ಕಲ್ಮಂಜ : ಕೆಲವು ದಿನಗಳ ಹಿಂದೆ ಗ್ರಾಮದ ಮದಿಮಲ್ ಕಟ್ಟೆ ಎಂಬಲ್ಲಿ ಯಾವುದೋ ಅಪರಿಚಿತ ವಾಹನದ ಅಡಿಗೆ ಬಿದ್ದು ನಾಗರ ಹಾವೊಂದು ಸಾವನ್ನಪ್ಪಿತ್ತು. ನಾಗರ ಹಾವಿನ ಅಂತ್ಯಸಂಸ್ಕಾರವನ್ನು ಸ್ಥಳೀಯ ಸಂಘಟನೆಯ ಯುವಕರು ತಮ್ಮ ಮುತುವರ್ಜಿಯಲ್ಲಿ ನೆರವೇರಿಸಿದ್ದಾರೆ.

ಸಾವನ್ನಪ್ಪಿದ ನಾಗರಹಾವಿನ ಅಂತ್ಯಸಂಸ್ಕಾರವನ್ನು ಮುಂಡ್ರುಪ್ಪಾಡಿ ಶ್ರೀ ಶಶಿಧರ್ ಭಟ್ ಇವರ ಮನೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಮಂಜ, ಸಂಗಮ ಶ್ರೀ ಯುವಕ ಮಂಡಲ ಹಾಗೂ ಊರವರ ಸಹಕಾರದೊಂದಿಗೆ ನಡೆಸಲಾಗಿದೆ. ಈ ಸಂಧರ್ಭದಲ್ಲಿ ಜಗನ್ನಾಥ ಶೆಟ್ಟಿ ಮದಿಮಲ್ ಕಟ್ಟೆ, ಅನಿಲ್ ಗೌಡ ಮದಿಮಲ್ ಕಟ್ಟೆ, ಸಂದೀಪ್ ಎಸ್ ಪರಾರಿಮಜಲು, ಮುರಳಿ ಗೌಡ ಬನದಬೈಲು, ನಯನ್, ರಕ್ಷಿತ್, ಸತ್ಯಪ್ರಸಾದ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

