ಗುರುವಾಯನಕೆರೆ, ಜು. 6 : ಸಸ್ಯಹಾರಿ ಪ್ರಿಯರ ಬಹುನಿರೀಕ್ಷಿತ ವೆಜ್ ರೆಸ್ಟೋರೆಂಟ್ ಇಂದು (ಜುಲೈ 06) ಸಂಜೆ 07 ಗಂಟೆಗೆ ಶುಭಾರಂಭಗೊಳ್ಳಲಿದೆ.
ಗುರುವಾಯನಕೆರೆ ಅಯ್ಯಪ್ಪ ಭಜನಾ ಮಂದಿರದ ಬಳಿಯ “ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್” ಅನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಪುಜ್ವಲನೆಗೈಯಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಧಾರ್ಮಿಕ ಮುಖಂಡರು, ಹಲವಾರೂ ಗಣ್ಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ.
ಶ್ರೀ ಕೃಷ್ಣ ಫ್ಯಾಮಿಲಿ ವೆಜಿಟೇರಿಯನ್ ರೆಸ್ಟೋರೆಂಟ್ ನಲ್ಲಿ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಶೈಲಿಯ ಆಹಾರ ಖಾದ್ಯಗಳು, ಚಾಟ್ಸ್, ಜ್ಯೂಸ್ ಹಾಗೂ ವೈವಿಧ್ಯಮಯ ಶುಚಿ – ರುಚಿಕರ ಖಾದ್ಯಗಳು, ಸುದಾಮ ಗಾರ್ಡನ್ ಓಪನ್ ಪಾರ್ಟಿ ಏರಿಯಾ ಇಲ್ಲಿ ನಿಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಕುಟುಂಬ ಸಮಾರಂಭ, ಗೆಟ್ ಟುಗೆದರ್ ಹಾಗೂ ಇನ್ನಿತರ ಸಮಾರಂಭಗಳನ್ನು ಆಕರ್ಷಣೀಯವಾಗಿ ಆಚರಿಸಿಕೊಳ್ಳಬಹುದಾಗಿದೆ.


