ಕಂಬಳದ ಮೇಲೆ ಇಲಾಖೆಗಳ ಹದ್ದಿನ ಕಣ್ಣು – ಮೈಕ್ ಬಹುತೇಕ ಬಂದ್ ! ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ ಕಂಬಳ !

ಮಂಗಳೂರು : ಜಾನಪದ ಕ್ರೀಡೆಯಾಗಿರುವ ಕಂಬಳದ ಮೇಲೆ ಈ ಬಾರಿ ಜಿಲ್ಲಾಡಳಿತದ ವಿವಿಧ ಇಲಾಖಾಧಿಕಾರಿಗಳೇ ಭೇಟಿ ನೀಡಿ ವರದಿ ನೀಡುತ್ತಿದ್ದಾರೆ. ಯಾವುದೇ ಹಿಂಸೆ ಆಗದಂತೆ ಎಚ್ಚರ ವಹಿಸುವಂತೆ ನ್ಯಾಯಾಲಯದ ಆದೇಶದಂತೆಯೇ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲದೆ, ಧ್ವನಿವರ್ಧಕ ನಿಯಮಗಳನ್ನೂ ಕೂಡಾ ಪಾಲಿಸಿಕೊಂಡು ಹೋಗಬೇಕಾದ ಕಾರಣ ಬಹಳ ಎಚ್ಚರಿಕೆಯನ್ನು ಕಂಬಳ ಆಯೋಜಕರು ಮಾಡುತ್ತಿದ್ದಾರೆ.

Advertisement

ಪ್ರಸಕ್ತ ನಡೆಯುತ್ತಿರುವ ಎಲ್ಲ ಕಂಬಳಗಳಿಗೆ ಪೊಲೀಸ್, ಪಶುಪಾಲನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ಬೆಟ್ಟಿಂಗ್ ಸಹಿತ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದ್ದು, 3 ವರ್ಷದ ಒಳಗಿನ ಕೋಣಗಳ ಓಟ ನಡೆಸದಂತೆ ಹಾಗೂ ಯಾವುದೇ ಕೋಣಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಲು ಪಶುಪಾಲನ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಸ್ಥಳದಲ್ಲಿ ಇತರ ಯಾವುದೇ ನಿಯಮಾವಳಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ತಹಶೀಲ್ದಾರ್‌ಅಧೀನದ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ರಾತ್ರಿ ಹಗಲು ಕಂಬಳ ಆಯೋಜನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ 10.30 ಗಂಟೆಯ ಬಳಿಕ ಮುಂಜಾನೆವರೆಗೆ ದೊಡ್ಡ ಮಟ್ಟದಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿಲ್ಲ. ಕಂಬಳ ಆಯೋಜನೆ ಆಗುವ ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ/ಆಕ್ಷೇಪ ಆಗದಂತೆ ಎಚ್ಚರ ವಹಿಸುತ್ತ ರಾತ್ರಿ 10.30ರ ಬಳಿಕ ಕೇವಲ ಕಂಬಳ ಕರೆಯಲ್ಲಿ ಮಾತ್ರ ಸಣ್ಣ ಸ್ವರದೊಂದಿಗೆ ಮೈಕ್ ಬಳಕೆ ಸದ್ಯ ನಡೆಯುತ್ತಿದೆ. ಉಳಿದಂತೆ ವೇದಿಕೆ ಸಹಿತ ಇತರ ಭಾಗದಲ್ಲಿ ಬಳಕೆಯಾಗುವ ಧ್ವನಿವರ್ಧಕ ಸಂಪೂರ್ಣ ಬಂದ್ ಮಾಡಲಾಗುತ್ತಿದೆ ಎಂದು ಕಂಬಳ ಸಂಘಟಕರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಸರ್ಕಾರದ ನಿಯಮದಡಿಯಲ್ಲೇ, ಕಂಬಳ ಆಯೋಜನೆಗೊಳ್ಳುತ್ತಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕಾಗಿದೆ ಎಂಬುದು ಕೂಡಾ ಕಂಬಳ ಪ್ರಿಯ ಕೂಗು..

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.