ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಇಲ್ಲಿನ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ, ಅಥರ್ವ ಶೀರ್ಷ ಗಣಯಾಗ ಹಾಗೂ ಮಹಾಚಂಡಿಕಾ ಯಾಗವು ಡಿಸೆಂಬರ್ ೦೬, ೦೭ ಹಾಗೂ ೦೮ರಂದು ವೈಭವದಿಂದ ನಡೆಯಲಿದೆ.
ಡಿಸೆಂಬರ್ 06

ಅರ್ಧ ಏಕಾಹ ಭಜನೆ, ಹೊರೆಕಾಣಿಕೆ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಉಗ್ರಾಣ ಉದ್ಘಾಟನೆ ಕಾರ್ಯಕ್ರಮವು ನಡೆಯಲಿದೆ. ಸಂಜೆ 05:00 ಗಂಟೆಯಿಂದ ಹಲವಾರು ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ. ಸಂಜೆ ಗಂಟೆ 06:00ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಲಾಯಿ ಕುಡ್ಲ ಇವರಿಂದ ಅರದಲ ಅಣಿ ತಿರಿ ದಾಂತಿನ ಪಾಡ್ದನ ಆಧಾರಿತ ತುಳು ನಾಟಕ ಪರಮಾತ್ಮೆ ಪಂಜುರ್ಲಿ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 07

ಅರ್ಧ ಏಕಾಹ ಭಜನೆ ಕಾರ್ಯಕ್ರಮ, ಪುಣ್ಯಾಹ ವಾಚನ, ನವಕ ಕಲಶ, ಅಧಿವಾಸ ಪ್ರಧಾನ ಹೋಮ, ಗಣಪತಿ ಹೋಮ, ಸುಮಹೂರ್ತದಲ್ಲಿ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಯಾಗ ಮಂಟಪದಲ್ಲಿ ಅಥರ್ವ ಶೀರ್ಷ ಗಣಯಾಗ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ ಗಂಟೆ 04:00ರಿಂದ ಜಿಲ್ಲೆಯ ಪ್ರತಿಷ್ಠಿತ ಕಲಾ ತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ, ಪಿಲಿನಲಿಕೆ, ಕೌಡಲ ತೈಯ್ಯಂ, ಟ್ಯಾಬ್ಲೋ, ಚೆಂಡೆ, ವಾಲಗ, ಕೊಂಬು ಹಾಗೂ ಭಜನಾ ತಂಡಗಳೊಂದಿಗೆ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು, ಮಹಾಸಂಸ್ಥಾನಮ್ ಅವರನ್ನು ಯತಿವರ್ಯರೊಂದಿಗೆ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ಸಂಜೆ 05:30 ಗಂಟೆಗೆ ನೂತನ ರಾಜಗೋಪುರದ ಲೋಕಾರ್ಪಣೆ, ಶ್ರೀ ದುರ್ಗಾ ಗಣಪತಿ ಸಭಾಭವನ ಲೋಕಾರ್ಪಣೆಗೊಳ್ಳಲಿದೆ. ಸಂಜೆ 06:00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಡಿಸೆಂಬರ್ 08

ಅರ್ಧ ಏಕಾಹ ಭಜನೆ, ಪುಣ್ಯಾಹವಾಚನ ಮಹಾಚಂಡಿಕಾ ಯಾಗ, 108 ತೆಂಗಿನಕಾಯಿ ಗಣಯಾಗ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಗಂಟೆ 06:00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಹಾಗೂ ಸಂಜೆ ಗಂಟೆ 06:30ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಲಿದೆ.

