ಕಲ್ಮಂಜ : ಶಾಸಕ ಹರೀಶ್ ಪೂಂಜಾರಿಂದ ಶಾಲಾ ಮೈದಾನ ವಿಸ್ತರಣೆಗೆ 5 ಲ.ರೂ ಅನುದಾನದ – ಕಾಮಗಾರಿ ಪೂರ್ಣ

ಕಲ್ಮಂಜ, ಡಿ. 09 : ಶಾಸಕ ಹರೀಶ್ ಪೂಂಜಾ ಅವರು ನೀಡಿದ 5.00 ಲಕ್ಷ ಅನುದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ, ಇದರ ಆಟದ ಮೈದಾನವನ್ನು ವಿಸ್ತರಣೆಗೊಳಿಸಲಾಗಿದೆ. ಶಾಲಾ ಮಕ್ಕಳ ಆಟೋಟ ಚಟುವಟಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಊರವರು ಶಾಸಕರಿಗೆ ಮನವಿಯನ್ನು ಸಲ್ಲಿಸಿದ್ದರು. ಇದೀಗ ಆಟದ ಮೈದಾನ ವಿಸ್ತರಣೆಗೊಂಡಿದೆ.

Advertisement

ಇನ್ನು, ಕೆಲವೇ ದಿನಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ, ಇದರ ಶತಮಾನೋತ್ಸವ ಸಂಭ್ರಮ ನಡೆಯಲಿದ್ದು, ಈ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾ ಅವರು ಸಕಾಲದಲ್ಲಿ ಒದಗಿಸಿದ ಅನುದಾನವು ಬಹಳಷ್ಟು ಅನುಕೂಲವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಇನ್ನು, ಶಾಸಕರು ಅನುದಾನ ಒದಗಿಸಿ ಮೈದಾನ ವಿಸ್ತರಣೆಗೊಳಿಸಲು ಸಹಕರಿಸಿದ್ದಕ್ಕೆ ಶಾಲಾ ಮಕ್ಕಳು, ಶಿಕ್ಷಕ ವೃಂದ, ಪೋಷಕರು, ಶಾಲಾಭಿವೃದ್ದಿ ಸಮಿತಿ, ಹಳೆವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಪುತ್ತೂರು, ಬೆಳ್ತಂಗಡಿ, ಸುಳ್ಯ  ಕಡಬ  ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಸಾಲ ವಸೂಲಿಗೆ ಆರ್‌ಬಿಐ ಹೊಸ ರೂಲ್ಸ್ – ರಿಕವರಿ ಏಜೆಂಟ್‌ಗಳು ಬೇಕಾಬಿಟ್ಟಿ ಸಾಲಗಾರರ ಮನೆಗೆ ಬರುವಂತಿಲ್ಲ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚನೆ – ಸಾಮಾಜಿಕ ಜಾಲತಾಣದ ಜಾಹೀರಾತು ನಂಬುವ ಮುನ್ನ ಎಚ್ಚರ !

⚠️ Contents are protected on this website.