ಕನ್ಯಾಡಿ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದಲ್ಲಿ ಮಹಾ ಬ್ರಹ್ಮರಥೋತ್ಸವ

Advertisement

ಕನ್ಯಾಡಿ, ಮಾ. 28 : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದಲ್ಲಿ ಜಗದ್ಗುರು ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ 66 ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ರಾಮ ನವಮಿ ಮಾ.27ರಂದು ಬೆಳಿಗ್ಗೆ ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ವಾಗ್ದವಿ ಯಜ್ಞ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮದ್ಯಾಹ್ನ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರಪೂಜೆ, ಮೂರ್ತಿ ಬಲಿ, ಪಾಲಕಿ ಬಲಿ, ಹಗಲು ಉತ್ಸವ ವಿಶೇಷ ಮಹಾ ಪೂಜೆ ನಡೆಯಿತು.

Advertisement

ರಾತ್ರಿ ಭೂತ ಬಲಿ, ಶ್ರೀ ದೇವರ ಪಾಲಕಿ ಉತ್ಸವ, ಕ್ಷೇತ್ರದ ರಕೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಮಹಾಬ್ರಹ್ಮ ರಥೋತ್ಸವ ಭಕ್ತಿ-ಭಾವದೊಂದಿಗೆ ವಿಜ್ರಂಭಣೆಯಿಂದ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಸಚಿವ ಮಾಂಕಾಳ್ ಎಸ್. ವೈದ್ಯ ಸೇರಿದಂತೆ ಅನೇಕ ಗಣ್ಯರು, ಶ್ರೀ ಗುರುದೇವ ಮಠದ ಟ್ರಸ್ಟ್‌ಗಳು, ಶ್ರೀ ರಾಮ ಕ್ಷೇತ್ರ ರಿಲಿಜಿಯಸ್‌ ಟ್ರಸ್ಟ್ ಟ್ರಸ್ಟ್‌ಗಳು, ಶ್ರೀ ರಾಮ ಕ್ಷೇತ್ರ ಅಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಪದಾಧಿಕಾರಿಗಳು ಸದಸ್ಯರು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

https://www.instagram.com/reel/DWaoZ-PjVtW/?utm_source=ig_web_copy_link&igsh=MzRlODBiNWFlZA==

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ