ಕನ್ಯಾಡಿ : ಸೇವಾಭಾರತಿ (ರಿ.), ಕನ್ಯಾಡಿ ನೇತೃತ್ವದಲ್ಲಿ ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರ ಉದ್ಘಾಟನೆ

ಕನ್ಯಾಡಿ, ಜೂ.15 : ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) , ಧರ್ಮಸ್ಥಳ, ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 1 ತಿಂಗಳ ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಜೂನ್ 15 ರಂದು ಕನ್ಯಾಡಿ ಸೇವಾನಿಕೇತನದಲ್ಲಿ ನಡೆಯಿತು.

Advertisement

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.), ನಿರ್ದೇಶಕರಾದ ಶ್ರೀ ನೀಲಕಂಠ ಶೆಟ್ಟಿಯವರು ಶಿಬಿರಕ್ಕೆ ಚಾಲನೆ ನೀಡಿ, ಫ್ಯಾಬ್ರಿಕ್ ಪೇಯಿಂಟ್ ಡಿಸೈನ್ ಎಂಬುದು ಕೇವಲ ಒಂದು ಕಲೆ ಮಾತ್ರವಲ್ಲ, ಅದು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣದ ಉತ್ತಮ ಅವಕಾಶವಾಗಿದೆ. ಈ ತರಬೇತಿಯ ಮೂಲಕ ನೀವು ಹೊಸ ಕೌಶಲ್ಯಗಳನ್ನು ಕಲಿತು ನಿಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಿ ಎಂದು ಶುಭಹಾರೈಸಿದರು.

ಸೇವಾಭಾರತಿ ಅಧ್ಯಕ್ಷರಾದ ಹಾಗೂ ಸೇವಾಧಾಮ ಸಂಸ್ಥಾಪಕರಾದ ಶ್ರೀ ವಿನಾಯಕ ರಾವ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಯಶಸ್ಸು ಸಾಧಿಸಲು ದೊಡ್ಡ ಅವಕಾಶಗಳೇ ಬೇಕೆಂದಿಲ್ಲ, ಕಲಿಯುವ ಮನಸ್ಸು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಸಾಕು. ಕಲಿಕೆಯ ಹಂಬಲ ಇರುವ ವ್ಯಕ್ತಿಗೆ ಯಾವುದೇ ಕ್ಷೇತ್ರ ಕಷ್ಟವಾಗುವುದಿಲ್ಲ. ಇಂತಹ ತರಬೇತಿಗಳು ನಮ್ಮ ಪ್ರತಿಭೆಯನ್ನು ಗುರುತಿಸಲು, ಅದನ್ನು ಬೆಳೆಸಿಕೊಳ್ಳಲು ಹಾಗೂ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ನೆರವಾಗುತ್ತವೆ. ಆದ್ದರಿಂದ ಈ ತರಬೇತಿಯನ್ನು ಒಂದು ಅವಕಾಶವಾಗಿ ಸ್ವೀಕರಿಸಿ, ಪ್ರತಿಯೊಬ್ಬರೂ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ನುಡಿದರು.

ಮಂಗಳೂರು ವಿಭಾಗದ ರಾ. ಸ್ವ. ಸಂಘದ ಘುಮಂತು ಕಾರ್ಯ ವಿಭಾಗ ಪ್ರಮುಖರಾದ ಶ್ರೀ ಸುದರ್ಶನ್ ಕೆ ವಿ, ಉದ್ಯಮಿ ಶ್ರೀಮತಿ ಸ್ವಾತಿ ವಿಶ್ವಜಿತ್, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಮಮತಾ ಬಿ, ಫ್ಯಾಷನ್ ಡಿಸೈನರ್ ಮತ್ತು ತರಬೇತುದಾರರಾದ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 20 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿಯ ಸದಸ್ಯರಾದ ಶ್ರೀಮತಿ ಸವಿತಾ ಎಂ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಚಂದ್ರಾವತಿ ನಿರೂಪಿಸಿ, ಸೇವಾಭಾರತಿ ಡಾಕ್ಯುಮೆಂಟೇಷನ್ ಮಾನಿಟರಿಂಗ್ ಮತ್ತು ಇವೆಲ್ಯೂಷನ್ ಕಾರ್ಡಿನೇಟರ್ ಕು. ಸುಮ ಧನ್ಯವಾದವಿತ್ತರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.