ಕರಾವಳಿಯಲ್ಲಿ ಸದ್ದು ಮಾಡುತ್ತಿದೆ “ಕಟ್ಟೆಮಾರ್ ಸಿನಿಮಾ” – ವಿನೂತನ ಶೈಲಿಯ ಟ್ರೈಲರ್ ಗೆ ಜನತೆ ಫಿದಾ !

ಮಂಗಳೂರು, ಜ. 16 : ಇಡೀ ತುಳುನಾಡಿನಲ್ಲಿ ಇದೀಗ ಒಂದು ಸಿನಿಮಾದ ಹೆಸರು ಬಾರೀ ಸದ್ದು ಮಾಡುತ್ತಿದೆ.ವಿಭಿನ್ನ ಕಥೆಯೊಂದಿಗೆ- ವಿನೂತನ ಶೈಲಿಯೊಂದಿಗೆ ದೈವದ ಕಥೆಯನ್ನು ಹೇಳಲು ಬರುತ್ತಿದೆ ಕಟ್ಟೆಮಾರ್ ಎನ್ನುವ ಸಿನಿಮಾ ಕಟ್ಟೆಮಾರ್ ಸಿನಿಮಾ ವಿನೂತನ ಕಥೆಯೊಂದಿಗೆ ತಯಾರಾಗಿದ್ದು ಟ್ರೈಲರ್ ಅಂತೂ ನಿರೀಕ್ಷೆಯನ್ನು ಹೆಚ್ಚಿಸಿದೆ ಲಂಚುಲಾಲ್ ಕೆ.ಎಸ್ ನಿರ್ಮಾಣದ ಹಾಗೂ ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ನಿರ್ದೇಶನದ ಸಿನಿಮಾ ಇದಾಗಿದ್ದು, ಇದೀಗ ಚಿತ್ರದ ಟ್ರೈಲರ್ ನೋಡಿ ಎಲ್ಲರೂ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದ್ದಾರೆ.

Advertisement

ಇನ್ನು ಈ ಸಿನಿ ಪ್ರೇಕ್ಷಕರು ಮಾತ್ರಾ ಯಾವಗ ಜ.23 ಬರುತ್ತೆ ಎಂದು ಕಾದು ಕುಳಿತಿದ್ದಾರೆ. ಇನ್ನು ಈ ಚಿತ್ರದ ಪ್ರೀಮಿಯರ್ ಶೋ ಜ.19ರಂದು ನಡೆಯಲಿದೆ. ಸು.ಫ್ರಂಮ್ ಸೊ. ಸಿನಿಮಾದ ಜೆ.ಪಿ ತೂಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವರಾಜ್ ಶೆಟ್ಟಿ ಟ್ರೈಲರ್ ನಲ್ಲೇ ರಗಡ್ ಲುಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಈ ಸಿನಿಮಾದ ನಿರ್ಮಾಪಕ ಲಂಚುಲಾಲ್ ಕೆ.ಎಸ್ ಈ ಸಿನಿಮಾದಲ್ಲಿ ನಟಿಸಿದ್ದು. ಟ್ರೈಲರ್ ನಲ್ಲೇ ಈ ಸಿನಿಮಾ ಎಲ್ಲರ ಮನ ಗೆದ್ದಿದೆ.

ಟ್ರೈಲರ್ ನೋಡಿ ಜೈ ಸಿನಿಮಾದ ನಟ ನಿರ್ದೇಶಕ ರೂಪೇಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಸಿದ್ದಾರೆ. ಹೊಸ ತಂಡದೊಂದಿಗೆ ಈ ಸಿನಿಮಾ ಮೂಡಿ ಬಂದಿದ್ದು ಒಟ್ಟಾರೆಯಾಗಿ ಹೇಳುವುದಾರೆ ಒಂದು ದೈವದ ಕಥೆಯನ್ನು ಹೇಳಲು ವಿನೂತನ ಶೈಲಿಯೊಂದಿಗೆ ಕಟ್ಟೆಮಾರ್ ಸಿನಿಮಾ ಬರುತ್ತಿದೆ.ಜ.23ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.