ಬೆಳ್ತಂಗಡಿ : ದಲಿತರ ಮನೆಯಲ್ಲಿ ಸಹಭೋಜನ ಮಾಡುವುದು ಅವಮಾನವೇ ರಕ್ಷಿತ್ ಶಿವರಾಂ ? – ದಲಿತ ಮುಖಂಡರ ಪ್ರಶ್ನೆ

ಬೆಳ್ತಂಗಡಿ, ಫೆ. 04 : ದಲಿತರ ಮನೆಯಲ್ಲಿ ಸಹಭೋಜನ ಮಾಡುವುದು ಸಮಾಜವನ್ನು ಒಡೆಯುವುದು ಹೇಗೆ ಆಗುತ್ತದೆ ? ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ, ಅಸ್ಪೃಶ್ಯತೆಯಿಂದ ನಲುಗಿದ ಸಮಾಜದ ಜೊತೆಗೆ ಸಹಭೋಜನ ಮಾಡಿ, ಸಾಮರಸ್ಯ ಕಟ್ಟುವುದು ಅವಮಾನ ಹೇಗೆ ಆಗುತ್ತದೆ ರಕ್ಷಿತ್ ಶಿವರಾಂ ಅವರೇ ? ಅದು ಅವಮಾನ ಅಂತ ಅನಿಸಿದರೆ, ಆ ಮೂಲಕ ನೀವು ದಲಿತ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಹೇಳಿಕೆ ದಲಿತ ಮುಖಂಡರು ತಿರುಗೇಟು ನೀಡಿದ್ದಾರೆ.

Advertisement

ಬೆಳ್ತಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ, ಬೆಳ್ತಂಗಡಿ ಎಸ್ ಸಿ ಮೋರ್ಚಾದ ಕಾರ್ಯದರ್ಶಿ ಲಕ್ಷ್ಮಣ್ ಅವರು, ದಲಿತ ಕಾಲೊನಿಯ ರಸ್ತೆ, ಚರಂಡಿ, ಬೀದಿ ದೀಪದ ವ್ಯವಸ್ಥೆಯ ಬಗ್ಗೆ ಶಾಸಕರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ರಕ್ಷಿತ್ ಶಿವರಾಮ್ ಕೇಳಿದ್ದರು, ಶಾಸಕ ಹರೀಶ್ ಪೂಂಜಾರ ಮೊದಲ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅವರ ಶಕ್ತಿಮೀರಿ ಅಭಿವೃದ್ಧಿ ಮಾಡಿದ್ದರು. ನಿಮ್ಮ ಶಾಸಕರ ಅವಧಿಯಲ್ಲಿ ಹೇಗಿತ್ತು, ಶಾಸಕ ಹರೀಶ್ ಪೂಂಜಾರು ಎಷ್ಟು ಬದಲಾವಣೆ ಮಾಡಿದ್ದರು ಎಂಬುದನ್ನು ಅವಲೋಕನ ಮಾಡಿಕೊಳ್ಳಿ.

ದಲಿತರಿಗೆ ಸೇರಬೇಕಾದ 34 ಸಾ.ಕೋ. ಅನುದಾನ ಗ್ಯಾರಂಟಿಗೆ ಬಳಸಿದ್ದು ಸರಿಯೇ ?

ದಲಿತ ಕಾಲೋನಿಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ನೀವು, ಸಿದ್ಧರಾಮಯ್ಯರ ಸರ್ಕಾರವು ಎಸ್ ಸಿಪಿ ಮತ್ತು ಟಿಎಸ್ ಪಿ ಯ 34 ಸಾವಿರ ಕೋಟಿ ಅನುಧಾನವನ್ನು ಗ್ಯಾರಂಟಿಗೆ ಬಳಸಿದಿರಿ ಅಲ್ವಾ ? ಆ ಹಣ ದಲಿತ ಸಮಾಜದ ಕಾಲೊನಿಗಳ ಅಭಿವೃದ್ಧಿಗೆ, ಉದ್ಯೋಗಕ್ಕೆ, ದಲಿತ ಯುವಕರ ಏಳಿಗೆಗೆ ಬಳಸಬೇಕಾದ ಹಣ ಅಲ್ಲವೇ ಅದು ? ನಿಮಗೆ ನಿಜವಾಗಿಯೂ ದಲಿತರ ಮೇಲೆ ಕಾಳಜಿ ಇದ್ದರೆ, ಗ್ಯಾರಂಟಿಗೆ ಬಳಸಿರುವ ದಲಿತರ ಹಣವನ್ನು ಸಿದ್ಧರಾಮಯ್ಯರ ಜೊತೆ ಮಾತನಾಡಿ ತಕ್ಷಣವೇ ಬಿಡುಗಡೆಗೊಳಿಸಿ. ಬೆಳ್ತಂಗಡಿ ಕ್ಷೇತ್ರದ ದಲಿತರ ಅಭಿವೃದ್ಧಿಗೆ ಸೇರಬೇಕಾಗಿದ್ದ ಹಣ ಗ್ಯಾರಂಟಿಗೆ ಹೋಗುತ್ತಿದೆ. ಅದನ್ನು ತಕ್ಷಣ ತಡೆದು ಬೆಳ್ತಂಗಡಿ ತಾಲೂಕಿನ ದಲಿತರ ಅಭಿವೃದ್ಧಿಗೆ ನೀಡಿ ಎಂದು ಹೋರಾಟ ಮಾಡಿ. ಆಗ ನಾವು ನಿಮ್ಮ ದಲಿತರ ಪ್ರೀತಿಯನ್ನು ಒಪ್ಪಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.

ದಲಿತರ ಮನೆಯಲ್ಲಿ ಸಹಭೋಜನ ಮಾಡಿ, ಹಿಂದೂ ಸಮಾಜವನ್ನು ಒಡೆಯುತ್ತಿದ್ದೀರಿ ಎಂದಿದ್ದೀರಿ, ಸಹಭೋಜನ ಮಾಡುವುದು ಸಮಾಜವನ್ನು ಒಡೆಯುವುದು ಹೇಗೆ ಆಗುತ್ತದೆ. ಒಂದೇ ಒಂದು ಕಾರ್ಯಕ್ರಮದಲ್ಲಿ ನಾವೆಲ್ಲರೂ ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಯಾವತ್ತಾದರೂ ಹೇಳಿರುವಿರಾ ? ಇಲ್ಲ. ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ರಕ್ಷಿತ್ ಶಿವರಾಂ ಅವರು ಮಾಡುತ್ತಿದ್ದಾರೆ, ಶಾಸಕರು ಸಾಮರಸ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪಂಕ್ತಿ ಭೋಜನ, ಸಾಮೂಹಿಕ ಭೋಜನ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ರಕ್ಷಿತ್ ಶಿವರಾಂ ಹೇಳುತ್ತಾರೆ. ಆದರೆ, ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ, ಅಸ್ಪೃಶ್ಯತೆಯಿಂದ ನಲುಗಿದ ಸಮಾಜದ ಜೊತೆಗೆ ಸಹಭೋಜನ ಮಾಡಿ, ಸಾಮರಸ್ಯ ಕಟ್ಟುವುದು ಅವಮಾನವೇ ರಕ್ಷಿತ್ ಶಿವರಾಂ ಅವರೇ ? ಅದು ಅವಮಾನ ಅಂತ ಅನಿಸಿದರೆ ಆ ಮೂಲಕ ನೀವು ದಲಿತ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ. 70 ವರ್ಷದ ಅವಧಿಯಲ್ಲಿ ಸಾಮರಸ್ಯವನ್ನು ಮಾಡದ ಕಾಂಗ್ರೆಸ್, ಶಾಸಕರ ಈ ಸಾಮರಸ್ಯವನ್ನು ಅವಮಾನ ಎಂದು ಹೇಳುವುದು ಸರಿಯಲ್ಲ. ಇದು ನಿಮಗೆ ಅವಮಾನ ಅಲ್ಲ ಬದಲಾಗಿ ತಾಲೂಕಿನ ದಲಿತ ಬಂಧುಗಳು ಹರೀಶ್ ಪೂಂಜಾರ ಪರ ನಿಲ್ಲುತ್ತಾರೆಂಬ ಅನುಮಾನ ಶುರುವಾಗಿದೆ. ಸ್ವಾಮೀಜಿಗಳಿಗೆ, ಸಂತರಿಗೆ ಹೂ ಹಾಕುವುದು ಸಾಮಾನ್ಯ. ಆದರೆ, ಓರ್ವ ಜನಪ್ರತಿನಿಧಿಗೆ ದಲಿತ ಸಮಾಜದ ಮಹಿಳೆಯರು ಹೂ, ಹಾರ ಹಾಕಿ ಸ್ವಾಗತಿಸುತ್ತಾರೆ ಎಂದರೆ ಅದು ಶಾಸಕ ಹರೀಶ್ ಪೂಂಜಾರ ಯೋಗ್ಯ-ಭಾಗ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ, ಭಾಜಪಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಈಶ್ವರ ಭೈರ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ ಚಂದ್ರಕಲಾ, ರಾಘವ ಕಲ್ಮಂಜ, ವಿಶ್ವನಾಥ, ಪ್ರಸಾದ್, ಸಂತೋಷ್, ರಮೇಶ್ ನಲಿಕೆ ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.