ಮಂಗಳೂರು : ಸುಪ್ರಿಂ ಕೋರ್ಟ್ ಕಂಬಳಕ್ಕೆ ಬೆಂಬಲ ನೀಡಿರುವುದು ಸಂತಸ ತಂದಿದೆ – ಅಧ್ಯಕ್ಷ ಬೆಳಪು ದೇವೀಪ್ರಸಾದ್‌ ಶೆಟ್ಟಿ

Advertisement

ಮಂಗಳೂರು, ಮಾ. 11 : ಪೇಟಾ ದವರ ದಾವೆಯನ್ನು ವಜಾಗೊಳಿಸಿದ ಸುಪ್ರಿಂ ಕೋರ್ಟ್ ಕಂಬಳಕ್ಕೆ ಬೆಂಬಲ ನೀಡಿರುವುದು ಕರಾವಳಿ ಭಾಗದ ರೈತಾಪಿ ವರ್ಗಕ್ಕೆ ಸಂತಸ ತಂದಿದೆ ಎಂದು ರಾಜ್ಯ ಕಂಬಳ ಅಸೋಸಿಯೇಶನ್‌ ಅಧ್ಯಕ್ಷ ಬೆಳಪು ದೇವೀಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

ಸಂಸ್ಕೃತಿ, ಕ್ರೀಡೆಯನ್ನು ದೇಶದ ಯಾವ ಮೂಲೆಯಲ್ಲಿಯೂ ನಡೆಸಲು ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದರಿಂ ದಾಗಿ ಕಂಬಳ ರಾಷ್ಟ್ರೀಯ ಕ್ರೀಡೆ ಯಾಗಿ ಮೂಡಿಬಂದಿದೆ. ಕಂಬಳ ವನ್ನು ಮೈಸೂರು, ಬೆಂಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಸಹಿತ ಮುಂಬಯಿ ಭಾಗದಲ್ಲಿಯೂ ನಡೆಸುವ ಬಗ್ಗೆ ಬೇಡಿಕೆ ಬಂದಿತ್ತು. ಇದೀಗ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಂಬಳವು ಮೂಲಸ್ವರೂಪದೊಂದಿಗೆ ವಿಶ್ವಮಾನ್ಯವಾಗುವ ಕನಸಿಗೆ ನ್ಯಾಯಾಲಯದ ತೀರ್ಪು ಶಕ್ತಿ ನೀಡಿದೆ ಎಂದು ಹಿರಿಯ ಕಂಬಳ ತಜ್ಞ ಗುಣಪಾಲ ಕಡಂಬ ತಿಳಿಸಿದ್ದಾರೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ