ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣೆ – ಹರೀಶ್ ಪೂಂಜಾ

ಕುಪ್ಪೆಟ್ಟಿ : ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣಾ ಸಮಾರಂಭವು ಡಿ. 6,7,8 ರಂದು, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

Advertisement

ಪ್ರಕೃತಿ ಸೌಂದರ್ಯದ ಮಧ್ಯೆ 36 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿ ಪ್ರದೇಶದಲ್ಲಿ ಶ್ರೀ ಗಣೇಶ ಭಜನಾ ಮಂಡಳಿಯನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಸರ್ಕಾರಿ ಶಾಲಾ ವಠಾರದಲ್ಲಿ ಭಜನೆ ನಡೆಯುತ್ತಿದ್ದು, ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಎಸ್. ಕೆ. ಡಿ. ಆರ್. ಡಿ. ಪಿ. ಯ ಮಾರ್ಗದರ್ಶನದಿಂದ ಹಾಗೂ ಜನರ ಸಹಕಾರದಿಂದ ನಿಧಿ ಸಂಗ್ರಹ ನಡೆದು, ದಿ.ಚಂದ್ರಾವತಿ ಬಾಲಚಂದ್ರ ಬಂಗೇರ ದಂಪತಿಯ ಪುತ್ರ ಜಯರಾಮ್ ಬಂಗೇರ ಮಾಲ್ಯಡ್ಕ ಇವರಿಂದ ದಾನವಾಗಿ ಪಡೆದ ಸುಮಾರ್ 8 ಸೆಂಟ್ಸ್ ಜಾಗದಲ್ಲಿ ಮಂದಿರ ನಿರ್ಮಿಸಲಾಯಿತು. ಸುಮಾರು ಮೂವತ್ತಾರು ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಶ್ರೀ ಮಹಾಗಣಪತಿ ದೇವರನ್ನು ಪ್ರಧಾನ ಆರಾಧ್ಯ ದೇವರಾಗಿ ಪೂಜಿಸಲಾಗುತ್ತಿದೆ. ಇದೇ ಸ್ಥಳದಲ್ಲಿ ಶ್ರೀ ಗುಳಿಗೆ ದೈವದ ಆರಾಧನೆಯೂ ನಡೆಯುತ್ತದೆ.


ಶ್ರೀಗಣೇಶ ಭಜನಾ ಮಂದಿರದಲ್ಲಿ ಭಜನಾ ಸೇವೆಯೇ ಮುಖ್ಯವಾಗಿ ನಡೆಯುತ್ತದೆ. ಪ್ರತಿ ಮಂಗಳವಾರ ಭಜನೆ ಮತ್ತು ಅನ್ನದಾನ ಸೇವೆಯನ್ನು ನಡೆಸಲಾಗುತ್ತಿದೆ. ಮಂಗಳವಾರದಂದು ಸಾಯಂಕಾಲ ಊರಿನ ಭಜನಾರ್ಥಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಿರಂತರವಾಗಿ ಭಜನಾ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 27 ಸೆಂಟ್ಸ್ ಜಾಗ ಖರೀದಿಸಿ ಸಭಾಭವನ ನಿರ್ಮಾಣ ಮಂದಿರದ ಅಭಿವೃದ್ಧಿಗಾಗಿ 2021ರಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು., ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಸುಮಾರು 27 ಸೆಂಟ್ಸ್ ಜಾಗವನ್ನು ಖರೀದಿಸಿ ಭಜನಾ ಮಂದಿರ ರಾಜಗೋಪುರ ಮತ್ತು ಗ್ರಾಮಸ್ಥರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪಯುಕ್ತವಾಗುವ ಶ್ರೀ ದುರ್ಗಾಗಣೇಶ ಸಭಾಭವನವನ್ನು 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.

ಅವರು ಡಿ.1 ರಂದು ಕುಪ್ಪೆಟ್ಟಿ ಗಣೇಶ ಭಜನಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಡಿ.೬-೮ವರೆಗೆ ಮೂರುದಿನಗಳಲ್ಲಿ ವಿವಿಧ ಧಾರ್ಮಿಕ ವೈಧಿಕ ವಿಧಿವಿಧಾನಗಳು, ಸಾಂಸ್ಕೃತಿಕ, ಧಾರ್ಮಿಕಾ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಡಿ.೭ರಂದು ಗೋಧೋಳಿ ಮುಹೂರ್ತದಲ್ಲಿ ಸಂಜೆ 6ಕ್ಕೆ ನೂತನ ರಾಜಗೋಪುರವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಲಿದ್ದಾರೆ. ಅವರನ್ನು ವೈಭವದ ಮೆರವಣಿಗೆ ಮೂಲಕ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಶ್ರೀ ದುರ್ಗಾ ಗಣಪತಿ ಸಭಾವಭವದ ಲೋಕರ್ಪಾಣೆಯನ್ನು ಮುಂಬೈನ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ನೇರವೆರಿಸಲಿದ್ದಾರೆ. ಡಿ.೬ರಂದುಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕರಾಯ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಪುತ್ತಿಲ, ನಾಳ, ಮಚ್ಚಿನ, ಕಳಿಯ ಗ್ರಾಮ, ಓಡಿಲ್ನಾಳ, ನ್ಯಾಯತರ್ಪು, ಕುವೆಟ್ಟು, ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಧಾರ್ಮಿಕ ಶ್ರದ್ಧಾಕೇಂದ್ರಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ವಿವರಿಸಿದರು.

ಅಥರ್ವಶೀರ್ಷ ಗಣಯಾಗದಲ್ಲಿ ಪಾಲ್ಗೊಳ್ಳುವ ಉರುವಾಲು ಗ್ರಾಮದ ಸೇವಾಕರ್ತರು ಸನಾದಿನಗಳ ಶುದ್ಧ ಪ್ರತಾಚರಣೆಯಲ್ಲಿದ್ದು ಗರಿಕೆಯನ್ನು ಮನೆಯ ದೇವರ ಮಂಟಪದಲ್ಲಿಟ್ಟು ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ ಈ ಮಂತ್ರವನ್ನು ಪಠಣಮಾಡಿ ಅನುಷ್ಠಾನ ಮಾಡಿದ ಒಂದು ಮುಷ್ಟಿಗರಿಕೆಯನ್ನು ಡಿ.೭ರಂದು ಬೆಳಗ್ಗೆ ಗಂಟೆ ೯.೦೦ಕ್ಕೆ ಸರಿಯಾಗಿ ಯಾಗ ಶಾಲೆಗೆ ಕಡ್ಡಾಯವಾಗಿ ತಂದು ಒಪ್ಪಿಸಬೇಕು. ಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳುವ ಸೇವಾಕರ್ತರು ೧೧ ದಿನಗಳ ಶುದ್ಧವ್ರತಾಚರಣೆಯಲ್ಲಿದ್ದು ತೆಂಗಿನಕಾಯಿಯನ್ನು ಮನೆಯ ದೇವರ ಮಂಟಪದಲ್ಲಿಟ್ಟು ಸರ್ವ ಮಂಗಳ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಕೇ, ಶರಣೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ ಈ ಮಂತ್ರವನ್ನು ಪಠಣಮಾಡಿ ತಾವು ಅನುಷ್ಠಾನ ಮಾಡಿದ ಒಂದು ತೆಂಗಿನಕಾಯಿಯನ್ನು ಡಿ.೮ರಂದು ಬೆಳಗ್ಗೆ ಗಂಟೆ ೯.೦೦ಕ್ಕೆ ಸರಿಯಾಗಿ ಯಾಗ ಶಾಲೆಗೆ ಕಡ್ಡಾಯವಾಗಿ ತಂದು ಒಪ್ಪಿಸುವುದ ಎಂದು ಮಾಹಿತಿ ನೀಡಿದರು.

ಲೋಕಾರ್ಪಣಾ ಸಮಿತಿ ಕಾರ್ಯಾಧ್ಯಕ್ಷ ಕಿರಣ್ ಚಂದ್ರ ಡಿ.ಪುಷ್ಪಗಿರಿ ಮಾತನಾಡಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅವರನ್ನು ಕಲ್ಲೇರಿ ಪೇಟೆಯಿಂದ ಭಜನಾ ಮಂದಿರದ ವರೆಗೆ ವೈಭವದ ಮೆರವಣಿಗೆ ಮೂಲಕ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಶ್ರೀ ಗಣೇಶ ಭಜನಾ ಮಂಡಳಿ ಟ್ರಸ್ಟ್ ಅಧ್ಯಕ್ಷ ರೋಹಿತ ಶೆಟ್ಟಿ ಪಿ.ಕುಪ್ಪೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಕುಪ್ಪೆಟ್ಟಿ, ಭಜನಾ ಮಂದಿರದ ಅಧ್ಯಕ್ಷ ಹರೀಶ್ ನಾಯ್ಕ ಹೊಸ ಮಣ್ಣು, ಸ್ವಾಗತ ಸಮಿತಿ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಅನ್ನದಾನ ಮತ್ತು ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಗೌಡ ಪೊಸಂದೋಡಿ, ವೈದಿಕ ಸಮಿತಿ ಸಂಚಾಲಕ ಕೆ.ಎನ್. ಪ್ರಸನ್ನ ಮುಚ್ಚಿನ್ನಾಯ ನೈದಿಲೆ ಹಲೇಜಿ, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,
ಮಹಿಳಾ ಸಮಿತಿ ಅಧ್ಯಕ್ಷೆ ಸುಮತಿ ಜನಾರ್ದನ ಬೇಂಗಾಯಿ ಹಾಗೂ ಎಸ್ ಕೆ ಡಿ ಆರ್ ಪಿ ವಲಯ ಮೇಲ್ವಿಚಾರಕ ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.