಪು’ ಎಂಬ ತುಳು ಜನಪದ ನಾಟಕ ಫೆ.20ರಂದು ಸಂಜೆ 7ಕ್ಕೆ ಪ್ರದರ್ಶನವಾಗಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ. 19ರಂದು ಪ್ರದರ್ಶನಗೊಳ್ಳಬೇಕಿದ್ದ “ಜೋಡು ಜೀಟಿಗೆ” ನಾಟಕವು ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿತು. ಇಂದು ಸಂಜೆ 07 ಗಂಟೆಗೆ ಸರಿಯಾಗಿ ಮಾರಿಗುಡಿ ಮೈದಾನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

