ಪಂಜಾಬ್ : ಮೊಹಾಲಿಯಲ್ಲಿ ಕಬಡ್ಡಿ ಆಟಗಾರನೋರ್ವನನ್ನು ಪಂದ್ಯಾಟದ ವೇಳೆಯೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ.
ರಾಣಾ ಬಾಲಚೌರಿಯಾ ಹತ್ಯೆಯಾದ ಕಬಡ್ಡಿ ಆಟಗಾರನಾಗಿದ್ದಾನೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸೆಲ್ಪಿ ತೆಗೆಯುವ ನೆಪದಲ್ಲಿ ರಾಣಾ ಬಾಲಚೌರಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬಿಹಾ ಗ್ಯಾಂಗ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎನ್ನಲಾಗಿದೆ. ಮೃತ ಆಟಗಾರ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಆಶ್ರಯ ನೀಡಿದ್ದ ಎಂದು ಹೇಳಿಕೊಂಡಿದೆ.
ಸೆಲ್ಪಿ ತೆಗೆಯುವ ನೆಪದಲ್ಲಿ ಮೂವರು ದಾಳಿಕೋರರು ರಾಣಾ ಬಳಿ ಬಂದು ಗುಂಡಿಕ್ಕಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಣಾ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

