# Dhwani News > ನಿಮಗಾಗಿ ನಾವು... ## Posts - [ಕಾಸರಗೋಡು : ಗರಿಷ್ಠ ತಾಪಮಾನ - ಸೂರ್ಯಾಘಾತಕ್ಕೆ ಒಳಗಾದ ಬಾಲಕನ ದೇಹದಲ್ಲಿ ಸುಟ್ಟ ಗಾಯ !](https://dhwaninews.com/sun_stroke/): ಕಾಸರಗೋಡು, ಏ. 18 : ತಾಪಮಾನದ ಹೆಚ್ಚಳದಿಂದ ಜನತಾ ಬದುಕೇ ತತ್ತರಗೊಳುತ್ತಿದೆ. ಉತ್ತರ ಕೇರಳ ಸೇರಿದಂತೆ ಕರಾವಳಿ ಭಾಗಗಳಲ್ಲೂ ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿದೆ. ಕಾಸರಗೋಡು ಜಿಲ್ಲೆಯ ಅಜಾನೂರಿನಲ್ಲಿ ಬಾಲಕನೋರ್ವ ಸೂರ್ಯಾಘಾತಕ್ಕೆ ಒಳಗಾದ ಘಟನೆ ಗುರುವಾರ ನಡೆದಿದೆ. ಜುಬೈರ್ ಎಂಬ 13 ವರ್ಷದ ಬಾಲಕ ಸೂರ್ಯಘಾತದಿಂದ ದೇಹವಿಡೀ ಸುಟ್ಟ ಗಾಯಗಳಾಗಿದ್ದು, ಅಜಾ ನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾನೂರಿನ ಶಾಲಾ ಮೈದಾನದಲ್ಲಿ ಪುಟ್ಬಾಲ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಕುಸಿದು ಬಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚರ್ಮ ಸುಟ್ಟ ಗಾಯಗಳು ದೇಹದಲ್ಲಿ ಕಂಡುಬಂದಿವೆ. ತಾಪಮಾನದ ಜೊತೆಗೆ ಬಿಸಿ ಗಾಳಿ ಬೀಸುತ್ತಿದ್ದು, ಉರಿ ಸೆಕೆಯಿಂದ ಜನತೆ ತತ್ತರಿಸುವಂತೆ ಮಾಡಿದೆ .ಮುಂದಿನ ಕೆಲ ದಿನಗಳ ಕಾಲ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಿಗ್ಗೆ 11 ರಿಂದ ಸಂಜೆ 3 ಗಂಟೆ ತನಕ ಜನರು ಬಿಸಿಲಿನಿಂದ ಪಾರಾಗಬೇಕು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸ್ತುತ ಕರಾವಳಿ […] - [ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಆಶ್ರಯದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಪ್ರೌಢಶಾಲೆ ವಿಭಾಗದ ಬಾಲಕರ ಪಂದ್ಯಾಟ ಆರಂಭ](https://dhwaninews.com/youngboys_kabaddi-highschool/): ಬೆಳ್ತಂಗಡಿ, ಏ. 18 : ಯಂಗ್ ಬಾಯ್ಸ್ ಸವಣಾಲು ಬೆಳ್ತಂಗಡಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂ‌ರ್ ಕಬಡ್ಡಿ ಅಸೋಸಿಯೇಶನ್ (ರಿ.), ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಇದರ ಸಹಭಾಗಿತ್ವದಲ್ಲಿ, ಶ್ರೀ ಸುದೀಪ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸ ಸಹಾಯಾರ್ಥ 2ನೇ ವರ್ಷದ ಪ್ರೌಢಶಾಲೆ ವಿಭಾಗದ ಬಾಲಕರ ಆಹ್ವಾನಿತ ತಂಡಗಳ ಪಂದ್ಯ ಈಗಾಗಲೇ ಆರಂಭಗೊಂಡಿದೆ. ಮನ್ ಶರ್ ಹೈ ಸ್ಕೂಲ್ ಹಾಗೂ ಚರ್ಚ್ ಸ್ಕೂಲ್ ಬೆಳ್ತಂಗಡಿ ಮಧ್ಯೆ ಮೊದಲ ಪಂದ್ಯಾಟ ನಡೆಯುತ್ತಿದೆ. ಸಂಜೆ 25 ವರ್ಷ ವಯಾಮಿತಿಯ ಪುರುಷರ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಬಹಳ ಅದ್ಧೂರಿಯಿಂದ ನಡೆಯಲಿದೆ. - [ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ - ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ](https://dhwaninews.com/karavali_45c/): ಕರಾವಳಿ, ಏ. 18 : ಬೇಸಿಗೆಗೆ ಕಾಲಿಡುವಷ್ಟರಲ್ಲೇ ರಾಜ್ಯದಾದ್ಯಂತ ಉಷ್ಣ ಅಲೆ (Karnataka Weather) ಆವರಿಸಿದೆ. ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕರಾವಳಿಯು ಬಿಸಿಲ ಬೇಗೆಯಲ್ಲಿ ಸುಡುತ್ತಿದೆ. ಉತ್ತರ ಕನ್ನಡದಲ್ಲಿ ಇಂದಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇದ್ದು, ಇದು 42 ಡಿಗ್ರಿಗೂ ಏರಿಕೆಯಾಗಬಹುದು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿಯೂ ಹೆಚ್ಚಿನ ತಾಪಮಾನ ದಾಖಲಾಗಿದ್ದು, ಈ ನಡುವೆ ಸಾಧಾರಣ ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ವಿಜಯಪುರ, ಕಲಬುರ್ಗಿ, ಬೀದರ್ […] - [ರಾಹುಲ್ ಗಾಂಧಿ ಪೌರತ್ವಕ್ಕೆ ಕಂಟಕ ! ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ…](https://dhwaninews.com/rahul-gandhi_case/): ಅಲಹಾಬಾದ್, ಏ. 18 : ದ್ವಿಪೌರತ್ವದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹಾಗೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಉತ್ತರ ಪ್ರದೇಶ ಸರ್ಕಾರವು ಈ ಪ್ರಕರಣದ ಬಗ್ಗೆ ಸ್ವತಃ ತನಿಖೆ ನಡೆಸಬೇಕು ಅಥವಾ ಈ ವಿಷಯವನ್ನು ಕೇಂದ್ರೀಯ ಸಂಸ್ಥೆಗೆ ತನಿಖೆಗೆ ವಹಿಸಬೇಕು ಎಂದು ಹೈಕೋರ್ಟ್‌ನ ಲಕ್ನೋ ಪೀಠ ನಿರ್ದೇಶಿಸಿದೆ. ಜನವರಿ 28ರಂದು ಲಕ್ನೋದ ವಿಶೇಷ ಸಂಸದ ಮತ್ತು ಶಾಸಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು […] - [ಕುಂದಾಪುರ : ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ - ಮತ್ಸ್ಯಕ್ಷಾಮದ ಭೀತಿ ! ಅವಧಿಗೆ ಮುನ್ನವೇ ಲಂಗರು ಹಾಕುತ್ತಿವೆ ಮೀನುಗಾರಿಕಾ ಬೋಟ್ ಗಳು](https://dhwaninews.com/boats_harbour/): ಕುಂದಾಪುರ, ಏ. 18 : ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ, ಸಮುದ್ರದ ನೀರಿನ ಉಷ್ಣಾಂಶ ಹೆಚ್ಚಳ, ಮತ್ಸ್ಯಕ್ಷಾಮ, ಇಂಧನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಒತ್ತಡದಿಂದ ಮೀನುಗಾರಿಕಾ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮುಂಗಾರು ಮೀನುಗಾರಿಕೆ ನಿಷೇಧ ಘೋಷಣೆಗೆ ಇನ್ನೂ ಸಮಯ ಇರುವುದಾದರೂ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂದರುಗಳಲ್ಲಿಈಗಾಗಲೇ ಬಹುತೇಕ ಬೋಟ್‌ಗಳು ಲಂಗರು ಹಾಕಲು ಆರಂಭಿಸಿವೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಬೈಂದೂರು ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳು ಗಣನೀಯವಾಗಿ ಕುಂಠಿತಗೊಂಡಿವೆ. ಸಮುದ್ರಕ್ಕೆ ತೆರಳುವ ಬೋಟ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಪ್ರಸ್ತುತ ಶೇ.15 ರಷ್ಟು ಬೋಟ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಉಳಿದ ಶೇ.85 ರಷ್ಟು ಬೋಟ್‌ಗಳು ದಡ ಸೇರಿವೆ ಎಂದು ಮೀನುಗಾರರು ತಿಳಿಸಿದ್ದಾರೆ. ಸಮುದ್ರ ತಾಪಮಾನ ಪರಿಣಾಮ: ಭೂಮಿಯ ತಾಪಮಾನ ಏರಿಕೆಯ ಪರಿಣಾಮ ಸಮುದ್ರದ ನೀರಿನಲ್ಲೂ ಕಂಡುಬರುತ್ತಿದೆ. ನೀರಿನ ಉಷ್ಣಾಂಶ ಹೆಚ್ಚಾದ ಕಾರಣ ಮೀನುಗಳು ಕರಾವಳಿ ಭಾಗ ಬಿಟ್ಟು ಆಳ ಸಮುದ್ರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಇದರಿಂದ […] - [ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ - ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ](https://dhwaninews.com/kulakarni_jeevavadhi/): ಬೆಂಗಳೂರು, ಏ. 17 : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ವಿನಯ್ ಕುಲಕರ್ಣಿ 15 ನೇ ಅಪರಾಧಿ ಆಗಿದ್ದಾರೆ. ಒಟ್ಟು 16 ಮಂದಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕೊಲೆ ಮತ್ತು ಪಿತೂರಿ ಆರೋಪಕ್ಕೆ ವಿನಯ್‌ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಅಲ್ಲೆದೆ, ತಲಾ 30 ಸಾವಿರ ರೂಪಾಯಿ ದಂಡ ಪಾವತಿಸಲು ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. 9 ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಬಳಿಕ ವಿನಯ್‌ ಕುಲಕರ್ಣಿ ಏನಂದ್ರು..? ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಅದೇಶದ ಬೆನ್ನಲ್ಲೇ ಸಿಬಿಐ ವಿನಯ್ ಕುಲಕರ್ಣಿ ಅವರನ್ನು […] - [ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು - ದೂರು ದಾಖಲು](https://dhwaninews.com/chain_snaching/): ಬಂಟ್ವಾಳ, ಏ. 17 : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 18 ಗ್ರಾಮ್ ತೂಕದ ಚಿನ್ನದ ಸರ ಕಳವಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಸರಸ್ವತಿ ಎಂಬವರು ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ಹೋಗಲು ಧರ್ಮಸ್ಥಳ ದಿಂದ ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಏ.15ರಂದು ಬೆಳಗ್ಗೆ ಸುಮಾರು 8.20ಕ್ಕೆ ಹತ್ತಿದ್ದರು. ಬಸ್ ನಲ್ಲಿ ಜನಸಂದಣಿ ಇದ್ದು, ಮಗಳು ಕುಳಿತಿದ್ದರೆ, ಮಹಿಳೆ ನಿಂತು ಪ್ರಯಾಣಿಸಿದ್ದರು. ಮಗಳೊಂದಿಗೆ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಸುಮಾರು 9 ಗಂಟೆಗೆ ಕುತ್ತಿಗೆ ನೋಡಿದ್ದು, ಈ ವೇಳೆ ಚಿನ್ನದ ಸರ ಇರಲಿಲ್ಲ. ಬಸ್ಸಿನಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಮಡಂತ್ಯಾರುನಿಂದ ಬಿ.ಸಿ ರೋಡ್ ಗೆ ಬರುವ ಸಮಯ ಬಸ್ಸಿನಲ್ಲಿ ಕಳ್ಳತನ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳತನವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ಆಗಬಹುದು ಎಂದು ಹೇಳಲಾಗಿದ್ದು, […] - [ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ - ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ](https://dhwaninews.com/2017_laaticharge/): ಮಂಗಳೂರು, ಏ.17 : ನಗರ ಪೊಲೀಸ್ ಕಮಿಷನ‌ರ್ ಕಚೇರಿಯ ಮುಂದೆ 2017ರ ಎ.4ರಂದು ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಎಲ್ಲಾ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್‌ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನ‌ರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ಪೈಕಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಇನ್ನೊಂದು ಪ್ರಕರಣದ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸರಕಾರಿ ಪರ ವಕೀಲರು […] - [ಬೆಳ್ತಂಗಡಿ : ನಿಷೇಧಿತ ಗಾಂಜಾ ಮಾರಾಟ ಯತ್ನ ಪ್ರಕರಣ - ಆರೋಪಿಗೆ 5 ವರ್ಷ ಜೈಲು ಶಿಕ್ಷೆ](https://dhwaninews.com/gaanja_shikshe/): ಬೆಳ್ತಂಗಡಿ, ಏ. 17 : ನಿಷೇಧಿತ ಮಾದಕವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಶಿಕ್ಷೆ ವಿಧಿಸಿದೆ. 2009ರ ಮಾರ್ಚ್ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ರಥಬೀದಿಯಲ್ಲಿ ಅಂದಾಜು ರೂ. 50,000 ಮೌಲ್ಯದ 1.500 ಕೆಜಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 60/09ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c) ಜೊತೆಗೆ 20(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಬಸವರಾಜ್ ಅವರು ಏಪ್ರಿಲ್ 10, 2026ರಂದು ಆರೋಪಿಯಾಗಿರುವ ಚಾರ್ಮಾಡಿ ನಿವಾಸಿ ಟಿ.ಇ. ಜೋಸೆಫ್ (42) ಅವರನ್ನು ದೋಷಿ ಎಂದು ತೀರ್ಪು ನೀಡಿದರು. ಬಳಿಕ ಏಪ್ರಿಲ್ 16ರಂದು ಶಿಕ್ಷೆ ಪ್ರಕಟಿಸಲಾಯಿತು. ನ್ಯಾಯಾಲಯವು ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8(c) r/w 20(b)(ii)(B) ಅಡಿಯಲ್ಲಿ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 50,000 […] - [ಬೆಳ್ತಂಗಡಿ : ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ತಂಪೆರೆದ ಮಳೆರಾಯ - ಗುಡುಗು ಮಿಂಚು ಸಹಿತ ಧಾರಕಾರ ಮಳೆ](https://dhwaninews.com/belthangady_rain/): ಬೆಳ್ತಂಗಡಿ, ಏ. 16 : ಬೆಳ್ತಂಗಡಿ ತಾಲೂಕಿನ ಹಲವೆಡೆ ಇಂದು ಗುಡುಗು – ಮಿಂಚು ಸಹಿತ ಧಾರಕಾರ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ಇಂದು ಮಳೆರಾಯ ತಂಪೆರೆದಿದ್ದಾನೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಹಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಿದ್ದು, ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಇಂದು ಮಳೆರಾಯ ತಂಪೆರೆದಿದ್ದಾನೆ. - [ಬೆಳ್ತಂಗಡಿ : ಹೃದಯಘಾತದಿಂದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು  ಕನ್ಯಾಡಿಯ ಕೇಶವ ಎಂ. ಕೊನೆಯುಸಿರು](https://dhwaninews.com/keshava_death/): ಬೆಳ್ತಂಗಡಿ, ಏ. 16 : ಹೃದಯಘಾತದಿಂದ ಕನ್ಯಾಡಿಯ ಕೇಶವ ಎಂ. ಮುಗೇರ ನಿಧಾನರಾಗಿದ್ದಾರೆ. ಹೃದಘಾತಕ್ಕೊಳಗಾದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. - [ಬೆಂಗಳೂರು : "ದೋಸೆ, ಇಡ್ಲಿ, ಸಾಂಬಾರ್, ಚಟ್ನಿ" ತಂದ ಆಪತ್ತು -  ಆರ್ ಸಿಬಿ ವಿರುದ್ದ ಬಿಸಿಸಿಐ ಗೆ ದೂರು ನೀಡಿದ  ಚೆನ್ನೈ ಸೂಪರ್ ಕಿಂಗ್ಸ್](https://dhwaninews.com/rcb_chennai-dooru/): ಬೆಂಗಳೂರು, ಏ. 16 : ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಅಭಿಯಾನವನ್ನು ಅದ್ಭುತವಾಗಿ ಅರಂಭಿಸಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿರುವ ಆರ್ ಸಿಬಿ (RCB) ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತವರು ಮೈದಾನದಲ್ಲಿ ಆರ್ ಸಿಬಿ ಅಜೇಯವಾಗಿದೆ. ಚಿನ್ನಸ್ವಾಮಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲು ಗೆದ್ದುಕೊಂಡಿದೆ. ಇದರ ನಡುವೆ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್ ಸಿಬಿ ಆತಿಥ್ಯದ ವಿರುದ್ದ ಬಿಸಿಸಿಐ ಗೆ ದೂರು ನೀಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಡಿಜೆ ಹಾಡು ಆಯ್ಕೆ ಮತ್ತು ಕಾಮೆಂಟ್‌ಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ದೂರು ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ದಕ್ಷಿಣ ಭಾರತದ ಸ್ಟೀರಿಯೊಟೈಪ್‌ಗಳ ಬಗ್ಗೆ ಮೀಮ್‌ಗಳೊಂದಿಗೆ ಹೆಚ್ಚಾಗಿ ಬಳಸಲಾಗುವ ವೈರಲ್ ಹಾಡಾದ “ದೋಸೆ, ಇಡ್ಲಿ, ಸಾಂಬಾರ್, ಚಟ್ಟಿ, […] - [ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರಿಂದ ಕನ್ಯಾಡಿಯ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಅಭಿವೃದ್ಧಿಗಾಗಿ ರೂ.10.00 ಲಕ್ಷ ಅನುದಾನ](https://dhwaninews.com/harish-poonja_10lakh/): ಬೆಳ್ತಂಗಡಿ, ಏ. 16 : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬೆನ್ನು ಮೂಳೆ ಮುರಿತಕ್ಕೊಳಗಾಗಿ ದಿವ್ಯಾಂಗರಾದವರಿಗೆ ಸಮರ್ಪಿತವಾಗಿ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಅಭಿವೃದ್ಧಿಗಾಗಿ ಶಾಸಕ ಹರೀಶ್ ಪೂಂಜಾ ಅವರು ರೂ.10.00 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಕೇಂದ್ರವು ದಿವ್ಯಾಂಗರ ಪುನರ್ವಸತಿ ಹಾಗೂ ಉತ್ತಮ ಜೀವನ ನಿರ್ಮಾಣಕ್ಕೆ ನೆರವಾಗಲಿದ್ದು, ಸಮಾಜಮುಖಿ ಕಾರ್ಯಗಳಿಗೆ ಇನ್ನಷ್ಟು ಬಲ ತುಂಬಲಿದೆ. ಈ ಮಹತ್ವದ ನಡೆಗಾಗಿ ಮಾನ್ಯ ಶಾಸಕರಿಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ. - [ಐಪಿಎಲ್ ನಲ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿರಾಟ್ : ಲಖನೌ ತಂಡಡೆದುರು ಅಧಿಕಾರಯುತ ಜಯ ಸಾಧಿಸಿದ ಆರ್ ಸಿಬಿ](https://dhwaninews.com/rcb_lsg_rcb-win/): ಬೆಂಗಳೂರು, ಏ. 16 : ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಜಯ ಸಾಧಿಸಿದೆ. ಈ ಮೂಲಕ ಆಢಿದ 5 ಪಂದ್ಯಗಳಲ್ಲಿ 4 ಜಯ ಗಳಿಸಿರುವ ರಜತ ಪಾಟೀದಾರ್ ಬಳಗವು 8 ಅಂಕಗಳನ್ನು ಸಂಪಾದಿಸಿದೆ. ಜೊತಗೆ ಅತ್ಯುನ್ನತ ರನ್ ರೇಟ್(1.503) ಆಧಾರದಲ್ಲಿ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡವು ಇನ್ನೂ 29 ಎಸತೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿರಾಟ್ ಐಪಿಎಲ್ ನಲ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ […] - [ಬೆಳ್ತಂಗಡಿ : ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ  ಬಾಲಕೃಷ್ಣ ಗೌಡ ನಿಧನ](https://dhwaninews.com/ujire_president-death/): ಬೆಳ್ತಂಗಡಿ, ಏ. 16 : ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿನಾಯಕ ನಗರ ನಿವಾಸಿ ಬಾಲಕೃಷ್ಣ ಗೌಡ ಕಳೆದ ರಾತ್ರಿ ನಿಧನ ಹೊಂದಿದ್ದಾರೆ. ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿದ್ದರು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ನಿಧನರಾಗಿದ್ದಾರೆ. 2012 ರಿಂದ 15ರ ಅವಧಿಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರೊಂದಿಗೆ ಉತ್ತಮ ಸ್ನೇಹ ಬಾಂದವ್ಯ ಹೊಂದಿದ್ದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. - [ಬೆಳ್ತಂಗಡಿ : ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು](https://dhwaninews.com/puneeth_arrest/): ಬೆಳ್ತಂಗಡಿ, ಏ. 15 : ಕಳೆದ ವರ್ಷ ಉಜಿರೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ವಿಚಾರಣೆಗೆ ಹಾಜರಾಗದ ಕಾರಣದಿಂದ ಬೆಳ್ತಂಗಡಿ ಪೊಲೀಸರು ಬೆಂಗಳೂರಲ್ಲಿ ಪುನೀತ್‌ ಕೆರೆಹಳ್ಳಿಯನ್ನು ಬಂಧನ ಮಾಡಿ ಕರೆತರುತ್ತಿರುವ ಕುರಿತು ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಳೆದ 2025 ರಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ನಡುವೆ ನಡೆದ ಗಲಾಟೆ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ನೀಡಿದ ನೋಟಿಸ್‌ಗೆ ಹಾಜರಾಗದ ಕಾರಣ ಬೆಳ್ತಂಗಡಿ ನ್ಯಾಯಾಲಯದಿಂದ ಬಂಧನ ವಾರಂಟ್‌ ಪಡೆದು ಎ.15 ರಂದು ಬೆಂಗಳೂರಿಗೆ ತೆರಳಿದ ಬೆಳ್ತಂಗಡಿ ಪೊಲೀಸರು ಹಿಂದೂ ಸಂಘಟನೆಯ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. - [ಬೆಂಗಳೂರು : ತನ್ನ 17 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ !](https://dhwaninews.com/murder_suicide/): ಬೆಂಗಳೂರು, ಏ. 15 : 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 40 ವರ್ಷದ ಸುವರ್ಣ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಶರಣಾಗಿರುವ ತಾಯಿ. ಕಾರುಣ್ಯ ತಾಯಿಯಿಂದ ಹತ್ಯೆಯಾದ ಮಗಳು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಟೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. - [ಬೆಳ್ತಂಗಡಿ : ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಏ.18ರಂದು 2ನೇ ವರ್ಷದ "ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ"](https://dhwaninews.com/youngboys_kabaddi/): ಬೆಳ್ತಂಗಡಿ, ಏ. 15 : ಯ೦ಗ್‌ ಬಾಯ್ಸ್ ಸವಣಾಲು, ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂ‌ರ್ ಕಬಡ್ಡಿ ಅಸೋಸಿಯೇಶನ್ (ರಿ.), ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.) ಇದರ ಸಹಭಾಗಿತ್ವದಲ್ಲಿ 2ನೇ ವರ್ಷದ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಆಹ್ವಾನಿತ ತಂಡಗಳ ಮತ್ತು 25 ವರ್ಷ ವಯೋಮಿತಿಯ ಪುರುಷರ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ-2026” ಏ.18 ಶನಿವಾರದಂದು ಸಂತೆಕಟ್ಟೆ ಸಮಾಜ ಮಂದಿರ (SDM Hall Belthangady) ದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ಸಿಇಒ ಶ್ರೀ ಲಂಚುಲಾಲ್ ಕೆ. ಎಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಗುರುನಾರಾಯಣ ಸೇವಾ ಸಂಘ (ರಿ.) ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಜಯವಿಕ್ರಮ್ ಕಲ್ಲಾಪು, ಶ್ರೀ ಕಾಲಭೈರವೇಶ್ವರ ಸೌಹಾರ್ದ ಸಹಕಾರಿ, ಉಜಿರೆ ಇದರ ಅಧ್ಯಕ್ಷರಾದ ಶ್ರೀ ರಂಜನ್ ಜಿ. ಗೌಡ, ಸವಣಾಲು ಪ್ರಗತಿಪರ ಕೃಷಿಕರಾದ ಶ್ರೀ ಕೃಷ್ಣಪ್ಪ ಗೌಡ ದೇವಸ, […] - [ಮಂಗಳೂರು : ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿ ಮೃತ್ಯು](https://dhwaninews.com/vidyuth_balaka-savu/): ಮಂಗಳೂರು, ಏ. 15 : ನಗರದ ಜೆಪ್ಪು ಮಹಾಕಾಳಿಪಡ್ಪು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೂಲತಃ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಪ್ರಸಕ್ತ ಜೆಪ್ಪು ಮಹಾಕಾಳಿಪಡ್ಪುನಿರ್ಮಲ ನಗರದಲ್ಲಿ ವಾಸವಾಗಿದ್ದ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಮೃತಪಟ್ಟ ಬಾಲಕ. ಎ.11ರಂದು ಮಹಾಕಾಳಿಪಡ್ಪುಅಂಡರ್‌ಪಾಸ್ ಬಳಿಯ ಭಜನಾಮಂದಿರದ ಸಮೀಪ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಮಂದಿರದ ಛಾವಣಿ ಬಿದ್ದ ಬಾಲ್ ಹೆಕ್ಕಲು ಹೋದಾಗ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ವಾರದ ಹಿಂದೆಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ವರುಣ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಪುವಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಾಲಕನ ಮನೆಗೆ ಭೇಟಿ ನೀಡಿದ್ದು, ಹೆತ್ತವರಿಗೆ ಸಾಂತ್ವನ ಹೇಳಿ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. - [ಪುತ್ತೂರು : ಹಾಸ್ಯ ಕಲಾವಿದರಿಗೆ ಬೆದರಿಕೆ - ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದೂರು ದಾಖಲು](https://dhwaninews.com/mahesh-shetty_sundar-rai/): ಪುತ್ತೂರು, ಏ. 15 : ನಾಟಕದಲ್ಲಿ ಮಾಡಿದ ಬುರುಡೆ ಗ್ಯಾಂಗ್ ಕುರಿತ ಹಾಸ್ಯ ನಾಟಕದ ತುಣುಕಿನ ವಿಚಾರದಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಕಲಾವಿದರಿಗೆ ಫೋನ್ ಮೂಲಕ ಕರೆ ಮಾಡಿ ಅವಾಚ್ಯ ಮತ್ತು ಅಸಭ್ಯ ರೀತಿಯಲ್ಲಿ ಬೈದು ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಉಜಿರೆ ಮಹೇಶ್ ಶೆಟ್ಟಿ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಸಾರಾಂಶ: ಕಲಾವಿದ ಸುಂದರ್ ರೈ ಮಂದಾರ ಸ್ನೇಹಿತ ದಿನೇಶ್ ಕೊಡಪದವು ರವರು ವಾಟ್ಸಾಪ್ ನಲ್ಲಿ ಧ್ವನಿಮುದ್ರಿಕೆಯೊಂದನ್ನು ಕಳುಹಿಸಿದ್ದನ್ನು ಸುಂದ‌ರ್ ರೈ ಮಂದಾರ ಏ.12 ರಂದು 10 ಗಂಟೆಯ ಸಮಯಕ್ಕೆ ಕೇಳಿಸಿಕೊಂಡಾಗ ಗುರುವಾಯನಕೆರೆ ಪ್ರಜ್ವಲ್ ಮತ್ತು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿರವರು ನಡೆಸಿದ ಫೋನ್ ಕರೆಯ ಸಂಭಾಷಣೆಯುಳ್ಳ ಆಡಿಯೋವನ್ನು ಪ್ರಜ್ವಲ್ ಕಳುಹಿಸಿರುವುದಾಗಿದ್ದು. ಅದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿರವರು ಪ್ರಜ್ವಲ್ ಕುಮಾರ್ ರವರಿಗೆ ಫೋನ್ ಕರೆ ಮಾಡಿ ನಿನ್ನ ಒಂಜಿ ವೀಡಿಯೋ ತೂತೆ(ನಿನ್ನ ಒಂದು ವೀಡಿಯೋ ನೋಡಿದ್ದೇನೆ) ಎಂದು ತುಳು ಭಾಷೆಯಲ್ಲಿ ಮಾತು ಆರಂಭಿಸಿ […] - [ಬೆಳ್ತಂಗಡಿ : ತಾಲೂಕಿನ ವಿವಿಧ ಸಮುದಾಯ ಭವನಗಳ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾರಿಂದ ಅನುದಾನ](https://dhwaninews.com/anudana_harishpoonja/): ಬೆಳ್ತಂಗಡಿ, ಏ. 15 : ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯಗಳ ಗೆ ಏಳಿಗೆಗೆ ದೃಢ ಸಂಕಲ್ಪದೊಂದಿಗೆ ಶಾಸಕರ ವಿವೇಚನಾ ಅನುದಾನದಡಿ ವಿವಿಧ ಸಮುದಾಯಗಳ ಬಹುಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಶಾಸಕ ಶ್ರೀ ಹರೀಶ್ ಪೂಂಜ ಅವರು ಮಹತ್ವದ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅನುದಾನಗಳು : 🔸 ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನಕ್ಕೆ – ರೂ. 1.00 ಕೋಟಿ🔸 ಕುಲಾಲ ಕುಂಬಾರರ ಸಮುದಾಯ ಭವನಕ್ಕೆ – ರೂ. 1.00 ಕೋಟಿ🔸 ನಾರಾಯಣ ಗುರು ಸಭಾಭವನ, ಕನ್ಯಾಡಿ – ರೂ. 1.00 ಕೋಟಿ ಬಿಡುಗಡೆಗೊಳಿಸಲಾಗಿದೆ. ಶಾಸಕ ಹರೀಶ್ ಪೂಂಜಾರ ಅಭಿವೃದ್ಧಿ ಚಿಂತನೆಗೆ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ. - [ಉಡುಪಿ : ಆಲಂಗಾರು–ಕಾರ್ಕಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಸುರಿದು ರಸ್ತೆ ಮುಚ್ಚಿ ಪ್ರತಿಭಟನೆ ನಡೆಸಿದ ಸ್ಥಳೀಯರು](https://dhwaninews.com/nh-closedprotest/): ಉಡುಪಿ, ಏ. 15 : ಪದೇಪದೇ ಅಪಘಾತಗಳು ನಡೆಯುತ್ತಿರುವ ಆಲಂಗಾರು–ಕಾರ್ಕಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯರು ಸೋಮವಾರ ಟಿಪ್ಪರ್ ಲಾರಿಯಲ್ಲಿ ಮಣ್ಣು ಸುರಿದು ರಸ್ತೆ ಮುಚ್ಚಿ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರೂ ಭದ್ರತಾ ಕ್ರಮಗಳ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರವೂ ಕಾರೊಂದು ಅಪಘಾತಕ್ಕೀಡಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಸಾರ್ವಜನಿಕರ ಮನವಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಟಿಪ್ಪರ್ ಲಾರಿಗಳ ಮೂಲಕ ಮಣ್ಣು ತರಿಸಿ ಹೆದ್ದಾರಿಯ ಮೇಲೆ ಸುರಿದು ಸಂಚಾರ ತಡೆದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಪ್ರತಿಭಟನೆಗಳ ಮೂಲಕವಾದರೂ ಅಧಿಕಾರಿಗಳ ಗಮನ ಸೆಳೆಯಬೇಕು, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - [ಬೆಂಗಳೂರು : ಕೈ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ - ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಗೆ ಆತಂಕ !](https://dhwaninews.com/jameer_sankasta/): ಬೆಂಗಳೂರು, ಏ. 15 : ದಾವಣಗೆರೆ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಷಡ್ಯಂತ್ರ ರೂಪಿಸಿದ್ದರು ಎಂಬ ಆಡಿಯೋ ದಾಖಲೆ ಕಾಂಗ್ರೆಸ್‌ ಹೈಕಮಾಂಡ್‌ ಕೈಸೇರಿದೆ. ಸದ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ಪೈಕಿ 2 ನೇ ತಲೆದಂಡವಾಗಿದೆ. ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ ಆಪಾದನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಬೆಲೆ ತೆತ್ತಿದ್ದಾರೆ. ಇದೇ ಆರೋಪ ಎದುರಿಸುತ್ತಿರುವ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೂ ಆತಂಕ ಶುರುವಾಗಿದೆ. ನಸೀರ್‌ ಅಹ್ಮದ್‌ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ನಸೀರ್‌ 2023ರ ಜೂನ್‌ 1ರಿಂದ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದರು. ದಾವಣಗೆರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮೂರು ದಿನಗಳ ಹಿಂದಷ್ಟೇ ಅಬ್ದುಲ್‌ ಜಬ್ಬರ್‌ ಅವರಿಗೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸ್ಥಾನದಿಂದ ಗೇಟ್‌ ಪಾಸ್‌ ನೀಡಲಾಗಿತ್ತು. […] - [ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಿರಿಂಜ್ ಮರುಬಳಕೆ - 331 ಮಕ್ಕಳಿಗೆ ಹೆಚ್‌ಐವಿ ಸೋಂಕು](https://dhwaninews.com/pak_injection-hiv/): ಇಸ್ಲಾಮಾಬಾದ್, ಏ. 15 : ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಸಿರಿಂಜ್ ಮರುಬಳಕೆ ಮಾಡಿದ ಪರಿಣಾಮ 331 ಮಕ್ಕಳಿಗೆ ಹೆಚ್‌ಐವಿ ಸೋಂಕು ತಗುಲಿರುವ ಆಘಾತಕಾರಿ ಘಟನೆ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳು ಮುಂದುವರೆದಿವೆ. ಮಕ್ಕಳಲ್ಲಿ ಹೆಚ್‌ಐವಿ ಪ್ರಕರಣಗಳು ಹೆಚ್ಚಾದ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಹಸ್ಯ ದೃಶ್ಯಾವಳಿಗಳು ಮತ್ತು ಅಧಿಕೃತ ದತ್ತಾಂಶವನ್ನು ಆಧರಿಸಿದ ಸಂಶೋಧನೆಗಳು, THQ ಟೌನ್ಸಾ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣದಲ್ಲಿನ ವ್ಯವಸ್ಥಿತ ವೈಫಲ್ಯಗಳನ್ನು ಸೂಚಿಸುತ್ತವೆ. ಅಲ್ಲಿ ಮರುಬಳಕೆ ಮಾಡಲಾದ ಸಿರಿಂಜ್‌ಗಳು ಮತ್ತು ಕಲುಷಿತ ಬಾಟಲುಗಳು ನೂರಾರು ಮಕ್ಕಳನ್ನು ಸೋಂಕಿಗೆ ದೂಡಿವೆ ಎಂದು ತಿಳಿದುಬಂದಿದೆ. ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಡೇಟಾವನ್ನು ಬಳಸಿಕೊಂಡು ತನಿಖಾ ವರದಿ ಮಾಡಲಾಗಿದೆ. 2024ರ ನವೆಂಬರ್‌ನಿಂದ 2025 ರ ಅಕ್ಟೋಬರ್ ನಡುವೆ ಟೌನ್ಸಾದಲ್ಲಿ ಹೆಚ್‌ಐವಿ ಪಾಸಿಟಿವ್ ಪರೀಕ್ಷೆಯಲ್ಲಿ 331 ಮಕ್ಕಳಿಗೆ ಸೋಂಕು ತಗುಲಿದೆ. 2024 ರ ಕೊನೆಯಲ್ಲಿ ಸ್ಥಳೀಯ […] - [ಸಂಪುಟ ಪುನರ್ ರಚನೆಯ ಸುಳಿವು ಇದೆ ಸುಳಿವು ನೀಡಿದ ಗೃಹ ಸಚಿವ ಪರಮೇಶ್ವರ್](https://dhwaninews.com/samputa_parameshwar/): ತುಮಕೂರು, ಏ. 14 : ಸಂಪುಟ ಪುನರ್ ರಚನೆಯ ಸುಳಿವು ಇದೆ. ಈ ಮುನ್ಸೂಚನೆ ಇರೋದರಿಂದಲೇ 30 ಜನ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿದ್ದಲ್ವಾ ಎಂದು ಹೇಳುವ ಮೂಲಕ ಸಂಪುಟ ಪುನಾರಚನೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೂರ್ನಾಲ್ಕು ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳೋದು ಅವರ ಹಕ್ಕು ಅದರಲ್ಲಿ ತಪ್ಪೇನಿಲ್ಲ. ಆದರೆ ಸಿಎಂ ಬದಲಾವಣೆ ವಿಚಾರ ಆಗಲಿ ಅಥವಾ ಸಂಪುಟ ಪುನಾರಚನೆ ಆಗಲಿ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ” ಎಂದು ಹೇಳಿದರು. “ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಯುವ ಸಲುವಾಗಿಯೇ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿದ್ದು. ಅವರು ಎಲ್ಲಾಕಡೆಯೂ ಹುಡುಕಿ ಹುಡುಕಿ ಶುದ್ಧ ಮಾಡುತ್ತಿದ್ದಾರೆ. ಆ ಅಕ್ರಮಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಹಾಗಾಗಿಯೇ ಎಫ್‌ಐಆರ್ ಆಗುತ್ತಿದೆ” ಎಂದರು. - [ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್](https://dhwaninews.com/najeer_rajiname/): ಬೆಂಗಳೂರು, ಏ. 14 : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹ್ಮದ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಪತ್ರವನ್ನು ಸಿಎಂ ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ. ಸೋಮವಾರ (ಏ.13) ರಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್‌ಗೆ ಡೆಡ್‌ಲೈನ್ ನೀಡಿದ್ದರು. ಜೊತೆಗೆ ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಿದ್ದರು. ಒಂದು ವೇಳೆ ಸಂಜೆಯೊಳಗೆ ನಜೀರ್ ಅಹಮ್ಮದ್ ರಾಜೀನಾಮೆ ಕೊಡದಿದ್ದರೆ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸುವುದಾಗಿ ತಿಳಿಸಿದ್ದರು. ಇದೀಗ ಕೊನೆ ಕ್ಷಣದಲ್ಲಿ ನಜೀರ್ ಅಹಮ್ಮದ್ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. - [ಕೇರಳ : ಮೊನಾಲಿಸಾ ಬೋಂಸ್ಲೆ ನಾಪತ್ತೆ - ತನಿಖೆಯ ದಾರಿ ತಪ್ಪಿಸುವ ಸಂಚು ಎಂದ ಮೊನಾಲಿಸಾ ತಾಯಿ](https://dhwaninews.com/monalisa_napatthe/): ಕೇರಳ, ಏ. 13 : ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಕೇರಳದಲ್ಲಿ ಮೊನಾಲಿಸಾ ಮದುವೆ ನಡೆದಿತ್ತು. ಈ ಘಟನೆ ಹಲವಾರು ತಿರುವುಗಳನ್ನು ಪಡೆದುಕೊಂಡಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಮನಾಲಿಸಾ ತನ್ನ ಪತಿಯನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಮನಾಲಿಸಾ ಮತ್ತು ಫರ್ಮಾನ್ ಮದುವೆಯಾದ ಬೆನ್ನಲ್ಲೇ ಮುನಾಲಿಸಾಹಳಿಗೆ ಇನ್ನೂ 18 ವರ್ಷ ತುಂಬಿಲ್ಲ, ಅವಳು ಇನ್ನು ಅಪ್ರಾಪ್ತೇ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಿರುವಾಗ ಈ ಲವ್ ಸ್ಟೋರಿ ಇನ್ನೊಂದು ತಿರುವು ಪಡೆದಿದ್ದು ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಫರ್ಮಾನ್ ಖಾನ್ ಅಲವತ್ತುಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ಫರ್ಮಾನ್, ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಹೇಳಿದ್ಧಾರೆ. ಈ […] - [ಬೆಳ್ತಂಗಡಿ : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ](https://dhwaninews.com/swacchatha_andolana-2/): ಬೆಳ್ತಂಗಡಿ, ಏ. 11 : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿ. ಬೆಳ್ತಂಗಡಿ ತಾಲೂಕು, ‘ಶೌರ್ಯ’ ವಿಪತ್ತು ವಿಭಾಗ, ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಸ್ವಚ್ಚತಾ ಆಂದೋಲನ – 2026 ಏ 12ರಂದು ನಡೆಯಿತು. ಹಳ್ಳಿಯಿಂದ ನಗರವರೆಗೆ – ನಮ್ಮ ಸ್ವಚ್ಛತೆ, ನಮ್ಮಜವಾಬ್ದಾರಿ ಎಂಬ ಘೋಷವಾಕ್ಯದಡಿಯಲ್ಲಿ ಸವಣಾಲುವಿನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ ಸುಮಾರು 8ಕಿ.ಮೀ ಸ್ವಚ್ಛತಾ ಅಭಿಯಾನ ನಡೆಸಲಾಯಿತು. - [ಉಪ್ಪಿನಂಗಡಿ : ದ್ವಿಚಕ್ರ ಸವಾರರೇ ಎಚ್ಚರ - ಮೈಲೇಜ್ ಸಾಧನದ ಹೆಸರಲ್ಲಿ ವಂಚಿಸುತ್ತಿದೆ ಗ್ಯಾಂಗ್ !](https://dhwaninews.com/mailage_vanchane/): ಉಪ್ಪಿನಂಗಡಿ, ಏ. 13 : ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರರನ್ನು ತಡೆದು, ಬೈಕ್‌ಗೆ ಹೆಚ್ಚಿನ ಮೈಲೇಜ್ ನೀಡುವ ಸಾಧನ ಅಳವಡಿಸಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್‌ವೊಂದರ ಬಗ್ಗೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಅಂಡರ್‌ಪಾಸ್ ಬಳಿ ಟೈಲರ್ ಒಬ್ಬರನ್ನು ತಡೆದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಬೈಕ್‌ಗೆ ಮೈಲೇಜ್ ಹೆಚ್ಚಿಸುವ ಡಿವೈಸ್ ಅಳವಡಿಸುತ್ತೇನೆ ಎಂದು ಹೇಳಿ 1,000 ರೂಪಾಯಿ ಬೇಡಿಕೆಯಿಟ್ಟಿದ್ದಾನೆ. ಈ ವಿಚಾರವಾಗಿ ಸವಾರ ಮತ್ತು ಆ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಂಚಕ ಅಲ್ಲಿಂದ ಪರಾರಿಯಾಗಿದ್ದಾನೆ. ಇದೇ ಮಾದರಿಯಲ್ಲಿ ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಈ ಗ್ಯಾಂಗ್‌ನಿಂದ ವಂಚನೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. - [ಬೆಳ್ತಂಗಡಿ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ವಿವೇಚನಾ ಅನುದಾನದಡಿ ತಾಲೂಕಿನ ದೇವಸ್ಥಾನಗಳಿಗೆ ಅನುದಾನ ಮಂಜೂರು](https://dhwaninews.com/mla_harish-poonja_temple/): ಬೆಳ್ತಂಗಡಿ, ಏ. 13 : ಶಾಸಕ ಶ್ರೀ ಹರೀಶ್ ಪೂಂಜ ಅವರ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ವಿವೇಚನಾ ಅನುದಾನದಡಿ ತಾಲೂಕಿನ ದೇವಸ್ಥಾನಗಳಿಗೆ ಅನುದಾನ ಒದಗಿಸಿದ್ದಾರೆ. ತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿಶೇಷ ಮುತುವರ್ಜಿ ವಹಿಸಿ ಮಹತ್ವದ ಅನುದಾನವನ್ನು ಒದಗಿಸಿದ್ದಾರೆ. ಅನುದಾನ ವಿವರಗಳು: 🔸 ಗರ್ಡಾಡಿ ಗ್ರಾಮದ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಅಭಿವೃದ್ಧಿಗೆ ರೂ.1.00ಕೋಟಿ.🔸ಕರಾಯ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರೂ.20.00ಲಕ್ಷ.🔸 ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ ಅಭಿವೃದ್ಧಿ ಕಾರ್ಯಕ್ಕೆ – ₹10.00 ಲಕ್ಷ🔸 ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ – ₹5.00 ಲಕ್ಷ🔸 ಶ್ರೀ ಅನಂತೇಶ್ವರ ದೇವಸ್ಥಾನ, ಬಳ್ಳಮಂಜ – ₹10.00 ಲಕ್ಷ🔸ಚಿಬಿದ್ರೆ ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕುಡುಮಡ್ಕ – ₹5.00 ಲಕ್ಷ🔸 ಮಚ್ಚಿನ ಗ್ರಾಮದ ಮಾಣೂರು ಶ್ರೀ ಧರ್ಮಶಾಸ್ತಾವು ದೇವಸ್ಥಾನ – ₹10.00 ಲಕ್ಷ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸದಾ ಬದ್ಧರಾಗಿರುವ ತಾಲೂಕಿನ ಅಭಿವೃದ್ಧಿ ಹರಿಕಾರರಿಗೆ ಬೆಳ್ತಂಗಡಿ ಬಿಜೆಪಿ […] - [ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶಕ್ಕೆ](https://dhwaninews.com/dana_sagata_vashakke/): ಮೂಡುಬಿದಿರೆ, ಏ. 13 : ಹಿಂಸಾತ್ಮಕವಾಗಿ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ಎರಡು ವಾಹನಗಳನ್ನು ಮೂಡುಬಿದಿರೆ ಪೊಲೀಸರು ಭಾನುವಾರ ತೋಡಾರು ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರತಿಭಾ ಕೆ.ಸಿ. ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತೋಡಾರು ಗ್ರಾಮದ ಪ್ರವೇಶದ್ವಾರದ ಬಳಿ ಗರಡಿ ಕಡೆಯಿಂದ ಬರುತ್ತಿದ್ದ ವ್ಯಾಗನ್-ಆರ್ ಕಾರು ಮತ್ತು ಅದನ್ನು ಹಿಂಬಾಲಿಸುತ್ತಿದ್ದ ಪಿಕಪ್ ವಾಹನವನ್ನು ತಡೆಯಲು ಸಂಕೇತ ನೀಡಿದರು. ಆದರೆ, ವಾಹನಗಳು ನಿಲ್ಲಿಸದೆ ಮುನ್ನುಗ್ಗಿದಾಗ ಪೊಲೀಸರು ಬೆನ್ನಟ್ಟಿ ಅವುಗಳನ್ನು ತಡೆದಿದ್ದಾರೆ. ಪೊಲೀಸರು ವಾಹನವನ್ನು ಸುತ್ತುವರಿಯುತ್ತಿದ್ದಂತೆಯೇ, ಪಿಕಪ್ ಚಾಲಕ ಹರ್ಷದ್ ಮತ್ತು ಆತನೊಂದಿಗಿದ್ದ ಇತರರು ಸ್ಥಳದಿಂದ ಓಡಿಹೋಗಿದ್ದಾರೆ. ಪಿಕಪ್ ವಾಹನಕ್ಕೆ ಬೆಂಗಾವಲಾಗಿ (ಎಸ್ಕಾರ್ಟ್) ಬಂದಿದ್ದ ವ್ಯಾಗನ್-ಆರ್ ಕಾರಿನ ಚಾಲಕ ಸಫರ್ ಹಾಗೂ ಹಂಡೇಲು ನಿವಾಸಿ ಅಬೂಬಕರ್ ಕೂಡ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಪಿಕಪ್ […] - [ಉಪ್ಪಿನಂಗಡಿ : ಜೀಪು ಮತ್ತು ಥಾರ್ ನಡುವೆ ಡಿಕ್ಕಿ - ಚಾಲಕರು ಅಪಾಯದಿಂದ ಪಾರು](https://dhwaninews.com/thar_jeep-accident/): ಉಪ್ಪಿನಂಗಡಿ, ಏ. 13 : ಜೀಪು ಮತ್ತು ಥಾರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಜೀಪ್ ಮುಂಭಾಗ ಸಂಪೂರ್ಣ ಹಾನಿಗೊಂಡಿದ್ದು, ಮಗುಚಿ ಬಿದ್ದಿದೆ. ಘಟನೆ ಪರಿಣಾಮ ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಚಾಲಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. - [IPL-2026 : ಆರ್ ಸಿಬಿ ಸರ್ವಾಂಗಿಣ ಹೋರಾಟಕ್ಕೆ ತವರಿನಲ್ಲೇ ಮಣಿದ ಮುಂಬೈ ಇಂಡಿಯನ್ಸ್ !](https://dhwaninews.com/ipl-2026-rcb_mi/): IPL-2026 : ಆರ್ ಸಿಬಿ ಆರಂಭಿಕ ದಾಂಡಿಗ ಫಿಲ್ ಸಾಲ್ಟ್ ಸ್ಫೋಟಕ ಅರ್ಧಶತಕ, ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಹಾಗೂ ನಾಯಕನ ಜವಾಬ್ದಾರಿಯುತ ಅರ್ಧಶತಕ ಮತ್ತು ನಿರ್ಣಾಯಕ ಹಂತದಲ್ಲಿ ಪ್ರಮುಖ ವಿಕೆಟ್ ಕಬಳಿಸಿದ ಸುಯೇಶ್ ಶರ್ಮಾ. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಬಳಗವನ್ನು 18 ರನ್ ಗಳಿಂದ ಪರಾಭವಗೊಳಿಸಿತು. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 6 ಅಂಕಗಳನ್ನು ಕಲೆ ಹಾಕಿದ ರಜತ್ ಪಾಟೀದಾರ್ ಬಳಗ ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವುದರಿಂದ 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 […] - [ವಿಟ್ಲ : ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಅಪರಿಚಿತ KTM ಬೈಕ್ ಸವಾರ !](https://dhwaninews.com/ktmrider_gold-theft/): ವಿಟ್ಲ, ಏ. 13 : ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ. ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಕೆಟಿಎಂ (KTM) ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಮಗುವಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಸವಾರನು ಹೆಲೈಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ, ಜನಸಾಮಾನ್ಯರು ಭಯರಹಿತವಾಗಿ ಜೀವನ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. - [ಕಲ್ಮಂಜ : ಬೂತ್ ಸಂಖ್ಯೆ 89ರ ಗ್ರಾಮ ಪಂಚಾಯತ್ ಸದಸ್ಯರಿಗೆ ಬಿಜೆಪಿ ವತಿಯಿಂದ ಸನ್ಮಾನ](https://dhwaninews.com/kalmanja_bjp89/): ಕಲ್ಮಂಜ, ಏ. 13 : ಗ್ರಾಮದ ಬೂತ್ ಸಂಖ್ಯೆ 89ರ ಭಾರತೀಯ ಜನತಾ ಪಕ್ಷದ ಸಭೆಯು ಬೂತ್ ಅಧ್ಯಕ್ಷರಾದ ಅನಿಲ್ ಗೌಡ ಇವರ ಮನೆಯಲ್ಲಿ ಏ. 12ರಂದು ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಸದಸ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಲ್ಮಂಜ – ಬೂತ್ ಸಂಖ್ಯೆ 89ರ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕಳೆದ 05 ವರ್ಷಗಳ ಕಾಲ ಆಡಳಿತ ನಡೆಸಿದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಪ್ರವೀಣ್ ಗೌಡ ಕರಿಯನೆಲ, ಶ್ರೀಮತಿ ಶೋಭಾವತಿ, ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲೇ ಮೊದಲು ಎಂಬಂತೆ ಗ್ರಾಮ ಪಂಚಾಯತ್ ಸದಸ್ಯರ ಕಾರ್ಯವೈಖರಿಯನ್ನು ಗುರುತಿಸಿ, ಗೌರವಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಬಿಜೆಪಿ ಕಲ್ಮಂಜ ಶಕ್ತಿ ಕೇಂದ್ರದ ಪ್ರಭಾರಿಗಳಾದ ಶ್ರೀಮತಿ ಪೂರ್ಣಿಮಾ ಅವರು, ಬಿಜೆಪಿ ಪಕ್ಷವು ತನ್ನ ತತ್ವ ಸಿದ್ಧಾಂತವನ್ನೇ ನಂಬಿಕೊಂಡಿರುವ ಪಕ್ಷ ಹೀಗಾಗಿಯೇ ಇಂದು ಜಗತ್ತಿನಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. […] - [ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ](https://dhwaninews.com/vidvath_result/): ಬೆಳ್ತಂಗಡಿ, ಏ. 13 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿದ್ದಾರೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 28 ಮಂದಿ ವಿದ್ಯಾರ್ಥಿಗಳು ಶೇ.95 ಕ್ಕಿಂತ ಅಧಿಕ ಹಾಗೂ 74 ವಿದ್ಯಾರ್ಥಿಗಳು ಶೇ.90 ಕ್ಕಿಂತ ಅಧಿಕ ಫಲಿತಾಂಶ ದಾಖಲಿಸಿದ್ದಾರೆ. 102 ಮಂದಿ ಅತ್ಯುನ್ನತ ಶ್ರೇಣಿ ಹಾಗೂ 38 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ‌. ಇವುಗಳಲ್ಲಿ 66 ಮಂದಿ ವಿದ್ಯಾರ್ಥಿಗಳು ಭಾಷಾವಾರು 100 ಕ್ಕೆ 100 ಅಂಕ ಪಡೆಯುವ ಮೂಲಕ ಪ್ರಥಮ ಪ್ರಯತ್ನದಲ್ಲೇ ವಿಶೇಷ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗ : ವಿಜ್ಞಾನ ವಿಭಾಗದಲ್ಲಿ ತನುಶ್ರೀ (593) ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಹಾಗೂ (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100), ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಚಿನ್ಮಯ್ ಜಿ.ಕೆ.(589) ಅಂಕ (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) […] - [ಮಂಗಳೂರು : ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ - ಬೆಳ್ತಂಗಡಿಯ ಯುವಕ ಮೃತ್ಯು](https://dhwaninews.com/tipper_bike-accident/): ಮಂಗಳೂರು, ಏ. 12 : ರಾ.ಹೆ. 66ರ ನಂತೂರು-ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಏ.11ರಂದು ರಾತ್ರಿ ನಡೆದಿದೆ. ಮೃತ ಸವಾರನನ್ನು ಕಳೆಂಜದ ಗೋಪಾಲಕೃಷ್ಣ (29) ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. - [ಬೆಳ್ತಂಗಡಿ : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ "ಬೃಹತ್ ಸ್ವಚ್ಚತಾ ಆಂದೋಲನ - 2026"](https://dhwaninews.com/swacchatha_andolana/): ಬೆಳ್ತಂಗಡಿ, ಏ. 11 : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿ. ಬೆಳ್ತಂಗಡಿ ತಾಲೂಕು, ‘ಶೌರ್ಯ’ ವಿಪತ್ತು ವಿಭಾಗ, ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಸ್ವಚ್ಚತಾ ಆಂದೋಲನ – 2026 ಏ 12ರ ಆದಿತ್ಯವಾರದಂದು ಸಂಜೆ 3.30 ಗಂಟೆಗೆ ನಡೆಯಲಿದೆ. ಹಳ್ಳಿಯಿಂದ ನಗರವರೆಗೆ – ನಮ್ಮ ಸ್ವಚ್ಛತೆ, ನಮ್ಮಜವಾಬ್ದಾರಿ ಎಂಬ ಘೋಷವಾಕ್ಯದಡಿಯಲ್ಲಿ ಸವಣಾಲುವಿನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ (ಸುಮಾರು 8ಕಿ.ಮೀ) ಈ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ. - [ಉತ್ತರ ಪ್ರದೇಶ : ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು - ಬೈಕ್ ಸ್ಟಾರ್ಟ್ ಆಗದೆ ಪರದಾಡಿದ ಆರೋಪಿಗಳು - Video ವೈರಲ್](https://dhwaninews.com/lawyer_firing/): ಉತ್ತರ ಪ್ರದೇಶ, ಏ. 11 : ಇಲ್ಲಿನ ಕತ್ವಾರು ಕಾ ಪುರ ಪ್ರದೇಶದಲ್ಲಿ ಶನಿವಾರ(ಏ11) ಬೆಳ್ಳಂಬೆಳಗ್ಗೆ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕೃತ್ಯ ಎಸಗಿದ ಬಳಿಕ ದಾಳಿಕೋರರು ಬೈಕ್ ಸ್ಥಗಿತಗೊಂಡಿದ್ದರಿಂದ ತಪ್ಪಿಸಿಕೊಳ್ಳಲು ಕೆಲ ಕಾಲ ಹೆಣಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹತ್ಯೆಗೀಡಾದ ವಕೀಲ ರಾಜೀವ್ ಸಿಂಗ್ ಅವರು ತಮ್ಮ ದಿನನಿತ್ಯದ ಬೆಳಗಿನ ವಾಕಿಂಗ್ ಗೆ ಹೊರಟಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಅವರನ್ನು ಸಮೀಪಿಸಿದ್ದು, ಒಬ್ಬಾತ ದೇಶೀಯ ಪಿಸ್ತೂಲಿನಿಂದ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಸಿಂಗ್ ತತ್ ಕ್ಷಣವೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ದಾಳಿಕೋರನು ಒಳಗೆ ಬರುವ ಮೊದಲು ಕಾಯುತ್ತಾ ನಿಂತು ಹತ್ತಿರದಿಂದ ಗುಂಡು ಹಾರಿಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ,ಇನ್ನೊಬ್ಬ ಸಹಚರ ಮೋಟಾ‌ರ್ ಸೈಕಲ್‌ನಲ್ಲಿ ಕುಳಿತಿದ್ದ. ಗುಂಡು ಹಾರಿಸಿದ ನಂತರ, ದಾಳಿಕೋರ ಬೈಕ್‌ನತ್ತ ಓದಿದ್ದು ಕೆಲ ಹೊತ್ತು ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಇದರಿಂದಾಗಿ ಅವರು ತಪ್ಪಿಸಿಕೊಳ್ಳುವುದು ವಿಳಂಬವಾಯಿತು. ಆ ಹೊತ್ತಿಗೆ, ಕೆಲವು […] - [ಉಜಿರೆ : ದಶಮಾನೋತ್ಸವದ ಸಂಭ್ರಮದಲ್ಲಿ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ; ಏ. 18ರಂದು "ಉಜಿರೆ ಸ್ಟಾರ್ ನೈಟ್ - ದಶಕದ ಸಂಭ್ರಮ"](https://dhwaninews.com/hip-boyz-dance_crew/): ಉಜಿರೆ, ಏ. 11 : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಚಿರಪರಿಚಿತವಾದ ನೃತ್ಯ ತಂಡ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ತಂಡಕ್ಕೀಗ ದಶಮಾನೋತ್ಸವದ ಸಂಭ್ರಮ. ದಶಮಾನೋತ್ಸವದ ಹಿನ್ನಲೆಯಲ್ಲಿ ಏಪ್ರಿಲ್ 18 ಶನಿವಾರದಂದು ಸಂಜೆ ಗಂಟೆ 6 ರಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಉಜಿರೆ ಸ್ಟಾರ್ ನೈಟ್ – ದಶಕದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಹನ್ ಎಂ.ಎಸ್ ಮಾಹಿತಿ ನೀಡಿದ್ದಾರೆ. 2015 ರ ಲ್ಲಿ ಸಹನ್ ಎಂ.ಎಸ್ ಉಜಿರೆ ಇವರ ನೇತೃತ್ವದಲ್ಲಿ ಪ್ರಾರಂಭವಾದ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಸಂಸ್ಥೆ, ಇಂದು ಬೃಹತ್ ಆಗಿ ಬೆಳೆದು ನಿಂತು, ಸಾವಿರಾರು ವಿದ್ಯಾರ್ಥಿಗಳ ನೃತ್ಯ ಸಾಧನೆಗ ಮೆಟ್ಟಿಲಾಗಿ ನಿಂತಿದೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಅನೇಕ ಟಿ.ವಿ ರಿಯಾಲಿಟಿ ಶೋ ಗಳಲ್ಲಿ, ಸೀರಿಯಲ್ ಗಳಲ್ಲಿ, ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೃಜನಾತ್ಮಕ ನೃತ್ಯ ಪ್ರದರ್ಶನದ ಮೂಲಕ ಹೆಸರುವಾಸಿಯಾಗಿರುವ ಈ ತಂಡ ಕರ್ನಾಟಕದಲ್ಲೇ ವೈರಲ್ ತಂಡ ಇದಾಗಿದೆ. […] - [ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ - ವಿದ್ಯಾರ್ಥಿನಿ ನೇಣಿಗೆ ಶರಣು ; ಕೊಲೆ ಶಂಕೆ !](https://dhwaninews.com/suicide_/): ಬೆಂಗಳೂರು, ಏ. 11 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೋರಾಯನಪಾಳ್ಯದ ನಿವಾಸಿ ತನುಶ್ರೀ (18) ಆತಹತ್ಯೆಗೆ ಶರಣಾದ ವಿದ್ಯಾರ್ಥಿನಿ. ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ತನುಶ್ರೀ ಅನುತ್ತೀರ್ಣಗೊಂಡಿದ್ದಳು. ಇದರಿಂದ ನೊಂದು ಮನೆಯಲ್ಲಿ ಫ್ಯಾನಿಗೆ ವೆಲ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಳು. ಇದಾದ ಕೆಲವು ಹೊತ್ತಿನ ಬಳಿಕ ಬಳಿಕ ಈಕೆಯ ತಾಯಿ ಅಶಾ ಅವರು ಕೊಠಡಿಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.ಕೂಡಲೇ ಸ್ಥಳೀಯರ ಸಹಾಯದಿಂದ ನೇಣಿನ ಕುಣಿಕೆಯಿಂದ ಮಗಳನ್ನು ಇಳಿಸಲಾಗಿದೆ. ವಿಚಾರ ತಿಳಿದು ಹೆಬ್ಬಾಳ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಅಲ್ಲ, ಕೊಲೆ : ಸಂಬಂಧಿಕರ ದೂರು ತನುಶ್ರೀ ಆತ್ಮಹತ್ಯೆ ಬಗ್ಗೆ ಆಕೆಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿ […] - [ಬಂಟ್ವಾಳ : ಮದರಂಗಿ ಕಾರ್ಯಕ್ರಮದ ನಿರೂಪಣೆ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಯುವ ನಿರೂಪಕ ಮೃತ್ಯು](https://dhwaninews.com/mc_ashwith-death/): ಬಂಟ್ವಾಳ, ಏ. 11 : ಯುವ ನಿರೂಪಕನೋರ್ವ ಮದರಂಗಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿಥ್ ( 32) ಮೃತಪಟ್ಟ ವ್ಯಕ್ತಿ. ನಾಯಿಲದ ಸಂಬಂಧಿಕರ ಮನೆಯಲ್ಲಿ ಮದರಂಗಿ ಕಾರ್ಯಕ್ರಮದ ನಿರೂಪಣೆಗಾಗಿ ವೇದಿಕೆ ಹತ್ತಿ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ಹಠಾತ್ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ - ಏ.17ರಂದು ಶಿಕ್ಷೆಯ ಪ್ರಮಾಣ ಪ್ರಕಟ !](https://dhwaninews.com/bomb_apr17_shikshe/): ಬೆಂಗಳೂರು, ಏ. 11 : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ (ಐಇಡಿ) ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್‌ನ ತಪ್ರೊಪ್ಪಿಗೆ ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ಈ ಹಿಂದೆಯೇ ಮಾನ್ಯ ಮಾಡಿದ್ದು, ಏ.17ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಾಧ್ಯತೆಗಳಿವೆ. ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಆರೋಪಿಗೆ ಅಂತಿಮವಾಗಿ ಕಠಿಣ ಶಿಕ್ಷೆ ವಿಧಿಸುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಏ.17ಕ್ಕೆ ಮೊಹಮ್ಮದ್ ಶಾರೀಕ್‌ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಾಧ್ಯತೆಗಳಿವೆ. ಕಳೆದ 3 ತಿಂಗಳ ಹಿಂದೆಯೇ ಆರೋಪಿ ಶಾರೀಕ್ ತಾನು ಕೃತ್ಯ ಎಸಗಿದ್ದಾಗಿ ತಪ್ರೊಪ್ಪಿಕೊಂಡು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಈ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿ 2024ರಲ್ಲಿ ಆರೋಪಿಗಳಾದ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. - [ಕುಂಭಮೇಳ ವೈರಲ್ ಹುಡುಗಿ ಮೊನಾಲಿಸಾ ಅಪ್ರಾಪ್ತೆ - ಪತಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಅಡಿ ಪ್ರಕರಣ !](https://dhwaninews.com/monalisa_16-age/): ನವದೆಹಲಿ, ಏ. 10 : ಕುಂಭಮೇಳ ಸಂಧರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಸೃಷ್ಟಿಸಿ ಸುದ್ದಿಯಾಗಿದ್ದ ಕುಂಭಮೇಳದ ಹುಡುಗಿ ಮೊನಾಲಿಸಾ ಇದೀಗ ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅಂತರ್ಧರ್ಮ ವಿವಾಹದ ಮೂಲಕ ಗಮನ ಸೆಳೆದಿದ್ದ ಮೊನಾಲಿಸಾ ಮೂಲತಃ ಅಪ್ರಾಪ್ತೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮನ್ ಖಾನ್ ವಿರುದ್ಧ ಗಂಭೀರ ಕಾನೂನು ಕ್ರಮ ಜರುಗಿಸಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ವಿವರವಾದ ತನಿಖೆಯ ನಂತರ, ಮೊನಾಲಿಸಾ ಮದುವೆಯ ಸಮಯದಲ್ಲಿ ಅಪ್ರಾಪ್ತೆಯಾಗಿದ್ದರು ಎಂಬುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಮಧ್ಯಪ್ರದೇಶದ ಖಾರ್ಗೋನೆ ಜಿಲ್ಲೆಯ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಮೊನಾಲಿಸಾ ಅಪ್ರಾಪ್ತೆ – 16 ವರ್ಷ ! ಮೊನಾಲಿಸಾ ಮತ್ತು ಫರ್ಮನ್ ಖಾನ್ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ಧರ್ಮ ವಿವಾಹವಾದ್ದರಿಂದ ಸುದ್ದಿಯಲ್ಲಿದ್ದರು. ಆಕೆಯ ವಯಸ್ಸಿನ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಎನ್‌ಸಿಎಸ್‌ಟಿ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ಮೇಲ್ವಿಚಾರಣೆಯಲ್ಲಿ […] - [ವಿಶಾಖಪಟ್ಟಣಂ : ಸೆಲ್ಫಿ ಕ್ರೇಝ್ ಗೆ ಮೂವರು ಯುವತಿಯರು ದುರಂತ ಅಂತ್ಯ !](https://dhwaninews.com/selfie_3-girls_death/): ವಿಶಾಖಪಟ್ಟಣಂ, ಏ. 10 : ಪ್ರಕೃತಿಯ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಹೋದ ಮೂವರು ಯುವತಿಯರು ಜಲಪಾತದ ಸುಳಿಗೆ ಸಿಲುಕಿ ಮೃತಪಟ್ಟಿರುವ ಘೋರ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ತ್ರಿಶಾ (17), ರತ್ನಕುಮಾರಿ (16) ಮತ್ತು ಪವಿತ್ರಾ (16) ಎಂದು ಗುರುತಿಸಲಾಗಿದೆ. ಜಿಲ್ಲೆಯ ಜಂಬುವಲಸ ಗ್ರಾಮದ ನಾಲ್ವರು ಯುವತಿಯರು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮುಲುಗುಮ್ಮಿ ಜಲಪಾತಕ್ಕೆ ಪ್ರವಾಸ ಹೋಗಿದ್ದರು. ಜಲಪಾತದ ಬಳಿ ಆಟವಾಡುತ್ತಾ ಫೋಟೋ ಹಾಗೂ ಸೆಲ್ಪಿ ತೆಗೆದುಕೊಳ್ಳಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ. ಕಲ್ಲಿನ ಮೇಲೆ ನಿಂತು ಸೆಲ್ಸಿ ತೆಗೆದುಕೊಳ್ಳುವಾಗ ಆಯತಪ್ಪಿ ಮೂವರು ನೀರಿಗೆ ಬಿದ್ದಿದ್ದಾರೆ. ಮೊದಲು ನೀರಿನಲ್ಲಿ ಆಟವಾಡುತ್ತಾ ನಗುತ್ತಿದ್ದ ಯುವತಿಯರು, ಕ್ಷಣಾರ್ಧದಲ್ಲೇ ಪ್ರಾಣ ಉಳಿಸಿಕೊಳ್ಳಲು ಕಿರುಚಾಡತೊಡಗಿದರು. ನೀರಿನ ಸೆಳೆತ ಹೆಚ್ಚಿದ್ದರಿಂದ ಹಾಗೂ ಈಜು ಬಾರದ ಕಾರಣ ಅವರು ನೀರಿನಲ್ಲಿ ಮುಳುಗಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಾಲ್ವರ ಪೈಕಿ ಓರ್ವ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ […] - [ಬೆಂಗಳೂರು : ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಸಾವು - ಮೃತರ ಕುಟುಂಬಕ್ಕೆ5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ](https://dhwaninews.com/cm_parihara/): ಬೆಂಗಳೂರು, ಏ. 10 : ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಗಿದೆ ಎಂದು ತಿಳಿಸಿದ್ದಾರೆ. ಮೃತ ಕಾರ್ಮಿಕರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ದುಡಿಯುವ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು, ಮಾನವೀಯ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ […] - [ಬೆಳ್ತಂಗಡಿ : ಗುರಿಪಳ್ಳ ನಿವಾಸಿ ಸ್ವರ್ಣಿತ್ ಶೆಟ್ಟಿ ಅಂಡರ್ - 16 ಮಂಗಳೂರು ಕ್ರಿಕೆಟ್ ತಂಡಕ್ಕೆ ಆಯ್ಕೆ](https://dhwaninews.com/swarnith_shetty/): ಬೆಳ್ತಂಗಡಿ, ಏ. 10 : ಕರ್ನಾಟಕ ಕ್ರಿಕೆಟ್ ಅಸೋಷಿಯೇಶನ್ ಆಯೋಜನೆಯ ಅಂಡರ್ – 16 ಮಂಗಳೂರು ಕ್ರಿಕೆಟ್ ತಂಡಕ್ಕೆ ಗುರಿಪಳ್ಳ ನಿವಾಸಿ ಸ್ವರ್ಣಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಜಿರೆ ಕ್ರಿಕೆಟ್ ಕ್ಲಬ್ ತಂಡದ ಸದಸ್ಯರಾಗಿರುವ ಸ್ವರ್ಣಿತ್ ಶೆಟ್ಟಿ ಕಾರ್ತಿಕ್ ಗೌಡ ದೇವಸ್ಯ ಎಂಬವರ ಮಾರ್ಗದರ್ಶನದೊಂದಿಗೆ ಕ್ರಿಕೆಟ್ ಪಾರುಪತ್ಯ ಮೆರೆಯುತ್ತಿದ್ದಾರೆ. ಸ್ವರ್ಣಿತ್ ಶೆಟ್ಟಿ ಅವರು ಉಮೇಶ್ ಶೆಟ್ಟಿ ಹಾಗೂ ಅಮಿತಾ ಶೆಟ್ಟಿಯವರ ಪುತ್ರರಾಗಿದ್ದಾರೆ. - [ಚಿಕ್ಕಮಗಳೂರು : ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ !](https://dhwaninews.com/girl_deadbody/): ಚಿಕ್ಕಮಗಳೂರು, ಏ. 10 : ಪ್ರಸಿದ್ದ ಚಂದ್ರದ್ರೋಣ ಪರ್ವತ ಶ್ರೇಣಿಯ ಚಾರಣಕ್ಕೆ ಬಂದು ನಾಪತ್ತೆಯಾದ್ದ ಕೇರಳ ಮೂಲದ 10ನೇ ತರಗತಿ ಬಾಲಕಿ ಶ್ರೀನಂದಾ (14) ಶವವಾಗಿ ಪತ್ತೆಯಾಗಿದ್ದಾಳೆ. 3ನೇ ದಿನದ ಶೋಧ ಕಾರ್ಯದ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಶ್ರೀನಂದಾ ದತ್ತಪೀಠದ ಮಾಣಿಕ್ಯಾಧಾರ ತಪ್ಪಲಿನಲ್ಲಿ ನಾಪತ್ತೆಯಾಗಿದ್ದು, ಬಾಲಕಿಯ ತಾಯಿಯ ಕಿಡ್ನಾಪ್ ಆಗಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಆ ಕಾರಣ ಜಿಲ್ಲಾಡಳಿತ ಮತ್ತೊಂದು ಆಯಾಮದಲ್ಲಿ ಶೋಧಕ್ಕೆ ಮುಂದಾಗಿತ್ತು. 3 ದಿನಗಳ ಸತತ ಶೋಧ ಕಾರ್ಯಚರಣೆ ಬಳಿಕ ಇಂದು (ಎ.10) ಬಾಲಕಿಯ ಶವ ಪತ್ತೆಯಾಗಿದೆ. ಪ್ರಕರಣ ಸಂಬಂಧ ಕೇರಳದಿಂದ ನಾಲ್ವರು ಪೋಲಿಸರು ಆಗಮಿಸಿದ್ದರು. ಪೊಲೀಸರು,ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಎಸ್.ಡಿ.ಆ‌ರ್.ಎಫ್ ತಂಡದಿಂದ ಶೋಧ ಕಾರ್ಯದಲ್ಲಿ ಭಾಗಿಯಾಗಿದೆ. ಥರ್ಮಲ್ ಡೋನ್, ಡಾಗ್ ಸ್ಟ್ರಾಡ್ ಬಳಕೆ ಮಾಡಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು. ಘಟನೆಯ ವಿವರ: ಕೇರಳದ ಪಾಲಕ್ಕಾಡ್‌ನಿಂದ ಸುಮಾರು 40 ಪ್ರವಾಸಿಗರ ತಂಡ ಚಿಕ್ಕಮಗಳೂರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ […] - [IPL 2026 : ಇಂದು ರಾಜಸ್ಥಾನಕ್ಕೆ ಆರ್ ಸಿಬಿ ಎದುರಾಳಿ - ಸೂರ್ಯವಂಶಿ ಹಾಗೂ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಮುಖಾಮುಖಿ !](https://dhwaninews.com/ipl_rajastan-vs-rcb/): IPL 2026 : ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಬೌಲರ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಹಾಗೂ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಮುಖಾಮುಖಿಯಾಗಲಿದ್ದಾರೆ. ಈ ಸೀಸನ್‌ನಲ್ಲಿ ವೈಭವ್ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 248.97 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 122 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ನ ಬುಮ್ರಾ ಎಸೆದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಇವರ ಧೈರ್ಯಕ್ಕೆ ಕ್ರಿಕೆಟ್ ಲೋಕವೇ ಬೆರಗಾಗಿದೆ. ಕೇವಲ 15 ವರ್ಷ ವಯಸ್ಸಿನ ಇವರು ಈ ಬಾರಿಯ ಐಪಿಎಲ್‌ನ ಅತ್ಯಂತ ಕಿರಿಯ ಆಟಗಾರ ಆಗಿದ್ದಾರೆ. ಇದೇ ಸೀಸನ್‌ನಲ್ಲಿ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ವೇಗಿ ಎಂಬ ದಾಖಲೆ ಬರೆದಿದ್ದಾರೆ. ಪವರ್‌ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಇವರ ಕಲೆ ಇಂದಿಗೂ […] - [ಬೆಳ್ತಂಗಡಿ : ದ್ವಿತೀಯ ಪಿಯುಸಿ ಫಲಿತಾಂಶ - ಶ್ರೀಷಾ ಸುವರ್ಣರಿಗೆ ವಾಣಿಜ್ಯ ವಿಭಾಗದಲ್ಲಿ 558 ಅಂಕ](https://dhwaninews.com/shreesha_558/): ಬೆಳ್ತಂಗಡಿ, ಏ. 10 : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿನಿ ಶ್ರೀಷಾ ಸುವರ್ಣ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 558 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಲವಂತಿಗೆ ಗ್ರಾಮದ ಮಾಲೂರು ನಿವಾಸಿ ಉಮೇಶ್ ಸುವರ್ಣ ಹಾಗೂ ಪ್ರಮೀಳ ದಂಪತಿಯ ಪುತ್ರಿಯಾಗಿದ್ದಾರೆ. ಶ್ರೀಷಾ ಸುವರ್ಣರವರ ಉತ್ತಮ ಸಾಧನೆಗೆ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿದೆ. - [ಚಿಕ್ಕಮಗಳೂರು : ಮಾಣಿಕ್ಯಧಾರಾ ಬಳಿ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ - 2 ಕಳೆದರೂ ಸಿಕ್ಕಿಲ್ಲ ಸುಳಿವು !](https://dhwaninews.com/manikyadhara_balaki_missing/): ಚಿಕ್ಕಮಗಳೂರು, ಏ. 10 : ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಕ್ಯಧಾರಾ ಬಳಿ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ಮಂಗಳವಾರ ನಾಪತ್ತೆಯಾಗಿದ್ದು, ಗುರುವಾರವೂ ಗಿರಿ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಲಾಯಿತು. ಆದರೆ, 48 ಗಂಟೆ ಕಳೆದರೂ ಸುಳಿವು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಡಿಆರ್‌ಎಫ್‌, ಪೊಲೀಸ್‌, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸೇರಿ ಐದು ತಂಡಗಳು ದತ್ತಪೀಠ ಭಾಗದ ಇಳಿಜಾರು ಪ್ರದೇಶ, ದೇವಿರಮ್ಮನ ಬೆಟ್ಟದ ಭಾಗದಲ್ಲಿನ ಪ್ರಪಾತಗಳು ಸೇರಿದಂತೆ ಹಲವು ಕಡೆಗಳಲ್ಲಿರೋಪ್‌ ಬಳಸಿ ಬೆಟ್ಟದ ತಪ್ಪಲಿಗಿಳಿದು ಹುಡುಕಾಟ ನಡೆಸಿದರು. ಜತೆಗೆ ನಾಲ್ಕು ಡ್ರೋನ್‌ಗಳ ಮೂಲಕವೂ ಪತ್ತೆ ಕಾರ್ಯ ನಡೆಯಿತು. ಆದರು ಬಾಲಕಿ ಪತ್ತೆಯಾಗಲಿಲ್ಲ. ಬಾಲಕಿ ನಾಪತ್ತೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯೇ ನಗರಕ್ಕೆ ಆಗಮಿಸಿದ ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬಾಲಕಿಯ ಕುಟುಂಬಸ್ಥರ ಜತೆ ಸಮಾಲೋಚನೆ ನಡೆಸಿದರು. ಬಳಿಕ ಬಾಲಕಿ ನಾಪತ್ತೆಯಾದ ಗಿರಿಭಾಗಕ್ಕೆ ತೆರಳಿ ಕಾರ್ಯಾಚರಣೆ ಪರಿಶೀಲಿಸಿ ಪೊಲೀಸ್‌ ಇಲಾಖೆಯ […] - [ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ - ಉಡುಪಿ ಪ್ರಥಮ, ದ. ಕ. ದ್ವಿತೀಯ ; ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ...!
](https://dhwaninews.com/2nd_pu_results/): ಬೆಂಗಳೂರು, ಏ. 09 : 2025-26ನೇ ಸಾಲಿನ ಪಿಯುಸಿ ಫಲಿತಾಂಶ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಈ ಬಾರಿ ಶೇಕಡಾ 86.48 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 96.39 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉಡುಪಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ(ಶೇ.96.35) ದ್ವಿತೀಯ ಸ್ಥಾನ, ಕೊಡಗು(ಶೇ.92.34) ಮೂರನೇ ಸ್ಥಾನ, ವಿಜಯಪುರ(ಶೇ.92.00) ನಾಲ್ಕನೇ ಸ್ಥಾನ,ಉತ್ತರಕನ್ನಡ(91.78) ಐದನೇ ಸ್ಥಾನವನ್ನು ಪಡೆದುಕೊಂಡಿದ್ದು, ಯಾದಗಿರಿ(ಶೇ.71.21) ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಚಿವರು ಹೇಳಿದ್ದಾರೆ. 88.70 ಪ್ರತಿಶತ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಸಲನೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.83.65 ಬಾಲಕರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗ 72.86, ವಾಣಿಜ್ಯ ಶೇ.88.04 ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 91.69ಶೇ.ರಷ್ಟು ಫಲಿತಾಂಶ ಬಂದಿದೆ. ಈ ಸಲ 1,70,529 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಆಗಿದ್ದಾರೆಎಂದು ಸಚಿವರು ಹೇಳಿದ್ದಾರೆ. ದಾಖಲೆ ಮಟ್ಟದ ಫಲಿತಾಂಶ ಈ ಬಾರಿ ಒಟ್ಟು 6,94,545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. […] - [ಮಂಗಳೂರು: ಗುರುಪುರದಲ್ಲಿ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ](https://dhwaninews.com/gurupura_suicide/): ಮಂಗಳೂರು, ಏ. 09 : ಬುಧವಾರ ಸಂಜೆ ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿದ್ದ 30 ವರ್ಷದ ಕೌಶಿಕ್ ಬೆಲ್ಚಡ ಅವರ ಮೃತದೇಹವನ್ನು ಏಪ್ರಿಲ್ 9 ರ ಗುರುವಾರ ಮಧ್ಯಾಹ್ನ ಹೊರತೆಗೆಯಲಾಗಿದೆ. ಕಜೆ ಪಡ್ಡಾಯಿಬೆಟ್ಟು ನಿವಾಸಿ ಕೌಶಿಕ್ ಬುಧವಾರ ಸಂಜೆ 6:30 ರ ಸುಮಾರಿಗೆ ತನ್ನ ಸ್ಕೂಟರ್‌ನಲ್ಲಿ ಸೇತುವೆಗೆ ಬಂದಿದ್ದರು. ಅವರು ನದಿಗೆ ಹಾರುವ ಮೊದಲು ಸೇತುವೆಯ ಮೇಲೆ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಕತ್ತಲೆಯಾದ ಕಾರಣ, ಬುಧವಾರ ರಾತ್ರಿ ಪೂರ್ಣ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ಗುರುವಾರ ಬೆಳಿಗ್ಗೆ, ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪಾಣೆಮಂಗಳೂರಿನಿಂದ ಡೈವಿಂಗ್ ತಜ್ಞರು ಸಹ ಕಾರ್ಯಚರಣೆಯಲ್ಲಿ ಭಾಗಿಯಾದರು. ಸೇತುವೆಯ ಕಂಬಗಳ ಬಳಿ ಸಂಪೂರ್ಣ ಹುಡುಕಾಟದ ನಂತರ ಶವವನ್ನು ಪತ್ತೆಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾದರು. ಸೇತುವೆಯ ಮೇಲೆ ಪತ್ತೆಯಾದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದ ಬಜ್ಪೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. - [ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ](https://dhwaninews.com/disha_600/): ಬೆಂಗಳೂರು, ಏ. 09 : ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಈ ವರ್ಷ, ಶೇಕಡಾ 86 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 7,10,363 ವಿದ್ಯಾರ್ಥಿಗಳಲ್ಲಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರೀ ಉತ್ತೀರ್ಣ ಶೇಕಡಾವಾರು 73.45 ರಷ್ಟಿದ್ದು, ಈ ವರ್ಷ ಏರಿಕೆ ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ವಿಜಯನಗರ  ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು 598 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ […] - [ಕಾಸರಗೋಡು : ಕೇರಳ ವಿಧಾನಸಭೆ ಚುನಾವಣೆ - ಜಿಲ್ಲೆಯಲ್ಲಿ ಬಿರುಸಿನ ಮತದಾನ](https://dhwaninews.com/ksd_election/): ಕಾಸರಗೋಡು, ಏ. 09 : ಕೇರಳ ವಿಧಾನಸಭೆಗೆ ಚುನಾವಣೆ ಆರಂಭಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮತಗಟ್ಟೆಗಳ ಮುಂಭಾಗದಲ್ಲಿ ಮತದಾರರ ಸರದಿ ಸಾಲು ಕಂಡು ಬರುತ್ತಿದೆ. ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ತ್ರಿಕ್ಕರಿಪುರ ಎಲ್ ಡಿ ಎಫ್ ಅಭ್ಯರ್ಥಿ ವಿ.ಪಿ.ಪಿ.ಮುಸ್ತಫ ನರ್ಕಿಲ್ಕಾಡ್ ಅವರು ಸರಕಾರಿ ಎಯುಪಿ ಶಾಲೆಯಲ್ಲಿ ಬೆಳಗ್ಗೆ ಮತದಾನ ಮಾಡಿದರು. ಕಾಸರಗೋಡು ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ನೆಲ್ಲಿಕುಂಜೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ ಒಟ್ಟು 05 ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಬ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 11,03,618 ಮತದಾರರಿದ್ದಾರೆ. - [ಜೆರುಸಲೇಂ : ಕದನ ವಿರಾಮದ ಮಧ್ಯೆ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ - 200ಕ್ಕೂ ಹೆಚ್ಚು ಮಂದಿ ಸಾವು !](https://dhwaninews.com/jerusalem_isrel-attack/): ಜೆರುಸಲೇಂ, ಏ. 09 : ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಇರಾನ್‌ ಹಾಗೂ ಅಮೆರಿಕಾ 2ವಾರಗಳ ಕದನವಿರಾಮ ಘೋಷಿಸಿದ್ದು, ಇದಕ್ಕೆ ಇಸ್ರೇಲ್‌ ಸಹ ಒಪ್ಪಿಕೊಂಡಿದೆ. ಆದಾಗ್ಯೂ, ಈ ಕದನವಿರಾಮ ಲೆಬನಾನ್‌ ಪ್ರಾಂತ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದು, ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಹೀಗೆ ಹೆಜ್ಬುಲ್ಲಾ ಜೊತೆಗಿನ ಯುದ್ಧದ ಬಳಿಕ ಇದೇ ಮೊದಲಬಾರಿಗೆ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಸುಮಾರು 200ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1000ಕ್ಕೂ ಅಧಿಕ ಜನರ ಗಾಯಗೊಂಡಿದ್ದಾರೆ. ಕದನವಿರಾಮದಲ್ಲಿ ಲೆಬನಾನ್‌ ಒಳಗೊಂಡಂತೆ ಪ್ರಾದೇಶಿಕವಾಗಿ ಎಲ್ಲಾ ರಾಷ್ಟ್ರಗಳ ಮೇಲೂ ಮಿಲಿಟರಿ ಕಾರ್ಯಚರಣೆಗಳನ್ನು ನಿಲ್ಲಿಸಬೇಕು ಎಂಬುದು ಕದನವಿರಾಮದಲ್ಲಿರುವ ಪ್ರಮುಖ ಅಂಶವಾಗಿದೆ. ಆದಾಗ್ಯೂ, ಇದನ್ನು ಒಪ್ಪದ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ್ದು, ಬೈರುತ್‌, ದಕ್ಷಿಣ ಲೆಬಾನನ್‌ ಹಾಗೂ ಬೆಕಾ ಕಣಿವೆ ಸೇರಿದಂತೆ ಹಲವೆಡೆ 100 ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿದ್ದು, ಇದರಿಂದಾಗಿ ಈವರೆಗೂ ಕನಿಷ್ಠ 254 ಜನ ಸಾವನ್ನಪ್ಪಿದ್ದು, 1,165 ಜನ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ನ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. […] - [ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ - ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸುವುದು ಹೇಗೆ ?](https://dhwaninews.com/2nd-pu_result/): ಬೆಂಗಳೂರು, ಏ. 07 : ಏಪ್ರಿಲ್ 9ರಂದು 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಏಪ್ರಿಲ್ 9ರಂದು 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಮಂಡಳಿಯು ಮೊದಲು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶದ ವಿವರಗಳನ್ನು ಹಂಚಿಕೊಂಡು, ನಂತರ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ಪ್ರಕಟಿಸಲಿದೆ. ಆನ್‌ಲೈನ್‌ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ನೋಡುವ ವಿಧಾನ: ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಏಪ್ರಿಲ್ 25 ರಿಂದ ಮೇ ಮೊದಲ ವಾರದವರೆಗೆ ಪೂರಕ ಪರೀಕ್ಷೆಗಳನ್ನು ನಡೆಸಲು ಮಂಡಳಿ ಚಿಂತನೆ ನಡೆಸಿದ ಎನ್ನಲಾಗಿದೆ. - [ಬೆಳ್ತಂಗಡಿ : ಕ್ರೇನ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು](https://dhwaninews.com/crane_accident/): ಬೆಳ್ತಂಗಡಿ, ಏ. 07 : ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು ಎಂಬಲ್ಲಿ ಏಪ್ರಿಲ್ 7 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕ್ರೇನ್ ವಾಹನ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕ್ರೇನ್ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. - [ಶಿವಮೊಗ್ಗ : ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ](https://dhwaninews.com/shivamogga_lokayuktha/): ಶಿವಮೊಗ್ಗ, ಏ. 07 : ಜಿಲ್ಲೆಯ ವಿವಿಧೆಡೆ ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್. ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ಶಿವಮೊಗ್ಗ ಶಿಕಾರಿಪುರ ಹಾಗೂ ಸಾಗರ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ. ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದಲ್ಲಿರುವ ಶೋಭಾ ಅವರ ನಿವಾಸ ಹಾಗೂ ಸಾಗರ ತಾಲೂಕಿನ ಅಚಾಪುರ ಬಳಿ ಇರುವ ಅವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಶೋಭಾ ಅವರ ಆಪ್ತ ಸಹಾಯಕನ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ದಾಳಿಯಲ್ಲಿ ಶಿವಮೊಗ್ಗ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನೊಳಗೊಂಡ ಐದು ಪ್ರತ್ಯೇಕ ತಂಡಗಳು ಪಾಲ್ಗೊಂಡಿವೆ. - [ಟೆಹ್ರಾನ್ : ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ವಾಬಾ ಖಮೇನಿ ಗಂಭೀರ - ಕೋಮ್ ನಗರದಲ್ಲಿ ಚಿಕಿತ್ಸೆ](https://dhwaninews.com/khameni_gambheera/): ಟೆಹ್ರಾನ್, ಏ. 07 : ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಗಾಯಗೊಂಡಿದ್ದ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ವಾಬಾ ಖಮೇನಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೋಮ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ದಾಳಿಯಿಂದಾಗಿ 56 ವರ್ಷದ ಧರ್ಮಗುರು ಕೋಮಾಸ್ಥಿತಿಯಲ್ಲಿದ್ದು,”ಗಂಭೀರ” ವೈದ್ಯಕೀಯ ಸ್ಥಿತಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಿ ಟೈಮ್ಸ್ ವರದಿ ಮಾಡಿದೆ. ಇರಾನ್‌ನ ಸರ್ವೋಚ್ಚ ನಾಯಕನ ಸ್ಥಳದ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗಗೊಳಿಸಲಾಗಿದೆ. ಕೋಮ್ ಕೇಂದ್ರ ನಗರವು ಟೆಹ್ರಾನ್‌ನಿಂದ ದಕ್ಷಿಣಕ್ಕೆ 87 ಮೈಲುಗಳು (ಸುಮಾರು 140 ಕಿಲೋಮೀಟರ್) ದೂರದಲ್ಲಿದೆ. ಶಿಯಾ ಮುಸ್ಲಿಮರಿಗೆ ಈ ನಗರ ಪವಿತ್ರವೆಂದು ಪರಿಗಣಿಸಿದ್ದಾರೆ. ಅಲ್ಲದೇ ಇಸ್ಲಾಮಿಕ್ ಗಣರಾಜ್ಯದ ಧಾರ್ಮಿಕ ರಾಜಧಾನಿ ಎಂದು ಕರೆಯಲಾಗುತ್ತದೆ. “ಮೊಜ್ಜಾಬಾ ಖಮೇನಿ ಅವರು ಕೋಮ್‌ನಲ್ಲಿ ಕೋಮಾ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಆಡಳಿತದ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ” ಎಂದು ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಮಾಹಿತಿಯನ್ನು ಆಧರಿಸಿದೆ ಎಂದು ನಂಬಲಾದ ದಾಖಲೆಯಲ್ಲಿ ತಿಳಿಸಿದೆ. ಅಯತೊಲ್ಲಾ ಇರುವ ಸ್ಥಳದ ಬಗ್ಗೆ […] - [ವಾಷಿಂಗ್ಟನ್ : ಇರಾನ್ ಅನ್ನು ನಾಶ ಮಾಡಲು ನಮಗೆ ಒಂದು ರಾತ್ರಿ ಸಾಕು, ಆ ರಾತ್ರಿ ಮಂಗಳವಾರವೇ ಆಗಿರಬಹುದು - ಗುಡುಗಿದ ಟ್ರಂಪ್ !](https://dhwaninews.com/iran_trump-2/): ವಾಷಿಂಗ್ಟನ್, ಏ. 07 : ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದಿರುವಂತೆಯೇ ಕದನ ವಿರಾಮಕ್ಕೆ ಸಂಬಂಧಿಸಿ ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಸೋಮವಾರ ಇರಾನ್ ಮತ್ತು ಅಮೆರಿಕದ ಮುಂದಿಟ್ಟಿರುವ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ. ಇದರಿಂದ ಕೆರಳಿ ಕೆಂಡವಾಗಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಒಪ್ಪಂದಕ್ಕೆ ಒಪ್ಪದೇ ಇರುವ ಇರಾನ್ ಅನ್ನು ಸುಮ್ಮನೆ ಬಿಡಲ್ಲ. ಇರಾನ್ ಅನ್ನು ನಾಶ ಮಾಡಲು ನಮಗೆ ಒಂದು ರಾತ್ರಿ ಸಾಕು, ಆ ರಾತ್ರಿ ಮಂಗಳವಾರವೇ ಆಗಿರಬಹುದು’ ಎಂದು ಹೇಳುವ ಮೂಲಕ ಭಾರೀ ದಾಳಿಯ ಸುಳಿವು ನೀಡಿದ್ದಾರೆ. ಹೊರ್ಮುಜ್ ಜಲಸಂಧಿ ತೆರೆಯಲು ಮತ್ತು ಒಪ್ಪಂದಕ್ಕೆ ಬರಲು ಇರಾನ್‌ಗೆ ಟ್ರಂಪ್ ಹಾಕಿದ್ದ ಗಡುವು ಮಂಗಳವಾರ ಮುಗಿಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಸೋಮವಾರ ರಾತ್ರಿ 10.30ಕ್ಕೆ(ಭಾರತೀಯ ಕಾಲಮಾನ) ದೇಶವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಇತ್ತೀಚೆಗೆ ಇರಾನ್ ನೆಲದಲ್ಲಿ ಬಿದ್ದಿದ್ದ ತಮ್ಮ ಪೈಲಟ್ ಅನ್ನು ರಕ್ಷಿಸಿದ ಬಗೆಯನ್ನು ವಿವರಿಸುವ ಜೊತೆಗೆ, ಇರಾನ್ ಮೇಲೆ ದಾಳಿ ತೀವ್ರಗೊಳಿಸುವ ಸುಳಿವನ್ನೂ ನೀಡಿದರು. ಇದಕ್ಕೂ ಮುನ್ನ, ಪಾಕ್ ಸೇನಾ ಮುಖ್ಯಸ್ಥ ಜನರಲ್ […] - [ಬೆಳ್ತಂಗಡಿ : ಖ್ಯಾತ ನಟ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ - ರಂಗಪೂಜೆ ಸೇವೆ ನೆರವೇರಿಸಿದ ರಿಷಬ್ ಶೆಟ್ಟಿ ಕುಟುಂಬ](https://dhwaninews.com/rishabh_dharmasthala/): ಬೆಳ್ತಂಗಡಿ, ಏ. 07 : ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಕಾಂತಾರ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಡಿವೈನ್‌ಸ್ಟಾ‌ರ್ ರಿಷಬ್ ಶೆಟ್ಟಿ, ದಂಪತಿ ಸಮೇತ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎಸ್‌.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾ‌ರ್, ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಆರ್ಯಮನ್ ಹಾಗೂ ಕಿಯಾಂಶ್ ಉಪಸ್ಥಿತರಿದ್ದರು. ನಂತರ ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರಿಂದ ರಂಗಪೂಜೆ ಸೇವೆ ನೆರವೇರಿತು. - [ಉಡುಪಿ : ಮೂರು ದಿನ ಬಾವಿಯೊಳಗಿದ್ದ 62 ವರ್ಷದ ವ್ಯಕ್ತಿ - ಬದುಕಿ ಬಂದಿದ್ದೇ ಪವಾಡ !!](https://dhwaninews.com/bavi_vruddha/): ಉಡುಪಿ, ಏ. 07 : ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ವೃದ್ದರೊಬ್ಬರು ಪವಾಡಸದೃಶವಾಗಿ ಬದುಕುಳಿದ ಘಟನೆ ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ ನಡೆದಿದೆ. ಬದುಕುಳಿದವರನ್ನು ಕಂಬಳಕಟ್ಟೆ ನಿವಾಸಿ ಶ್ರೀನಿವಾಸ ಆಚಾರ್ಯ (ಸುಮಾರು 62 ವರ್ಷ) ಎಂದು ಗುರುತಿಸಲಾಗಿದೆ. ಸುಮಾರು 20 ಅಡಿ ಆಳದ ನೀರಿನ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಬದುಕಿ ಬಂದಿದ್ದಾರೆ. ಇದು ಪವಾಡವೇ ಸರಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಂಟಿಯಾಗಿ ವಾಸಿಸುವ ಶ್ರೀನಿವಾಸ ಆಚಾರ್ಯ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಆದರೆ ಚೇತರಿಸಿಕೊಂಡಿದ್ದರು. ಕಳೆದ ಶನಿವಾರ ಸಂಜೆ, ಅವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ (10 ಅಡಿ ಅಗಲ ಮತ್ತು 20 ಅಡಿ ಆಳ) ಕಸ ಬಿದ್ದಿದ್ದರಿಂದ, ಪಂಪ್‌ಗೆ ಸಂಪರ್ಕಗೊಂಡಿರುವ ಫುಟ್‌ಬಾಲ್ ಪೈಪ್‌ಗೆ ಕಟ್ಟಿದ್ದ ಹಗ್ಗವನ್ನು ಎಳೆಯಲು ಪ್ರಯತ್ನಿಸಿದ್ದರು. ಈ ವೇಳೆ ಹಗ್ಗ ತುಂಡಾಗಿ ಅವರು ಸಮತೋಲನ ಕಳೆದುಕೊಂಡು ಬಾವಿಗೆ ಬಿದ್ದರು. ಅವರು […] - [ಬೆಳ್ತಂಗಡಿ, ಏ. 06 : ಉರುವಾಲು -ಕಾಯರ್ಪಾಡಿ  ಸಂಪರ್ಕ ರಸ್ತೆಯ ಮರು ಡಾಮರೀಕರಣ ಕಾಮಗಾರಿ ಪೂರ್ಣ : ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು](https://dhwaninews.com/road_kamagari/): ಬೆಳ್ತಂಗಡಿ, ಏ. 06 :  ತಾಲೂಕಿನ ಉರುವಾಲು ಪದವು ಹಾಗೂ ಇಳಂತಿಲ ಗ್ರಾಮದ ಸಂಪರ್ಕ ಕೊಂಡಿಯಾದ ಉರುವಾಲು -ಕಾಯರ್ಪಾಡಿ  ಸಂಪರ್ಕ ರಸ್ತೆಯ ಮರು ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆಯ ಮರು ಡಾಮರೀಕರಣ ಕಾಮಗಾರಿಗೆ ಅನುದಾನವನ್ನು ಒದಗಿಸಿ ಆ ಭಾಗದ ನಾಗರಿಕರ ಹಲವಾರು ವರ್ಷಗಳ ಬಹು ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಅಭಿವೃದ್ಧಿಯ ಹರಿಕಾರ, ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. - [ಬೆಂಗಳೂರು : ಮದ್ಯದ ಅಮಲಿನಲ್ಲಿ ಸಂಚಾರ - ಪೊಲೀಸರಿಗೆ ಸಿಕ್ಕಿಬಿದ್ದ ಲಾರಿ ಚಾಲಕ ಅದೇ ಲಾರಿಯಲ್ಲಿ ನೇಣಿಗೆ ಶರಣು](https://dhwaninews.com/lari_driver_suicide/): ಬೆಂಗಳೂರು, ಏ. 06 : ಮದ್ಯದ ಅಮಲಿನಲ್ಲಿ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದ ಲಾರಿ ಚಾಲಕನ್ನೊಬ್ಬ, ಮರು ದಿನ ಬೆಳಗ್ಗೆ ಅದೇ ಲಾರಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಷಣ್ಮುಗಂ (26) ಮೃತ ಚಾಲಕ. ಭಾನುವಾರ ಮುಂಜಾನೆ ಜೆ.ಪಿ.ನಗರದ 22ನೇ ಮುಖ್ಯರಸ್ತೆ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಜೆ.ಪಿ.ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಜೆ.ಪಿ.ನಗರ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಸಂಚಾರ ಪೊಲೀಸರು ಡಿಡಿ ಪ್ರಕರಣದ ಪರಿಶೀಲಿಸುತ್ತಿದ್ದರು. ಈ ವೇಳೆ ಮದ್ಯ ಸೇವಿಸಿ ಲಾರಿ ಚಾಲನೆ ಮಾಡಿಕೊಂಡು ಬಂದ ಷಣ್ಮುಗಂನನ್ನು ಪರಿಶೀಲಿಸಲಾಗಿದ್ದು, ಮದ್ಯ ಸೇವಿಸಿರುವುದು ಪತ್ತೆಯಾಗಿದ್ದರಿಂದ ಆತನಿಗೆ ನೋಟಿಸ್ ಕೊಡಲಾಗಿತ್ತು. ಅಲ್ಲದೆ, ಠಾಣೆಯ 100 ಮೀಟ‌ರ್ ದೂರದಲ್ಲೇ ಲಾರಿಯನ್ನು ನಿಲ್ಲಿಸಲಾಗಿತ್ತು. ಆದರೆ, ಭಾನುವಾರ ಮುಂಜಾನೆ ಅದೇ ಲಾರಿಯಲ್ಲಿ ಷಣ್ಮುಗಂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಆತ್ಮಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ […] - [ಮಡಿಕೇರಿ : ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ 4 ದಿನಗಳ ಬಳಿಕ ಪತ್ತೆ !](https://dhwaninews.com/sharanya_patthe/): ಮಡಿಕೇರಿ, ಏ. 06 : ತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ(36) ಕೊನೆಗೂ ಪತ್ತೆಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟಕ್ಕೆ ಗುರುವಾರ ಬೆಳಗ್ಗೆ ಚಾರಣಕ್ಕೆ ತೆರಳಿದ್ದ ಶರಣ್ಯ ನಾಪತ್ತೆಯಾಗಿದ್ದರು. ಅರಣ್ಯ, ಪೊಲೀಸ್, ಇಲಾಖೆ, ಗ್ರಾಮಸ್ಥರು ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೂ 4 ದಿನಗಳ ಸತತ ಹುಡುಕಾಟದ ಬಳಿಕ ಭಾನುವಾರ ಸಂಜೆ ಶರಣ್ಯ ಪತ್ತೆಯಾಗಿದ್ದಾರೆ. ಶರಣ್ಯ ಪತ್ತೆಗಾಗಿ 4 ದಿನಗಳಿಂದ ಆವಿರತ ಶ್ರಮಿಸಿದ ಪೊಲೀಸ್‌ ,ಅರಣ್ಯ ಇಲಾಖೆ ,ಗ್ರಾಮಸ್ಥರು ಮತ್ತು ಆಧುನಿಕ ಉಪಕರಣ ನೀಡಿದ ರಾಜ್ಯ ಸರ್ಕಾರಕ್ಕೆ -ಶಾಸಕ ಎ.ಎಸ್‌ ಪೊನ್ನಣ್ಣ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸಿದರು. ಕಳೆದ ಮೂರು ದಿನಗಳಿಂದ ಡ್ರೋನ್‌ ಕ್ಯಾಮೆರಾ, ಶ್ವಾನದಳದೊಂದಿಗೆ ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ 4 ತಂಡಗಳಿಂದ ಬಿರುಸಿನ ಶೋಧ ಕಾರ್ಯ ನಡೆಸಿದೆ. ಮೊಬೈಲ್‌ ಸಿಮ್‌ ಟ್ರ್ಯಾಕಿಂಗ್‌ ಲೊಕೇಶನ್‌ ಮೂಲಕವೂ ಹುಡುಕಾಟ ನಡೆಸಿ, ತಡಿಯಂಡಮೋಳ್‌ ಬೆಟ್ಟಕ್ಕೆ ಒಂದು ತಂಡ ಆಗಮಿಸಿ ಶೋಧ ಕಾರ್ಯ ನಡೆಸಿದೆ. - [ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ - ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಆರೋಪ !](https://dhwaninews.com/hubballi_love-jihad/): ಹುಬ್ಬಳ್ಳಿ, ಏ. 05 : ಕೆಲವೇ ದಿನದ ಅಂತರದಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುವ ನೆಪದಲ್ಲಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯಲ್ಲಿ ಜಿಮ್ ನಲ್ಲಿ ಪ್ರೀತಿಸಿದ ಸಮೀರ್ ಪ್ರಕರಣ ಬಯಲಾಗಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಈಗ ಮುಫೀಸ್ ಎಂಬಾತನ ಮೇಲೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಎಂಬಾತ ಸಹನಾ ಎಂಬ ಹಿಂದೂ ಯುವತಿಯ ಮೇಲೆ‌ ಬ್ಲ್ಯಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ವ್ಯಕ್ತಿಯಾಗಿರುವ ಮುಫೀಸ್ , ಹಿಂದೂ ಮರಾಠ ಯುವತಿ ಸಹನಾ ಎಂಬಾಕೆಗೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ‌ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಆಗಲು ತಯಾರಿ ನಡೆಸಿದ್ದ. ಕಳೆದ ಆಗಸ್ಟ್ ನಲ್ಲೇ ಮದುವೆಯಾಗಲು ನೊಂದಣಿ ಮಾಡಿಸಲು ಸಿದ್ದತೆ ಮಾಡಲಾಗಿತ್ತು. ವಿಷಯ ತಿಳಿದು ಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಇದಾದ ಬಳಿಕ ಪುನಃ ಯುವತಿಗೆ ಬ್ಲಾಕ್ ಮೇಲ್ ಮಾಡಿ, […] - [ಕೊಡಗು : ತಡಿಯಂಡಮೋಳ್ ಬೆಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದ ಯುವತಿ ನಾಪತ್ತೆ - 3 ದಿನವಾದರೂ ಸಿಕ್ಕಿಲ್ಲ ಸುಳಿವು !](https://dhwaninews.com/trucking_napatthe/): ಕೊಡಗು, ಏ. 05 : ಮಡಿಕೇರಿ ತಾಲೂಕಿನ ಪ್ರಸಿದ್ಧ ಚಾರಣ ತಾಣವಾದ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ. ಮೂರು ದಿನ ಕಳೆದರೂ ಇನ್ನೂ ಸುಳಿವು ಲಭ್ಯವಾಗಿಲ್ಲ. ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯ ನಾಪತ್ತೆಯಾದ ದುರ್ದೈವಿ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಇವರು, ಮಡಿಕೇರಿಯ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದು, ಚಾರಣಕ್ಕೆಂದು ತೆರಳಿದ್ದರು. ಒಂಟಿಯಾಗಿ ಬಂದಿದ್ದ ಕಾರಣ ಒಬ್ಬರನ್ನೇ ಕಳುಹಿಸಿರಲಿಲ್ಲ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಬೇರೊಂದು ಗುಂಪಿನ ಜೊತೆಗೆ ಶರಣ್ಯಾ ಅವರನ್ನು ಬೆಟ್ಟದ ಮೇಲೆ ಕಳುಹಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ವಾಪಸ್ ಬಂದಿರಲಿಲ್ಲ. ಗಾಬರಿಯಾದ ಹೋಂಸ್ಟೇ ಮಾಲೀಕರು ಅವರಿಗೆ ಫೋನ್ ಮಾಡಿದಾಗ, ಮೊದಲು ಕರೆ ಸ್ವೀಕರಿಸಿದ ಶರಣ್ಯಾ ತಾನು ದಾರಿ ತಪ್ಪಿರುವುದಾಗಿ ತಿಳಿಸಿದ್ದರು. ಆದರೆ ತಕ್ಷಣವೇ ಫೋನ್ ಕಟ್ ಆಗಿದ್ದು, ಆನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಕಾಡುಪ್ರಾಣಿಗಳ ದಾಳಿ ಆತಂಕ ಶರಣ್ಯಾ ಅವರಿಗೆ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಮಾಡಿದ ಅನುಭವವಿದೆ. ತಡಿಯಂಡಮೋಳ್ […] - [ಮಂಗಳೂರು : 60 ವಾರಿಯರ್ಸ್ ಮೇರ್ಲಪದವು ಟ್ರೊಫಿ ವಿಚಾರ - ಹೀಗೊಂದು ಏಪ್ರಿಲ್ ಫೂಲ್ : ಸ್ಪಷ್ಟನೆ!!](https://dhwaninews.com/april_fool/): ಮಂಗಳೂರು, ಏ. 04 : 60 ವಾರಿಯರ್ಸ್ ಮೇರ್ಲಪದವು ಅರ್ಪಿಸುವ 60 ವಾರಿಯರ್ಸ್ ಟ್ರೊಫಿ – 2026 ಕ್ರಿಕೆಟ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಈ ಕ್ರೀಡಾಕೂಟ ಪೋಸ್ಟರ್ ಗೆಳೆಯರ ಮಧ್ಯೆ “ಏಪ್ರಿಲ್ ಫೂಲ್” ಮಾಡುವುದಕ್ಕಾಗಿ ಹಂಚಿಕೊಳ್ಳಲಾಗಿತ್ತು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಏಪ್ರಿಲ್ 25 ರಂದು ಮೇರ್ಲ ಪದವು ಎಂಬಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂಬಂತೆ ಬಿಂಬಿಸಿ ಪೋಸ್ಟರ್ ರಚನೆ ಮಾಡಲಾಗಿತ್ತು. ಇದೀಗ ಪೋಸ್ಟರ್ ಸಂಬಂಧಪಟ್ಟಂತೆ ಇದು ಏಪ್ರಿಲ್ ಫೂಲ್ ಮಾಡುವುದಕ್ಕಾಗಿ ರಚಿಸಲಾಗಿದ್ದು, ಅದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. - [ಉಜಿರೆ : ರಸ್ತೆ ಮಧ್ಯೆ ಇದ್ದ ಕೇಬಲ್ ವಯರ್ ಸಿಲುಕಿ ಬೈಕ್, ಆಟೋ ರಿಕ್ಷಾ ಪಲ್ಟಿ - ಆಟೋ ಚಾಲಕನಿಗೆ ಗಂಭೀರ](https://dhwaninews.com/cabel_auto-bike/): ಉಜಿರೆ, ಏ. 04 : ರಸ್ತೆ ಮಧ್ಯದಲ್ಲಿದ್ದ ಕೇಬಲ್ ವೈಯರ್ ಸಿಲುಕಿ ಬೈಕ್ ಸವಾರ ಹಾಗೂ ಆಟೋರಿಕ್ಷಾವೊಂದು ಅಪಘಾತಕ್ಕೀಡಾದ ಘಟನೆ ಅನುಗ್ರಹ ಕಾಲೇಜ್ ಬಳಿ  ನಡೆದಿದೆ. ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಕೇಬಲ್ ವೈಯರ್ ಅನ್ನು ಏಕಾಏಕಿ ಮೇಲಕ್ಕೆತ್ತಿದ ವೇಳೆ ಬೈಕ್ ಸವಾರನ ಕುತ್ತಿಗೆಗೆ ಸಿಲುಕಿದ ಪರಿಣಾಮ ಸವಾರ ಪಲ್ಟಿಯಾಗಿ ಬಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು, ಆಟೋರಿಕ್ಷಾ ಪಲ್ಟಿಯಾಗಿ ಆಟೋ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. - [ಚಾರ್ಮಾಡಿ : ಕುಂಡೊಟ್ಟುಗೆ ಲೋಕೋಪಯೋಗಿ ಸಚಿವರ ಭೇಟಿ ಸ್ಥಳೀಯರ ಅಹವಾಲು ಸ್ವೀಕಾರ](https://dhwaninews.com/charmady_jarakiholi/): ಬೆಳ್ತಂಗಡಿ, ಏ. 04 : ತಾಲೂಕಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮನವಿ ಮೇರೆಗೆ ಕುಂಡೊಟ್ಟುಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇಲ್ಲಿಯ ಕಿರು ಸೇತುವೆಯ ಬಗ್ಗೆ ಬೇಡಿಕೆನಿಟ್ಟರು ಬೇಟಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸ್ಥಳೀಯರಾದ ಯಶೋಧರ್ ಚಾರ್ಮಾಡಿ, ಅಶ್ರಫ್ ನೆರಿಯ, ಪ್ರದೀಪ್ ಕೆ ಸಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. - [ಬಂದಾರು : ಬಂದಾರು-ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತ, ತೋರಣ ಮುಹೂರ್ತ, ಧ್ವಜಾರೋಹಣ](https://dhwaninews.com/karaya_temple/): ಬಂದಾರು, ಏ. 04 : ಏಪ್ರಿಲ್ 02 ರಿಂದ 10 ರವರೆಗೆ ನಡೆಯುವ ಬಂದಾರು-ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಏಪ್ರಿಲ್ 03 ರಂದು ಬೆಳಗ್ಗೆ ಗೊನೆ ಮುಹೂರ್ತ, ಶ್ರೀ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಅಧ್ಯಕ್ಷರು, ಸರ್ವ ಸದಸ್ಯರು, ಆಡಳಿತಾಧಿಕಾರಿ, ಜಾತ್ರೋತ್ಸವ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಯಕ್ಷಗಾನ ಬಯಲಾಟ ಸಮಿತಿ, ತಂತ್ರಿಗಳು,ಅರ್ಚಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. - [ಕಾಸರಗೋಡು : ಮಂಜೇಶ್ವರ ವಿಧಾನಸಭೆ ಚುನಾವಣೆ - ಈ ಬಾರಿಯೂ ಜಿದ್ದಾ ಜಿದ್ದಿನ ಹೋರಾಟ !](https://dhwaninews.com/manjeshwara_election/): ಕಾಸರಗೋಡು, ಏ. 04 : ಈ ಹಿಂದಿನ ಎರಡು ವಿಧಾನಸಭೆ ಚುನಾವಣೆಯಲ್ಲಿ ನೆಕ್‌ ಟು ನೆಕ್‌ ಫೈಟ್‌ ಕೊಟ್ಟ ಮಂಜೇಶ್ವರದಲ್ಲಿ ಈ ಬಾರಿಯೂ ಜಿದ್ದಾ ಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಈ ಚುನಾವಣೆಯು ಕೇರಳದ ಮೊದಲ ವಿಧಾನಸಭಾ ಕ್ಷೇತ್ರ ಹಾಗೂ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರವೂ ಈ ಬಾರಿ ತೀವ್ರ ಸ್ಪರ್ಧೆ ನಡೆಯಲಿದೆ. ಪ್ರಧಾನವಾಗಿ ಹಾಲಿ ಶಾಸಕ ಎ.ಕೆ.ಎಂ.ಆಶ್ರಫ್‌, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಮತ್ತೊಮ್ಮೆ ನೇರ ಸ್ಪರ್ಧೆ ನಡೆಯಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಮತ್ತು ಅತೀ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ವಿಧಾನಸಭೆ ಕ್ಷೇತ್ರವಾಗಿದೆ ಮಂಜೇಶ್ವರ ವಿಧಾನಸಧಿಭೆ ಕ್ಷೇತ್ರ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 11 ಮಂದಿ ಇದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ವಿಧಾನಸಭೆಗಳ ಪೈಕಿ ಅತೀ ಹೆಚ್ಚು ಮತದಾರರು ಇಧಿದ್ದು, ಈ ಬಾರಿ 2,30,113 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ […] - [ಕೇರಳದಲ್ಲಿ ಶಶಿ ತರೂರ್ ಬೆಂಗಾವಲು ಮೇಲೆ ದಾಳಿ ಆರೋಪ - ಮೂವರು ಬಂಧನ](https://dhwaninews.com/shashi_attacks-kerala/): ಕೇರಳ, ಏ. 04 : ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನವನ್ನು ತಡೆದು, ಅವರ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಂಸದರು ವಂಡೂರಿನಲ್ಲಿ ನಡೆಯಲಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ, ತಿರುವಳ್ಳಿ ಚೆಲ್ಲಿತೋಡು ಸೇತುವೆ ಸಮೀಪ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕೆಲವರು ಬೆಂಗಾವಲು ಪಡೆಯನ್ನು ತಡೆದು ಅಡ್ಡಿಪಡಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಗೆ ದೌರ್ಜನ್ಯ ನಡೆಸಲಾಗಿದೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ವಂಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ, ಘಟನೆಗೆ ಸಂಬಂಧಿಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಳಿಕಾವು ಮೂಲದ ಉಮ್ಮಾರ ಎಂಬ ವ್ಯಕ್ತಿಯ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ […] - [ಮಂಗಳೂರು : "ಕುಡಿದು ಆಟವಾಡಿ" - ಗೆದ್ದವರಿಗೆ ಬಿಯರ್, ಎಂಸಿ ಲಕ್ಸುರಿ ಬಾಟಲ್ - ಹೀಗೊಂದು ಕ್ರಿಕೆಟ್ ಕದನ!
](https://dhwaninews.com/drunk_play_cricket/): ಮಂಗಳೂರು, ಏ. 03 : ಸ್ಥಳೀಯ ಕ್ರಿಕೆಟ್ ಪಂದ್ಯಾಟ ಎಂದರೆ ಅಲ್ಲಿ ಹಣ ಮತ್ತು ಟ್ರೋಫಿ ಬಹುಮಾನ ಸಾಮಾನ್ಯ. ಆದರೆ, “60 ವಾರಿಯರ್ಸ್ ಮೇರ್ಲಪದವು” ಅರ್ಪಿಸುವ ಕ್ರಿಕೆಟ್ ಕದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಪ್ರಕಾರ “60 ವಾರಿಯರ್ಸ್ ಟ್ರೋಫಿ-2026” ಎಪ್ರಿಲ್ 25ರಂದು ಸೈಂಟ್ ಜಾಸ್ತಿ ಜೋಸೆಫ್ ದ ವರ್ಕರ್ ಚರ್ಚ್ ಗ್ರೌಂಡ್ ಎಂಬಲ್ಲಿ ಆಯೋಜನೆಗೊಂಡಿದೆ. ಇದರಲ್ಲಿ ವಿಶೇಷತೆ ಎಂದರೆ ಎಲ್ಲಾ ಆಟಗಾರರು ಕೂಡ ಮಧ್ಯಪಾನ ಮಾಡಲೇಬೇಕು ಎಂದು ಆಯೋಜಕರು ಸೂಚನೆ ನೀಡಿದ್ದಾರೆ. ಬಹುಮಾನ ರೂಪವಾಗಿ ಮದ್ಯಪಾನವನ್ನೇ ನೀಡುತ್ತಿರುವುದು ಕೆಲವರ ವಿರೋಧಕ್ಕೆ ಕಾರಣವಾಗಿದೆ. ಇದೀಗ ಈ ಕ್ರೀಡಾಕೂಟದ ಪೋಸ್ಟರ್ ಬಹಳಷ್ಟು ವೈರಲ್ ಆಗುತ್ತಿದ್ದು, ಕೆಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ಮಂಗಳೂರಿನಂತಹ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟ ಆಯೋಜನೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ಪೋಸ್ಟರ್ ಎಷ್ಟು ಸತ್ಯ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. - [ಶಾಂತಿ ಜಪ ಆಮೇಲೆ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ - ಪಾಕಿಸ್ತಾನಕ್ಕೆ ಯುಎಇ ತರಾಟೆ](https://dhwaninews.com/pakistan_uae/): ಇಸ್ಲಾಮಾಬಾದ್, ಏ. 03 : ಅಮೆರಿಕ, ಇಸ್ರೇಲ್-ಇರಾನ್ ನಡುವೆ ಶಾಂತಿ ಸ್ಥಾಪನೆಗೆ ಮುಂದಾಗಿರುವ ಪಾಕಿಸ್ತಾನ(Pakistan)ಕ್ಕೆ ಯುಎಇ ದೊಡ್ಡ ಶಾಕ್ ಕೊಟ್ಟಿದೆ. ಪಾಕಿಸ್ತಾನಕ್ಕೆ ನೀಡಿದ್ದ ಸಾಲವನ್ನು ಹಿಂದಿರುಗಿಸುವಂತೆ ಯುಎಇ ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಏಪ್ರಿಲ್ 17ರ ಒಳಗೆ ಸಾಲವನ್ನು ವಾಪಸ್ ಕೊಡಿ ಎಂದು ಕೇಳಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಹೆಚ್ಚಿನ ಬಡ್ಡಿ ಕೂಡ ವಿಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇರಾನ್ ಮತ್ತು ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಪಾಕಿಸ್ತಾನ ಬಯಸುತ್ತದೆ. ಈ ಉದ್ದೇಶಕ್ಕಾಗಿ, ಅದು ಈಜಿಪ್ಟ್, ಟರ್ಕಿ ಮತ್ತು ಇತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇರಾನ್‌ನಲ್ಲಿ ಯುದ್ಧ ನಡೆಯುತ್ತಿರುವ ಮಧ್ಯೆ, ಯುಎಇ ಪಾಕಿಸ್ತಾನದ ಮೇಲೆ ತನ್ನ ಹಣವನ್ನು ಮರುಪಾವತಿಸುವಂತೆ ಒತ್ತಡ ಹೇರಿದೆ. ವಾಸ್ತವವಾಗಿ, 2018 ರಲ್ಲಿ, ಯುಎಇ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಸಾಲವನ್ನು ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಯುಎಇ ಪ್ರತಿ ವರ್ಷ ಈ ಸಾಲದ ಮೇಲೆ 130 ಮಿಲಿಯನ್ ಡಾಲರ್ […] - [ಪಶ್ಚಿಮ ಏಷ್ಯಾ ಯುದ್ಧದ ಪರಿಸ್ಥಿತಿ ನಿರ್ವಹಣೆ : ಮೋದಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ - ಕೈ ಪಕ್ಷಕ್ಕೆ ತೀವ್ರ ಮುಜುಗರ!](https://dhwaninews.com/kai_mujugara/): ನವದೆಹಲಿ, ಏ. 03 : ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭವನ್ನು ಭಾರತದ ರಾಜತಾಂತ್ರಿಕತೆ ನಿರ್ವಹಿಸಿದ ರೀತಿಯನ್ನು ವಿಪಕ್ಷ ಕಾಂಗ್ರೆಸ್ ಟೀಕಿಸುತ್ತಿದ್ದರೆ, ಕಾಂಗ್ರೆಸ್ ನ ನಾಯಕರೊಬ್ಬರು ಸರ್ಕಾರವನ್ನು ಹಾಡಿಹೊಗಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಗುರುವಾರ ಪಶ್ಚಿಮ ಏಷ್ಯಾ ಸಂಕಷ್ಟದ ಸಂದರ್ಭದಲ್ಲಿ ಭಾರತದ ರಾಜತಾಂತ್ರಿಕ ನಿರ್ವಹಣೆಯನ್ನು “ಪ್ರೌಢ ಮತ್ತು ನಿಪುಣ” ಎಂದು ಕೊಂಡಾಡಿದ್ದಾರೆ. ಸರ್ಕಾರದ ನಡೆ ದೇಶವನ್ನು ಅನೇಕ “ಸಂಭಾವ್ಯ ಸವಾಲುಗಳು ಮತ್ತು ಅಪಾಯಗಳಿಂದ” ದೂರವಿರಿಸಲು ಸಹಾಯ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಭಾರತ ಗ್ಲೋಬಲ್ ಸೌತ್ ರಾಷ್ಟ್ರಗಳು ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ಪ್ರಮುಖ ಸಹಭಾಗಿತ್ವ ಹೊಂದಿರುವ ದೇಶಗಳನ್ನು ಒಗ್ಗೂಡಿಸಿ, ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸಲು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ನವದೆಹಲಿಯು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಶರ್ಮಾ, “ಸಂಕಷ್ಟದ ಈ ಅವಧಿಯಲ್ಲಿ ಭಾರತದ ರಾಜತಾಂತ್ರಿಕ ಹಸ್ತಕ್ಷೇಪ ಪ್ರೌಢತೆ ಮತ್ತು ನೈಪುಣ್ಯತೆಯನ್ನು ತೋರಿಸಿದೆ; ಅನೇಕ ಸಾಧ್ಯತೆಯ ಮೈನ್ಫೀಲ್ಡ್‌ಗಳನ್ನು (ಅಪಾಯಕರ […] - [ಮಂಗಳೂರು : ರಸ್ತೆ ಬದಿ ತ್ಯಾಜ್ಯ ಎಸೆಯುವ ಮತ್ತು ಸುಡುವವರ ವಿರುದ್ಧ ಪ್ರಕರಣ ದಾಖಲಿಸಿ - ಜಿಪಂ ಸಿಇಒ ಸೂಚನೆ](https://dhwaninews.com/dk_ceo/): ಮಂಗಳೂರು, ಏ. 03 : ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ರಸ್ತೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವ ಮತ್ತು ಸುಡುವ ಪ್ರಕರಣಗಳನ್ನು ಗುರುತಿಸಿ ದಂಡ ವಿಧಿಸಬೇಕು. ದಂಡ ಪಾವತಿಸದೆ ಇದ್ದಲ್ಲಿ ಸ್ಥಳೀಯ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಿಸಲು ದ.ಕ. ಜಿಪಂ ಸಿಇಒ ನರ್ವಡೆ ನಾಯಕ ಕಾರ್ಬಾರಿ ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಪಂ ಇಒ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಅವರು ವೀಡಿಯೋ ಸಭೆ ನಡೆಸಿ ಮಾತನಾಡಿದರು. ಪ್ರತೀ ತಿಂಗಳ 1 ಮತ್ತು 3ನೇ ಶನಿವಾರ ಆಯೋಜಿಸುವ ಸ್ವಚ್ಛ ಶನಿವಾರ-ಸ್ವಚ್ಛತಾ ಕಾರ್ಯದಂದು ಗ್ರಾಪಂಗಳು ತಮ್ಮ ವ್ಯಾಪ್ತಿಯ ಎಲ್ಲಾ ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸಬೇಕು. ಸ್ವಚ್ಛ ಸಂಕೀರ್ಣ ಹೊಂದಿರದ 63 ಗ್ರಾಪಂಗಳಲ್ಲಿ ಘಟಕ ನಿರ್ಮಾಣದ ಬಗ್ಗೆ ತಾಪಂ ಅನಿಬರ್‌ಂಧಿತ ನಿಧಿ ಮತ್ತು ಗ್ರಾಪಂಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿ ಕನಿಷ್ಟ 1,000 ಚದರ ಅಡಿ ವಿಸ್ತೀರ್ಣದ ಘಟಕ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಜಿಪಂ ಸಿಇಒ ಸೂಚಿಸಿದರು. ನೈರ್ಮಲ್ಯ ತ್ಯಾಜ್ಯ […] - [IPL 2026: ಶ್ರೀಲಂಕಾ ಕ್ರಿಕೆಟ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ RCB ಆಟಗಾರ; ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ?](https://dhwaninews.com/nuvan_tushara/): IPL 2026 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಶ್ರೀಲಂಕಾದ ವೇಗಿ ನುವಾನ್ ತುಷಾರ ಐಪಿಎಲ್ 2026ರಲ್ಲಿ ಭಾಗವಹಿಸಲು ಎನ್‌ಒಸಿ ನೀಡದ ಕಾರಣ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ನ ಉನ್ನತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ನಿಗದಿತ ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ತುಷಾರ ಅವರಿಗೆ ಎನ್‌ಒಸಿ ನೀಡಲಾಗಿಲ್ಲ. ಆದರೆ ಈಗ, ಐಪಿಎಲ್ ಆಡಲು ಅವಕಾಶ ನೀಡುವಂತೆ ಎಸ್‌ಎಲ್‌ಸಿಗೆ ನಿರ್ದೇಶನ ನೀಡುವಂತೆ ಕೋರಿ ವೇಗಿ ಪ್ರಕರಣ ದಾಖಲಿಸಿದ್ದಾರೆ. ವರದಿ ಪ್ರಕಾರ, ತುಷಾರ ಅವರು ತಮ್ಮ ಕೇಂದ್ರ ಒಪ್ಪಂದವನ್ನು ನವೀಕರಿಸದಿರಲು ಎಸ್‌ಎಲ್‌ಸಿಗೆ ತಿಳಿಸಿದ್ದಾರೆ. ಶ್ರೀಲಂಕಾ ಮೂಲದ ಮಾಧ್ಯಮ ಸಂಸ್ಥೆ ನ್ಯೂಸ್‌ವೈರ್ ವರದಿ ಪ್ರಕಾರ, ತುಷಾರ ಅವರು ತಮ್ಮ ದೂರಿನಲ್ಲಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಕಾರ್ಯದರ್ಶಿ ಬಂಡುಲಾ ದಿಸಾನಾಯಕೆ, ಖಜಾಂಚಿ ಸುಜೀವ ಗೋಡಾಲಿಯಡ್ಡ ಮತ್ತು ಸಿಇಒ ಆಶ್ಲೇ ಡಿ ಸಿಲ್ವಾ ಅವರನ್ನು ಪ್ರತಿವಾದಿಗಳೆಂದು ಹೆಸರಿಸಿದ್ದಾರೆ. ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಲಾಗಿದ್ದು, ಗುರುವಾರ ಕೊಲಂಬೊ ಜಿಲ್ಲಾ ನ್ಯಾಯಾಲಯವು […] - [ಸ್ಥಳೀಯ ಅಂಗಡಿಯಲ್ಲಿ ಸಿಗುವ 5ರೂ. ಬೋಟಿಗೆ ಪಬ್‌ನಲ್ಲಿ 150 ರೂ. ಪಾವತಿಸಿದ ಗ್ರಾಹಕ !](https://dhwaninews.com/boti_in_pub/): ಬೆಂಗಳೂರು, ಏ. 02 : ಬೆಂಗಳೂರಿನಲ್ಲಿನ ಕೆಲವೊಂದು ಪಬ್ ತುಂಬಾ ದುಬಾರಿಯಾಗಿರುತ್ತದೆ. ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಪಬ್‌ವೊಂದರಲ್ಲಿ 150 ರೂ. ಪಾವತಿಸಿರುವ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ. ಇದೀಗ ಈ ದುಬಾರಿ ಪಬ್ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅರುಣ್‌ರಾಜ್ ಪತ್ತಾರ್ ಅವರು, “ಇದನ್ನು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ ಎಂದು ಕರೆಯಲಾಗುತ್ತಿತ್ತು. ನಾನು ಇದನ್ನು ಆರ್ಡರ್ ಮಾಡಿದಾಗ ಅವರು ನನಗೆ ತಂದಿದ್ದು ಇದನ್ನೇ. ಪ್ರಪಂಚದಲ್ಲಿ ಹಾಗೂ ನಮ್ಮ ರಕ್ತ ಸಂಬಂಧದಲ್ಲಿ ಇದಕ್ಕೆ 150 ಪಾವತಿಸಿದ ಮೊದಲಿಗ ನಾನು” ಎಂದು ಬರೆದುಕೊಂಡಿದ್ದಾರೆ. ಸದ್ಯ ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಅಬ್ಬಾ ನಾನು ಒಬ್ಬನೇ ಇಂತಹ ವಂಚನೆಗೆ ಒಳಾಗಾಗಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ‘ಉತ್ತಮ ಮಾರ್ಕೆಟಿಂಗ್‌ನೊಂದಿಗೆ ಸರಳವಾದ ವಸ್ತುಗಳನ್ನು ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಎಂದು ಹೇಳುತ್ತಾರೆ’ […] - [ನಿಡಿಗಲ್ : ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ](https://dhwaninews.com/nidigal_devara-bheti/): ನಿಡಿಗಲ್, ಏ. 02 : ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ಬೆಳಗ್ಗಿನಿಂದ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ ಹಾಗೂ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ಎಂ. ನಾಗೇಶ್ ಕುಮಾರ್ ಗೌಡ ಸ್ವಾಮಿ ಪ್ರಸಾದ್ ನಿಡ್ಲೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಗುರುರಾಜ್ ಗುರಿಪಳ್ಳ ಹಾಗೂ ನೂರಾರು ಭಕ್ತರು ನೆರೆದಿದ್ದರು. ಇಂದು ಶ್ರೀ ಕ್ಷೇತ್ರದಲ್ಲಿ ರಾತ್ರಿ 07-30ರಿಂದ ವಾರ್ಷಿಕ ನಡ್ವಾಲ್ ಸಿರಿಜಾತ್ರೆ, ರಾತ್ರಿ 10 ಗಂಟೆಗೆ ರಾಘು ಮಾಸ್ಟ್ರು ನಾಟಕ ಪ್ರದರ್ಶನ ನಡೆಯಲಿದೆ. ಧ್ವನಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ “ನಡ್ವಾಲ್ ಸಿರಿಜಾತ್ರೆ” ನೇರಪ್ರಸಾರಗೊಳ್ಳಲಿದೆ. […] - [ಉಜಿರೆ : ಇಂದು ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ  ಕುಮಾರ ದರ್ಶನ, "ನಡ್ವಾಲ್ ಸಿರಿಜಾತ್ರೆ"](https://dhwaninews.com/nadval_sirijathre/): ನಿಡಿಗಲ್, ಏ. 02 : ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ರಾತ್ರಿ ಗಂಟೆ 8 ಗಂಟೆಯಿಂದ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ “ವಾರ್ಷಿಕ ನಡ್ವಾಲ್ ಸಿರಿಜಾತ್ರೆ” ನಡೆಯಲಿದೆ. ಇಂದು ಬೆಳಗ್ಗಿನಿಂದ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ ಹಾಗೂ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ ನಡೆಯಿತು. ರಾತ್ರಿ ಗಂಟೆ 8 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀಧಾಮ, ಮಾಣಿಲ  ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. - [ಮದುವೆ ಸಮಾರಂಭದಲ್ಲಿ ಎಣ್ಣೆ ಕೊಡಲಿಲ್ಲವೆಂದು ಗಲಾಟೆ - ವಧು ವರರ ಮೇಲೆಯೇ ಹಲ್ಲೆ !](https://dhwaninews.com/marriage_hall_fight/): ಗ್ವಾಲಿಯರ್, ಏ. 02 : ಮದುವೆ ಸಮಾರಂಭದಲ್ಲಿ ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ಅತಿಥಿಗಳ ಗುಂಪೊಂದು ವಧು-ವರ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪಟಾಯ್ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿವರ ಸ್ಥಳೀಯ ನಿವಾಸಿ ಮಹೇಶ್ ಜಾತವ್ ಎಂಬುವವರ ವಿವಾಹ ಸಮಾರಂಭ ಮಂಗಳವಾರ ರಾತ್ರಿ ಆರೋನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿತ್ತು. ಈ ವೇಳೆ ನೆರೆಹೊರೆಯವರು ಹಾಗೂ ಕೆಲವು ಅತಿಥಿಗಳು ಮದ್ಯದ ವ್ಯವಸ್ಥೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಆದರೆ ವರನು ಮದ್ಯ ನೀಡಲು ನಿರಾಕರಿಸಿದ್ದರಿಂದ ವಿವಾದ ಉಂಟಾಗಿದೆ. ತಾಯಿ-ಮಗನ ಮೇಲೆ ಹಲ್ಲೆ ಮದುವೆ ಶಾಸ್ತ್ರಗಳು ಮುಗಿದು ವಧು ಮನೆಗೆ ಬಂದ ಸಮಯದಲ್ಲಿ, ನೆರೆಹೊರೆಯವರು ವರನ ಬಳಿ ಬಂದು ಮದ್ಯ ಖರೀದಿಸಲು ಹಣ ನೀಡುವಂತೆ ಪೀಡಿಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ವರನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ವರನ ತಾಯಿ ಶೀಲಾ, ತಂದೆ ಹಾಗೂ ವಧುವಿನ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು […] - [ಬಂಟ್ವಾಳ : ಮಗನ ಸೈಕಲ್‌ಗೆ ಗಾಳಿ ಹಾಕಿಸಲು ಹೋಗುತ್ತಿದ್ದಾಗ ಅಪಘಾತ - ತಂದೆ ದಾರುಣ ಸಾವು](https://dhwaninews.com/bolero-accident_death/): ಬಂಟ್ವಾಳ, ಏ. 02 : ಮಗನ ಹೊಸ ಸೈಕಲ್‌ಗೆ ಗಾಳಿ ಹಾಕಿಸಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೊಲೆರೊ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 75ರ ಕೈಕಂಬದ ಶಾಂತಿ ಅಂಗಡಿ ಎಂಬಲ್ಲಿ ನಡೆದಿದೆ. ಮೃತರನ್ನು ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ ಪಿಂಟೊ (49) ಎಂದು ಗುರುತಿಸಲಾಗಿದೆ. ಗಾಡ್ವಿನ್ ಅವರು ಮಂಗಳವಾರವಷ್ಟೇ ತನ್ನ ಮಕ್ಕಳಿಗೆ ಹೊಸ ಸೈಕಲ್ ತಂದಿದ್ದರು. ಸೈಕಲ್ ಟೈರ್‌ನಲ್ಲಿ ಗಾಳಿ ಇಲ್ಲದ ಕಾರಣ, ಬುಧವಾರ ಸಮೀಪದ ಸೈಕಲ್ ಅಂಗಡಿಗೆ ಗಾಳಿ ಹಾಕಿಸಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೊಲೆರೊ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಗಾಡ್ವಿನ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಡ್ವಿನ್ ಅವರು ಬಿ.ಸಿ.ರೋಡ್‌ನ ತಲಪಾಡಿಯಲ್ಲಿ ವಾಹನ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ವಾಷಿಂಗ್ಟನ್ :‌ ಇರಾನ್ ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಯುಎಸ್‌ ಸಜ್ಜು - ಟ್ರಂಪ್ ಎಚ್ಚರಿಕೆ](https://dhwaninews.com/iran_trump/): ವಾಷಿಂಗ್ಟನ್ :‌ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುದ್ಧದ ಕುರಿತು ಮಾಹಿತಿ ಹಂಚಿಕೊಳ್ಳಲು ವಾಷಿಂಗ್ಟನ್‌ ನಲ್ಲಿ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ್ದು,ಇರಾನ್‌ ಯುದ್ಧದಲ್ಲಿ ಅಮೆರಿಕಾ ಅಭೂತಪೂರ್ವ ಜಯವನ್ನು ಗಳಿಸಿದ್ದು, ನಮ್ಮ ಉದ್ದೇಶಗಳನ್ನು ಪೂರೈಸಲು ಸಾಕಷ್ಟು ಹತ್ತಿರವಾಗಿದ್ದೇವೆ. ಆದಾಗ್ಯೂ, ಇರಾನ್ ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಯುಎಸ್‌ ಸಜ್ಜಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಹೊರ್ಮುಜ್‌ ಜಲಸಂಧಿಯಾಗಲಿ ಅವರ ತೈಲವಾಗಲಿ ನಮಗೆ ಬೇಡ ಎಂದು ತಿಳಿಸಿದ್ದಾರೆ. ಇರಾನ್‌ ಯುದ್ಧದಲ್ಲಿ ಅಮೆರಿಕಾಗೆ ಅಭೂತಪೂರ್ವ ಜಯ ಎಂದ ಟ್ರಂಪ್‌ ಘೋಷಣೆ ಕಳೆದ ಒಂದು ತಿಂಗಳಿನಿಂದ ಇರಾನ್‌ ಮೇಲೆ ಅಮೆರಿಕಾ ನಡೆಸುತ್ತಿರುವ ಆಪರೇಷನ್‌ ಎಪಿಕ್‌ ಫ್ಯೂರಿಯಲ್ಲಿ ಇರಾನ್‌ ನ ನೌಕಾಪಡೆ ಸೇರಿದಂತೆ ಅವರ ಮಿಲಿಟರಿಗೆ ದೊಡ್ಡ ನಷ್ಟವಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಅವರ ಸಾಮರ್ಥ್ಯ, ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ಛಿದ್ರಗೊಳಿಸಲಾಗುತ್ತಿದ್ದು, ಅವರ ಮಿಲಿಟರಿ ಸಾಮರ್ಥ್ಯಗಳನ್ನು ಗಣನೀಯವಾಗಿ ಕುಗ್ಗಿಸಿದ್ದೇವೆ. ಜೊತೆಗೆ ಈಗ ಅವರಲ್ಲಿ ಇರಾನ್ ಸೈನ್ಯವು ಹೋಗಿದೆ, ಅವರ […] - [ಲಕ್ನೋ : ರಿಝ್ವಿ ಬ್ಯಾಟಿಂಗ್ ಪ್ರಾಬಲ್ಯಕ್ಕೆ ಶರಣಾದ ಲಕ್ನೋ ಸೂಪರ್ ಜೈಂಟ್ಸ್](https://dhwaninews.com/luckno-vs-delhi_1/): ಲಕ್ನೋ : ಏಕನಾ ಕ್ರೀಡಾಂಗಣವೆಂದರೆ ಅದು ಬೌಲರ್ ಗಳು ಪಾರಮ್ಯ ಮೆರೆಯುತ್ತಾರೆಂಬುದೇ ಲೆಕ್ಕಚಾರವಾಗಿತ್ತು. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡುವ ತಂಡವೇ ಗೆಲುವು ಸಾಧಿಸಬಹುದು ಎಂಬ ವಿಶ್ಲೇಷಣೆಯೇ ಹೆಚ್ಚಿತ್ತು. ಆರಂಭದಲ್ಲಿ ಏಕನಾ ಕ್ರೀಡಾಂಗಣದ ಪಿಚ್ ಬ್ಯಾಟರ್ ಗಳಿಗೆ ನೆರವಾದರೆ, ಆ ಬಳಿಕ ನಿಧಾನವಾಗಿ ಬೌಲಿಂಗ್ ಪಿಚ್ ಆಗಿ ಬದಲಾಗುತ್ತದೆ ಎಂಬ ಲೆಕ್ಕಚಾರವಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಬ್ಯಾಟಿಂಗ್ ಪ್ರಾಬಲ್ಯ ಸಾಧಿಸಿದ ಸಮೀರ್ ರಿಝ್ವಿಯ ಸೊಗಸಾದ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18.4 ಓವರ್ ಗಳಲ್ಲಿ 145 ರನ್ ಗಳನ್ನು ಗಳಿಸಿತು. ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ಸಾಧಾರಣ ಮೊತ್ತ ಬೆಂಬತ್ತಿ ಹೊರಟಿದ್ದ ಡೆಲ್ಲಿ ತಂಡ ಒಂದು ಹಂತದಲ್ಲಿ […] - [ಬಂಟ್ವಾಳ : ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಕಾರು - 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ](https://dhwaninews.com/car_accident-3/): ಬಂಟ್ವಾಳ, ಏ. 02 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಬುಧವಾರ ರಾತ್ರಿ ಸುಮಾರು 12:45 ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಉಡುಪಿ ಮೂಲದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬವನ್ನೇ ಎಳೆದುಕೊಂಡು ಹೋಗಿ ಬಳಿಕ ಪಲ್ಟಿಯಾಗಿದೆ. ಕಾರಿನಲ್ಲಿ ಸುಮಾರು 4 ಮಂದಿ ವಿದ್ಯಾರ್ಥಿನಿಯರು ಹಾಗೂ 3 ಮಂದಿ ವಿದ್ಯಾರ್ಥಿಗಳು ಇದ್ದರು. ಪಲ್ಟಿಯಾದ ಕಾರನ್ನು ಎತ್ತಿ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. - [IPL 2026 : ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಸೆಣಸಾಟ - ಎಲ್ಲರ ಕಣ್ಣು ರಾಹುಲ್ ಮತ್ತು ಪಂತ್ ಮೇಲೆ !](https://dhwaninews.com/ipl-2026-delhi-luckno/): ಲಕ್ನೋ : ಐಪಿಎಲ್ ನ ಡಾರ್ಕ್ ಹಾರ್ಸ್ ಗಳೆಂದೇ ಪರಿಗಣಿತವಾಗಿರುವ ಎರಡು ತಂಡಗಳಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಇದೀಗ ಸತ್ವಪರೀಕ್ಷೆಗೆ ಸಜ್ಜಾಗಿವೆ. ಲಖನೌ ತಂಡದಿಂದ ಹೊರಬಂದು ಕಳೆದ ಬಾರಿ ಮಿಂಚಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರೆ ಮೇಲೆ ಡೆಲ್ಲಿಗೆ ಹೆಚ್ಚಿನ ನಿರೀಕ್ಷೆಗಳಿವೆ. ಮತ್ತೊಂದೆಡೆ ಕಳೆದ ವರ್ಷ ಇನ್ನಿಲ್ಲದ ವೈಫಲ್ಯ ಕಂಡಿದ್ದ ನಾಯಕ ರಿಷಬ್ ಪಂತ್ ಅವರಿಂದ ಈ ಸೀಸನ್ ನಲ್ಲಿ ಭರ್ಜರಿ ಶುಭಾರಂಭವನ್ನು ಲಖನೌ ಸೂಪರ್ ಜೈಂಟ್ಸ್ ಎದುರು ನೋಡುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ತಿಳಿಸಿರುವಂತೆ ಕೆಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್ ನೊಂದಿಗೆ ಆರಂಭಿಕನ ಹೊಣೆಯನ್ನೂ ನಿರ್ವಹಿಸಲಿದ್ದಾರೆ. ಆದರೆ ಅವರ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಮತ್ತೊಬ್ಬ ಬ್ಯಾಟರ್ ಯಾರು ಎಂಬ ಬಗ್ಗೆ ಖಾತ್ರಿಯಿಲ್ಲ. ಪೃಥ್ವಿ ಶಾ ಅವರು ಇಳಿದರೂ ಅಚ್ಚರಿಯೇನಿಲ್ಲ. ಕೆಎಲ್ ಉತ್ತಮ ಆರಂಭ ಒದಗಿಸಿದರೆ ಸ್ಟಬ್ಸ್, ಮಿಲ್ಲರ್, ಕರುಣ್ ನಾಯರ್ ಅವರು ಇನ್ನಿಂಗ್ಸ್ ಬೆಳೆಸಿಯಾರು […] - [ಮಂಗಳೂರು : ದೋಣಿ ಮಗುಚಿಬಿದ್ದು ಇಬ್ಬರು ಯುವಕರು ನದಿ ಪಾಲು !](https://dhwaninews.com/doni_palti-2/): ಮಂಗಳೂರು, ಏ. 01 : ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು ನದಿ ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ (ಏ.1) ಮುಂಜಾನೆ ಸಂಭವಿಸಿದೆ. ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ನೀರುಪಾಲಾದ ಯುವಕರು. ಬುಧವಾರ ಮುಂಜಾನೆ ಸುಮಾರು 1:30ರ ವೇಳೆಗೆ ಗಣೇಶ್, ರಾಯಲ್ ಹಾಗೂ ನಿತೇಶ್ ಫಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದೋಣಿ ಹಠಾತ್ತನೆ ನದಿಯಲ್ಲಿ ಮಗುಚಿ ಬಿದ್ದಿದೆ. ಈ ಸಮಯ ಈಜಲು ಬಾರದೆ ಗಣೇಶ್ ಹಾಗೂ ರಾಯಲ್ ನೀರುಪಾಲಾಗಿದ್ದು, ನಿತೇಶ್ ಈಜಿ ದಡ ಸೇರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ತೀವ್ರ ಶೋಧ ಕಾರ್ಯ ನಡೆಸಿದ್ದು ಈ ವೇಳೆ ಗಣೇಶ್ ಎಂಬಾತನ ಮೃತದೇಹ ಪತ್ತೆಯಾಗಿದೆ.ರಾಯಲ್ ಎಂಬಾತನ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು […] - [ಹೈದರಾಬಾದ್‌ : ಬೃಹತ್ ಕಲಬೆರಕೆ ಜಾಲ ಪತ್ತೆ - ಅಸಿಟಿಕ್ ಆಸಿಡ್, ಕ್ಸಾಂಥನ್ ಗಮ್ ಬಳಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿ !](https://dhwaninews.com/ginger-garlic_paste_adulteration/): ಹೈದರಾಬಾದ್‌, ಏ. 01 : ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಲ್ಲ ಬೃಹತ್ ಕಲಬೆರಕೆ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಗರದ ಕಟ್ಟೆದನ್ ಪ್ರದೇಶದಲ್ಲಿರುವ ‘ಎಸ್‌ಕೆಆರ್ ಫುಡ್ ಪ್ರಾಡಕ್ಟ್’ ಎಂಬ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 4,032 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಅತ್ಯಂತ ಕೊಳಕು ಮತ್ತು ಅಶುಚಿಯಾದ ಜಾಗದಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿರುವುದು ಕಂಡುಬಂದಿದೆ. ಬೆಳ್ಳುಳ್ಳಿಯನ್ನು ನೆಲದ ಮೇಲೆ ರಾಶಿ ಹಾಕಿರುವುದು ಅಚ್ಚರಿ ಮೂಡಿಸಿದೆ. ಕಲಬೆರಕೆ ದಂಧೆ : ಈ ಘಟಕದಲ್ಲಿ ಗುಣಮಟ್ಟವಿಲ್ಲದ ಕಚ್ಚಾ ವಸ್ತುಗಳ ಜೊತೆಗೆ ಅಸಿಟಿಕ್ ಆಸಿಡ್ (Acetic acid) ಮತ್ತು ಕ್ಸಾಂಥನ್ ಗಮ್ (Xanthan gum) ನಂತಹ ರಾಸಾಯನಿಕಗಳನ್ನು ಬಳಸಿ ಪೇಸ್ಟ್ ತಯಾರಿಸಲಾಗುತ್ತಿತ್ತು. ಇದನ್ನು ಹೋಟೆಲ್‌ಗಳು ಮತ್ತು ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಪೊಲೀಸರು ದಾಳಿಯ ವೇಳೆ ಒಟ್ಟು 22 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ […] - [ಶಿವಮೊಗ್ಗ : ಬಾಲಕನ ಸಮಾಧಿ ಮೇಲೆ ಯಾಕಿಷ್ಟು ದ್ವೇಷ ? - ಸಂಕೇತ್ ನ ಸಮಾಧಿ ಧ್ವಂಸಗೊಳಿಸಿದ ದುಷ್ಟರು !](https://dhwaninews.com/sanket_samadhi/): ಶಿವಮೊಗ್ಗ, ಏ. 01 : ಫೆಬ್ರವರಿ 23ರಂದು ಅನ್ಯಕೋಮಿನ ಬಾಲಕರಿಂದ ಕೊಲೆಯಾಗಿದ್ದ ಸಂಕೇತ್ ಸಮಾಧಿಯನ್ನು ದುಷ್ಟರು ಧ್ವಂಸಗೊಳಿಸಿದ್ದಾರೆ. ಸಂಕೇತ್ ಅಂತ್ಯಕ್ರಿಯೆಯನ್ನು ಊರಗಡೂರಿನ ಗುಡ್ಡೇಮರಡಿ ದೇವಸ್ಥಾನದ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಗಿತ್ತು. ಪೋಷಕರು ಮಗ ಸಂಕೇತ್ ಫೋಟೋ ಹಾಕಿ ಚಿಕ್ಕದಾದ ಸಮಾಧಿಯನ್ನು ನಿರ್ಮಿಸಿದ್ದರು. ಇದೀಗ ಸಂಕೇತ್ ಭಾವಚಿತ್ರವುಳ್ಳ ಗ್ರೈನೆಟ್ ಕಲ್ಲನ್ನು ದುಷ್ಕರ್ಮಿಗಳು ಒಡೆದ ಹಾಕಿದ್ದಾರೆ. ಕುಟುಂಬಸ್ಥರು ಪ್ರತಿ ಬುಧವಾರಕ್ಕೊಮ್ಮೆ ಸ್ಮಶಾನಕ್ಕೆ ತೆರಳಿ ಸಂಕೇತ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ಇದೀಗ ಮಗ ಸಮಾಧಿ ಧ್ವಂಸಗೊಳಿಸಿರುವ ಸುದ್ದಿ ಕೇಳಿ ಸಂಕೇತ್ ಕುಟುಂಬ ಆಘಾತಕ್ಕೊಳಗಾಗಿದೆ. ಸಮಾಧಿ ಧ್ವಂಸ ಸಂಬಂಧ ಸಂಕೇತ್ ತಂದೆ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗನ ಸಾವಿನ ಬಳಿಕ ಊಟವೂ ಸರಿಯಾಗಿ ಮಾಡಿಲ್ಲ : ಸಂಕೇತ್ ತಂದೆ ಅಳಲು ನನ್ನ ಮಗ ಸತ್ತ ಮೇಲು ಸಮಾಧಿಯನ್ನು ಬಿಡಲಿಲ್ಲ ಹಾಳು ಮಾಡಿದ್ದಾರೆ. ನಮ್ಮ ಮೇಲೆ ದ್ವೇಷವಿದ್ದರೆ ನಮಗೆ ಏನಾದರೂ ಮಾಡಿಬಿಡಿ. ನಮ್ಮ ಮನೆಯಲ್ಲಿ ಈ ಘಟನೆ ಸಂಭವಿಸಿದ ಬೆನ್ನಲ್ಲೇ ಯಾರೂ […] - [ಹೊಸದಿಲ್ಲಿ : LPG ಸಿಲಿಂಡರ್ ಬೆಲೆ 195.50 ರೂಪಾಯಿ ಹೆಚ್ಚಳ - ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆ ಆಗಿದೆಯೇ ?](https://dhwaninews.com/lpg_rate-high-2/): ಹೊಸದಿಲ್ಲಿ, ಏ. 01 : ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಆಗಿದ್ದು, ಇದರ ಪ್ರಭಾವ ಎಲ್ ಪಿಜಿ ಮೇಲೂ ತಟ್ಟಿದೆ. ಏಪ್ರಿಲ್ 1 , ಅಂದರೆ ಇಂದಿನಿಂದ ಜಾರಿಯಾಗುವಂತೆ ವಾಣಿಜ್ಯ ಸಿಲಿಂಡರ್ ಬೆಲೆ 195.50 ರೂಪಾಯಿ ಹೆಚ್ಚಳವಾಗಿದೆ. ಕಳೆದ ಮಾರ್ಚ್ 1 ರಂದು 114.5 ರೂಪಾಯಿ ಹೆಚ್ಚಳವಾಗಿತ್ತು. ಈ ಬೆಲೆ ಏರಿಕೆ 19 ಕೆಜಿ ಸಿಲಿಂಡರ್ ಗೆ ಸಂಬಂಧಿಸಿದೆ. ಹೀಗಾಗಿ ವಾಣಿಜ್ಯ ಎಲ್ ಪಿಜಿಯ ಹೊಸ ದರ 2,078.50 ರೂಪಾಯಿಗೆ ತಲುಪಿದೆ. ಗೃಹಬಳಕೆ ಸಿಲಿಂಡರ್ ದರವನ್ನು 14.2 ಕೆಜಿಯ ಸಿಲಿಂಡರ್ ಗೆ ಕಳೆದ ಮಾರ್ಚ್ 7ಕ್ಕೆ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಗ್ಯಾಸ್ ಬೆಲೆ 913 ರೂ.ಆಗಿತ್ತು. ಇದೀಗ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಅಂತರಾಷ್ಟ್ರೀಯ ಬೆಂಚ್ ಮಾರ್ಕ್ ಹಾಗೂ ವಿನಿಮಯ ವೆಚ್ಚಕ್ಕೆ ಆಧರಿಸಿ, ದೇಶದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಎಲ್ ಪಿಜಿ […] - [ಮೂಡುಬಿದಿರೆ : ಪೆಟ್ರೋಲ್ ಬಂಕ್ ಬಳಿ ಭೀಕರ ರಸ್ತೆ ಅಪಘಾತ - ತಾಯಿ, ಮಗ ಸಾವು](https://dhwaninews.com/accident_tayi_maga_death/): ಮೂಡುಬಿದಿರೆ, ಏ. 01 : ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಮೂಡುಬಿದಿರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಮತ್ತು ಅವರ ಪುತ್ರ ಸೀನ ಎಂದು ಗುರುತಿಸಲಾಗಿದೆ. ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ತಾಯಿ-ಮಗ ಇಬ್ಬರೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನ ಹಿಂಭಾಗಕ್ಕೆ ಇವರ ಬೈಕ್ ವೇಗವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪ್ರೇಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೀನ ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. - [ಬೆಳ್ತಂಗಡಿ  : ಸರಕಾರಿ ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯರಿಗೆ ಗಾಯ - ಆಸ್ಪತ್ರೆಗೆ ಭೇಟಿ ನೀಡಿ, ಅರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ](https://dhwaninews.com/poonja_hospital/): ಬೆಳ್ತಂಗಡಿ, ಏ. 01: ತಾಲೂಕಿನ ರೇಷ್ಮೆರೋಡ್‌ ಬಳಿ ಚಲಿಸುತ್ತಿದ್ದ ಮಾ.31ರ ಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಶಾಸಕ ಹರೀಶ್ ಪೂಂಜ ವಿಚಾರಿಸಿದರು. ಉಜಿರೆಯ ಎಸ್ ಡಿ ಎಂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯನ್ನು ಮಾತನಾಡಿಸಿ, ಘಟನೆಯ ಬಗ್ಗೆ ವಿವರಣೆ ಪಡೆದುಕೊಂಡರು.ಈ ವೇಳೆ ಗಾಯಾಳು ವಿದ್ಯಾರ್ಥಿನಿಯರ ತಂದೆ ನಾಗರಾಜ್, ತಾಯಿ ರೂಪರವರಿಗೂ ಧೈರ್ಯ ತುಂಬಿದರು. - [ಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ನೂತನ ಸದಸ್ಯರಾಗಿ ಮನೀಶ್, ಸಂತೋಷ್ ಆಯ್ಕೆ](https://dhwaninews.com/yuvamorcha_members/): ಬೆಳ್ತಂಗಡಿ, ಮಾ. 31: ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ನೂತನ ಸದಸ್ಯರಾಗಿ ಮನೀಶ್ ಅಂಚನ್ ಧರ್ಮಸ್ಥಳ, ಸಂತೋಷ್ ಕುಮಾರ್ ಇಂದಬೆಟ್ಟು ಆಯ್ಕೆಯಾಗಿದ್ದಾರೆ. ಇವರು ಹಲವಾರು  ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಮುಖಿ ಸಂಘ  ಸಂಸ್ಥೆಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. - [ಮುಂಬೈ : ಬಾಹುಬಲಿ 2, ಕೆಜಿಎಫ್ 2 ದಾಖಲೆಗಳನ್ನು ಮೆಟ್ಟಿನಿಂತ ‘ಧುರಂಧರ್ 2’](https://dhwaninews.com/dhurandra_2/): ಮುಂಬೈ, ಮಾ. 31 : ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಯನ್ನು ಮುರಿಯುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ‘ಧುರಂಧರ್ 2’ ಚಿತ್ರದ ಪ್ರಾಬಲ್ಯವನ್ನು ಸಾಧಿಸಿದೆ. ಈ ಚಿತ್ರವು ಮಾರ್ಚ್ 19ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕೇವಲ 10 ದಿನಗಳಲ್ಲಿ, ಇದು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಡೂಪರ್ ಹಿಟ್ ಚಿತ್ರಗಳನ್ನು ಸಹ ಹಿಂದಿಕ್ಕಿದೆ. ಈಗ ಪ್ರಭಾಸ್ ಅವರ ಬ್ಲಾಕ್‌ಬಸ್ಟರ್ ಚಿತ್ರ ‘ಬಾಹುಬಲಿ 2: ದಿ ಕನ್ಕ್ಲೂಷನ್’ ಚಿತ್ರ ಬರೆದ ದಾಖಲೆ ಮುರಿದಿದೆ. ‘ಧುರಂಧರ್ 2’ ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ. ಎಸ್. ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರವು ಉತ್ತರ ಅಮೆರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿತ್ತು. ಈ ಚಿತ್ರವು ಉತ್ತರ ಅಮೆರಿಕಾದಲ್ಲಿ $20 ಮಿಲಿಯನ್ ಅಥವಾ ಸುಮಾರು 188 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಕಳೆದ ಒಂಬತ್ತು ವರ್ಷಗಳಿಂದ, ‘ಬಾಹುಬಲಿ 2’ ರ […] - [ಬೆಳ್ತಂಗಡಿ : ಸಂಚರಿಸುತ್ತಿದ್ದ ಬಸ್ ನಿಂದ ಕೆಳಗೆ ಬಿದ್ದ ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು - ಆಸ್ಪತ್ರೆಗೆ ದಾಖಲು](https://dhwaninews.com/ksrtc_students-falls/): ಬೆಳ್ತಂಗಡಿ, ಮಾ. 31 : ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆ ಸಂಚರಿಸುತ್ತಿದ್ದ ಸರಕಾರಿ ಬಸ್ ನ ಬಾಗಿಲು ಇದ್ದಕ್ಕಿಂದಂತೆ ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದ ಘಟನೆ ಇಂದು ಬೆಳಿಗ್ಗೆ ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ನಡೆದಿದೆ. ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಬ್ಬಳು ಬೆಳ್ತಂಗಡಿ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಮತ್ತೋರ್ವಳು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯಾಗಿದ್ದಾಳೆ. ಬಸ್ ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರು ಇದ್ದ ಕಾರಣ, ಓವರ್ ಲೋಡ್ ಆಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. - [IPL 2026- ವೈಭವ್ ವೈಭವ, ಬರ್ಗರ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್](https://dhwaninews.com/ipl-2026-rr-csk/): IPL 2026 : ರಾಜಸ್ಥಾನ ತಂಡದ ಎಡಗೈ ಬ್ಯಾಟ್ಸ್ ಮೆನ್ ವೈಭವ್ ಸೂರ್ಯವಂಶಿಯ ಅಬ್ಬರ ಈ ಬಾರಿಯ ಐಪಿಎಲ್ ನಲ್ಲೂ ಮುಂದುವರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅವರು ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತನ್ನ ಸೀಸನ್ ನ ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಮಾರ್ಚ್ 30ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಗದಿತ 20 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಪಿಚ್ ಬೌಲರ್ ಗಳಿಗೆ ಸಹಕಾರಿಯಂತೆ ಕಂಡುಬಂದಿತ್ತು. ಋತುರಾಜ್ ಗಾಯಕ್ವಾಡ್ ತಂಡ ಪ್ರತೀ ರನ್ ಗೂ ಪರದಾಡುತ್ತಿದ್ದಾಗ ರಾಜಸ್ಥಾನ ತಂಡ ಸಹ ಇದೇ ಪರಿಸ್ಥಿತಿ ಎದುರಿಸಬಹುದು […] - [ಕೊಕ್ಕಡ : ಕಾಡಾನೆಗಳ ದಾಳಿ - ವಾಹನಗಳು ಜಖಂ, ಕೃಷಿಗೆ ಅಪಾರ ಹಾನಿ !](https://dhwaninews.com/kaadane_daali/): ಕೊಕ್ಕಡ, ಮಾ. 31 : ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎರಡು ವಾಹನಗಳ ಮೇಲೆ ಆನೆ ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಕೃಷಿ ತೋಟಗಳು, ಮನೆಗಳ ಸುತ್ತಮುತ್ತ ಸಂಚರಿಸುತ್ತಾ ನಿರಂತರ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ವಾಹನಗಳ ಮೇಲೂ ದಾಳಿ ನಡೆಸುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾ.28ರಂದು ರಾತ್ರಿ ತೆಂಕುಬೈಲು ಪ್ರದೇಶದಲ್ಲಿ ಕಾಡಾನೆ ಸಂಚರಿಸುವ ವೇಳೆ ಯಶವಂತ ಅವರ ತೋಟದ ಕೆಲಸದ ಕಾರ್ಮಿಕನಿಗೆ ಸೇರಿದ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಅದೇ ರೀತಿ ಮಾ.29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲು ಪ್ರದೇಶದಲ್ಲಿ ಸೇಸಪ್ಪ ಗೌಡ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೂ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿದೆ. ಇದಲ್ಲದೆ, ಹಲವು ಕಡೆಗಳಲ್ಲಿ ಬಾಳೆ, ತೆಂಗು, ಅಡಿಕೆ ಹಾಗೂ ಭತ್ತದ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಪಾರ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ […] - [ಬೆಳ್ತಂಗಡಿ : ಅರಣ್ಯ ಇಲಾಖೆಯಿಂದ ಸಿಗದ ಅನುಮತಿ - ಕಾಮಗಾರಿ ಆರಂಭಕ್ಕೆ ತೊಡಕು](https://dhwaninews.com/charamdy_ghat/): ಚಾರ್ಮಾಡಿ, ಮಾ. 31 : ಈಗಾಗಲೇ ಆರಂಭವಾಗಬೇಕಾಗಿದ್ದ ಚಾರ್ಮಾಡಿ ಘಾಟಿಯ ಅಭಿವೃದ್ಧಿ ಕಾಮಗಾರಿ ಈ ಬಾರಿಯ ಮಳೆಗಾಲಕ್ಕೂ ಮುನ್ನ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿರುವುದು ಕಾಮಗಾರಿ ಆರಂಭಕ್ಕೆ ತೊಡಕಾಗಿದೆ. ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿ ವಿಭಾಗದ ದಕ ಜಿಲ್ಲೆಯ 11 ಕಿ.ಮೀ. ವ್ಯಾಪ್ತಿಯಲ್ಲಿ ಸರಾಸರಿ 10 ಮೀ. ವರೆಗೆ ರಸ್ತೆಯನ್ನು ಅಗಲಗೊಳಿಸುವ ಕೇಂದ್ರ ಸರಕಾರದ ಯೋಜನೆಗೆ 343 ಕೋಟಿ ರೂ. ಮೀಸಲಿರಿಸಿದ್ದು, ಶೇ.41 ರಷ್ಟು ಕಡಿಮೆ ಮೌಲ್ಯಕ್ಕೆ ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಕಾಮಗಾರಿ ದೊರಕಿದೆ. ಈ ಕುರಿತು ಕಾರ್ಯಾದೇಶ ನೀಡಲಾಗಿದ್ದು, ಇಷ್ಟರೊಳಗೆ ಕಾಮಗಾರಿ ಆರಂಭವಾಗಬೇಕಿತ್ತು. ಚಾರ್ಮಾಡಿ ಘಾಟಿ ವಿಭಾಗದ 25 ಕಿ.ಮೀ. ವ್ಯಾಪ್ತಿ ಇದ್ದು 11 ಕಿ.ಮೀ. ದಕ ಜಿಲ್ಲೆ ಹಾಗೂ ಉಳಿದ ಭಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿದೆ. 2019 ರ ಭಾರಿ ಮಳೆ, ಪ್ರವಾಹದ ವೇಳೆ ಚಾರ್ಮಾಡಿ ಘಾಟಿ ಸಂಪೂರ್ಣ ಹಾನಿಗೊಳಗಾಗಿತ್ತು. ಬಳಿಕ ಸುಮಾರು ಒಂದು ವರ್ಷ ಕಾಲ ವಾಹನ […] ## Pages - [Terms of Service](https://dhwaninews.com/terms-of-service/): Terms and Conditions Please read these terms and conditions carefully before using Our Service. Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear in singular or in plural. Definitions For the purposes of these Terms and Conditions: Affiliate means an entity that controls, is controlled by, or is under common control with a party, where “control” means ownership of 50% or more of the shares, equity interest or other securities entitled to vote for election of directors or […] - [Privacy Policy](https://dhwaninews.com/privacy-policy/): Privacy Policy This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You. We use Your Personal data to provide and improve the Service. By using the Service, You agree to the collection and use of information in accordance with this Privacy Policy. Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear in singular […] - [Home](https://dhwaninews.com/): Flash News ಹಿರಿಯ ನಟ ಸತೀಶ್ ಶಾ ನಿಧನ ದಕ್ಷಿಣಕನ್ನಡ ಕ್ರೀಡೆಯಲ್ಲಿ ಉತ್ತಮ ಸಾಧನೆಯ ಗುರಿ ಮುಖ್ಯ : ಶಾಸಕ ಉಮಾನಾಥ ಕೋಟ್ಯಾನ್ ದಕ್ಷಿಣಕನ್ನಡ ಮನೆಯಿಂದ ನಗ-ನಗದು ಕಳವು: ದೂರು ದಾಖಲು ಬೆಳ್ತಂಗಡಿ | ಅನುಮತಿಯಿಲ್ಲದೆ ಅಕ್ರಮ ಕೂಟ ಸೇರಿದ ಆರೋಪ: ಬೆಳ್ಳಾರೆ | ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ ಕೇರಳ | ಮಾವುತನನ್ನು ತುಳಿದಂದ ದೇವಸ್ಥಾನದ ಆನ ಟಾಪ್ ಸುದ್ದಿಗಳು ಟಾಪ್ ಸುದ್ದಿಗಳು ತಾಲೂಕು October 29, 2025 ದಕ್ಷಿಣಕನ್ನಡ ಕ್ರೀಡೆಯಲ್ಲಿ ಉತ್ತಮ ಸಾಧನೆಯ ಗುರಿ ಮುಖ್ಯ : ಶಾಸಕ ಉಮಾನಾಥ ಕೋಟ್ಯಾನ್ ಟಾಪ್ ಸುದ್ದಿಗಳು ತಾಲೂಕು October 29, 2025 ದಕ್ಷಿಣಕನ್ನಡ ಮನೆಯಿಂದ ನಗ-ನಗದು ಕಳವು: ದೂರು ದಾಖಲು ಟಾಪ್ ಸುದ್ದಿಗಳು ತಾಲೂಕು October 29, 2025 ಬೆಳ್ಳಾರೆ | ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ ಟಾಪ್ ಸುದ್ದಿಗಳು ಸಿನಿಮಾ October 28, 2025 ನೋಡಿ.. ಈ ‘ಸ್ವಾಮಿ’ ಇರೋದೇ ಹೀಗೇ..! Latest October 30, […] [comment]: # (Generated by Hostinger Tools Plugin)