ಕುಪ್ಪೆಟ್ಟಿ ಡಿ.08 : ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪು ಹಾಗೂ ಶ್ರೀ ದುರ್ಗಾಗಣಪತಿ ಸಭಾಭವನವ ಲೋಕಾರ್ಪಣೆಯಂಗವಾಗಿ ಇಂದು ಮಹಾಚಂಡಿಕಾ ಯಾಗ ಹಾಗೂ 108 ತೆಂಗಿನಕಾಯಿ ಗಣಯಾಗ ಸಂಪನ್ನಗೊಂಡಿತು.

ಇಂದು ಮುಂಜಾನೆಯಿಂದ ಅರ್ಧ ಏಕಾಹ ಭಜನೆ ಆರಂಭಗೊಂಡಿದ್ದು, ಸಂಜೆ ಸೂರ್ಯಾಸ್ತದವರೆಗೆ ನಡೆಯಲಿದೆ. ಅದೇ ರೀತಿಯಲ್ಲಿ ಇಂದು ನಡೆದಂತಹ ಮಹಾ ಚಂಡಿಕಾ ಯಾಗ ಹಾಗೂ 108 ತೆಂಗಿನಕಾಯಿ ಗಣಯಾಗದ ಪೂರ್ಣಾಹುತಿ ನಡೆಯಿತು.
ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಇವರ ಮಾತೃ ಶ್ರೀ ಗಳಾದ ಶ್ರೀ ದೇವಿ ಪುಷ್ಪಗಿರಿ ಇವರ ಸ್ಮರಣಾರ್ಥ ಸಂಜೆ ಗಂಟೆ ೬ : ೩೦ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಅವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆ ನಡೆಯಲಿದೆ.

