ಮಂಗಳೂರು, ಫೆ. 12 : ಮಂಜೇಶ್ವರದ ಕಾರಣಿಕ ಕ್ಷೇತ್ರ ಕುಡೇಲಿನಲ್ಲಿ ಪತ್ರೀ ವರ್ಷದಂತೆ ಈ ಬಾರಿಯೂ ಕೂಡ ನೇಮೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಫೆ.13 ಮತ್ತು 14ರಂದು ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಫೆ.13ರಂದು ನೇಮೋತ್ಸವದ ಚಪ್ಪರ ಏರಿಸುವುದು.ಬಳಿಕ ಶ್ರೀ ಕ್ಷೇತ್ರದ ತಂತ್ರಿಗಳಿಂದ ಶ್ರೀ ನಾಗದೇವರಿಗೆ ಆಶ್ಲೇಷಾ ಪೂಜೆ ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆ, ದೈವಗಳಿಗೆ ಹೂವಿನ ಪೂಜೆ ಸತ್ಯನಾರಾಯಣ ಪೂಜೆ ನಡೆಯಲಿದೆ ಮತ್ತು ಅದೇ ದಿನ ಸಂಜೆ ಶ್ರೀ ದೈವಗಳ ಭಂಡಾರ ದೈವಸ್ಥಾನದಿಂದ ಹೊರಟು, ಭಂಡಾರ ಏರುವುದು. ರಾತ್ರಿ 8 ಗಂಟೆಗೆ ಮಹಿಷಂದಾಯ ದೈವದ ನೇಮ ನಂತರ ಅನ್ನಸಂತರ್ಪಣೆ ರಾತ್ರಿ 10 ಗಂಟೆಗೆ ವಾಜಂಗಳಾಯ ಮತ್ತು ಬಂಟ ದೈವದ ನೇಮ ನಂತರ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.
ಫೆ.14ರ ಶನಿವಾರ ರಾತ್ರಿ ಕಲ್ಲುರ್ಟಿ ಪಂಜುರ್ಲಿ ದೈವದ ಕೋಲ – ನಂತರ ಅನ್ನಸಂತರ್ಪಣೆ ಬಳಿಕ ಕೊರತಿ ಕೋಲ – ಗುಳಿಗ ದೈವಕ್ಕೆ ಕೆಂಡ ಸೇವೆ ನಡೆಯಲಿದೆ.

