ಗುರುವಾಯನಕೆರೆ : “ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಸುಧಾಮ ಗಾರ್ಡನ್” ಇದರ ಅದ್ಧೂರಿ ಶುಭಾರಂಭ

ಗುರುವಾಯನಕೆರೆ, ಜು. 7 : “ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಸುಧಾಮ ಗಾರ್ಡನ್” ಇದರ ಅದ್ಧೂರಿ ಶುಭಾರಂಭವು ನೆರವೇರಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ್ ಹೋಟೆಲ್ ಗೆ ಚಾಲನೆ ನೀಡಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡ್ಡೆಟ್ನಾಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

Advertisement

ದೀಪ ಬೆಳಗಿಸಿ ಶುಭ ಹಾರೈಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡ್ಡೆಟ್ನಾಯ ಅವರು, ಈ ಭಾಗದಲ್ಲಿ ಒಂದು ಉತ್ತಮ ಸಸ್ಯಹಾರಿ ಹೋಟೆಲ್ ನ ಕೊರತೆಯಿತ್ತು. ಅದು ಇಂದು ನೀಗಿದೆ. ಶುದ್ಧ ಮತ್ತು ಸಾತ್ವಿಕ ಸಸ್ಯಹಾರದ ಹೋಟೆಲ್ ಶುಭಾರಂಭ ಕಂಡಿರೋದು ಬಹಳ ಸಂತೋಷವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಹೋಟೆಲ್ ಉದ್ಯಮ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕು ಅತ್ಯಂತ ವೇಗವಾಗಿ ಮತ್ತು ಸಮಗ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರ್ಯಾಂಡ್ ಹೋಟೆಲ್ ಗಳ ಅಗತ್ಯವಿತ್ತು. ಬೆಳ್ತಂಗಡಿಯ ಪವಾಸೋದ್ಯಮಕ್ಕೆ “ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಸುಧಾಮ ಗಾರ್ಡನ್” ಶಕ್ತಿಯನ್ನು ನೀಡಿದೆ. ದೂರದೂರಿನ ಆಗಮಿಸುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಪುಣೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಮಾಲಕ ದಿನೇಶ್ ಅವರು ಅಲ್ಲಿನ ಸವಿರುಚಿಯನ್ನು ಇಲ್ಲಿಯೂ ಉಣಬಡಿಸಲಿದ್ದಾರೆ. ಇಲ್ಲಿನ ನಾನ್ ಎಸಿ – ಎಸಿ ರೂಂ, ಸುಧಾಮ ಗಾರ್ಡನ್, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಬಹಳಷ್ಟು ಆಕರ್ಷಣೀಯವಾಗಿದೆ ಎಂದರು.

ಮಾಲಕರಾದ ಶ್ರೀ ದಿನೇಶ್ ಶೆಟ್ಟಿ ಅವರು ಮಾತನಾಡಿ, ನಮಗೊಂದು ಈ ಭಾಗದಲ್ಲಿ ಹೋಟೆಲ್ ಉದ್ಯಮ ಆರಂಭಿಸುವ ಕನಸು ಇತ್ತು. ಅದು ಇಂದು ನೆರವೇರಿದೆ. ನಮ್ಮಲ್ಲಿ ಶುದ್ಧತೆಗೆ ಯಾವುದೇ ಕೊರತೆಯಿಲ್ಲದೆ ರುಚಿಕರ ಖಾದ್ಯಗಳನ್ನು ನೀಡುತ್ತೇವೆ. ತಾಲೂಕಿನ ಜನತೆಗೆ ಹಾಗೂ ಪ್ರವಾಸಿಗರಿಗೆ ವಿಶೇಷವಾದ ಖಾದ್ಯಗಳನ್ನು ನೀಡುವ ಆಸೆಯಿದೆ. ಅಂತೆಯೇ ನಾವಿಂದು ಹೋಟೆಲ್ ಉದ್ಯಮವನ್ನು ಆರಂಭಿಸಿದ್ದು, ನಿಮ್ಮೆಲ್ಲರ ಸಹಕಾರ ನಮ್ಮ ಮೇಲಿರಲಿ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿ ತಧಿಕಾರಿ ಶಿವಪ್ರಸಾದ್ ಅಜಿಲ, ಎಸ್.ಡಿ.ಎಂ ಐಟಿ ವಿಭಾಗದ ಸಿಇಓ ಪೂರನ್ ವರ್ಮ, ಅರಮಲೆಬೆಟ್ಟ ಕ್ಷೇತ್ರದ ಆಡಳಿತ ಮೊಕ್ತಸರ ಸುಕೇಶ್ ಕುಮಾರ್ ಕಡಂಬು, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ, ವಿದ್ವತ್ ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ರೈ, ಉಜಿರೆ ರಬ್ಬರು ಸೊಸೈಟಿ ನಿವೃತ್ತ ಸಿಇಓ ರಾಜು ಶೆಟ್ಟಿ, ಉದ್ಯಮಿ ಸೀತರಾಮ ಶೆಟ್ಟಿ ವೈಭವ್, ವೇಣೂರು ಪಿಎಸ್‌ಐ, ಉಜಿರೆ ಗ್ರಾ.ಪಂ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ಉದ್ಯಮಿ ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ, ವೇಣೂರು ಪಿಎಸ್ಐ ವಾಮನ, ಉಪಸ್ಥಿತರಿದ್ದರು.

ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಪಾಲುದಾರರಾದ ದಿನೇಶ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಪೈ, ಲಕ್ಷ್ಮೀಶ್ ಶೆಟ್ಟಿ, ರಘು ಶೆಟ್ಟಿ ಕಜೆ ಆಗಮಿಸಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಇಂದುಮತಿ ಬೆಳ್ತಂಗಡಿ, ಸರಿತಾ ದಿನೇಶ್ ಶೆಟ್ಟಿ, ಸಾನಿಯಾ ಶೆಟ್ಟಿ ಹಾಗೂ ಬಂಧು ಮಿತ್ರರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವಸಂತ ಶೆಟ್ಟಿ ಶ್ರದ್ಧಾ ಬೆಳ್ತಂಗಡಿ, ಶಶಿರಾಜ್ ಶೆಟ್ಟಿ ಜಿ.ಕರೆ, ಉಮೇಶ್ ಶೆಟ್ಟಿ ಉಜಿರೆ, ಪ್ರಕಾಶ್ ಜೈನ್ ಡೇವುಣಿ, ಮಂಜುನಾಥ ರೈ, ರವೀಂದ್ರ ಶೆಟ್ಟಿ ಬಳಂಜ, ನಿರಂಜನ್ ಶೆಟ್ಟಿ ಉಜಿರೆ, ರಘರಾಮ್ ಶೆಟ್ಟಿ ಸಾಧಾನ, ಪ್ರಜ್ವಲ್ ರೈ ವಿದ್ವತ್, ಎಂ ಮಮತಾ ಶೆಟ್ಟಿ ಗುರುವಾಯನಕೆರೆ, ಕಾಶಿನಾಥ್ ಗುರುವಾಯನಕೆರೆ, ನಾಗೇಶ್ ಕೋಟ್ಯಾನ್ ನಿಸರ್ಗ, ಪ್ರಕಾಶ್ ಕಾಮತ್ ಜಿ.ಕೆರೆ, ಸುನೀಶ್ ಕುಮಾರ್ ಕಡಂಬು, ಜಯರಾಮ್ ಶೆಟ್ಟಿ ಧರ್ಮಸ್ಥಳ, ಚಿದಾನಂದ ಇಡ್ಯ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಬಿ.ಎಸ್ ಕುಲಾಲ್, ಸಂತೋಷ್ ಪಿ ಕೋಟ್ಯಾನ್ ಬಳಂಜ, ಪ್ರಸಾದ್ ಶೆಟ್ಟಿ ಏಣಿಂಜೆ, ವಿಜಯ್ ಜೈನ್ ನಾವರ ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ನಿರೂಪಕಿ ಶ್ರೇಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಗೀತ ರಸಮಂಜರಿ ನಡೆಯಿತು. ಕಾರ್ಯಕ್ರಮದ ಬಳಿಕ ರುಚಿಕರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.