ಬೆಂಗಳೂರು : ನಂದಿ ಬಳಿಯ ಹೋಂ ಸ್ಟೇನಲ್ಲಿ ಯುವತಿ ಸಾವು : ಪ್ರಿಯಕರ ಆತ್ಮಹತ್ಯೆಗೆ ಯತ್ನ – ಲವ್ ಜಿಹಾದ್ ಆರೋಪ

ಬೆಂಗಳೂರು, ಜೂ. 30 : ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇನಲ್ಲಿ ಬೆಂಗಳೂರು ಮೂಲದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತಳ ತಾಯಿ ಲವ್ ಜಿಹಾದ್ ಆರೋಪ ಮಾಡಿದ್ದಾರೆ.

Advertisement

ಮೃತ ಯುವತಿಯನ್ನು ಸಾಯಿ ಸುರಭಿ (30) ಎಂದು ಗುರುತಿಸಲಾಗಿದೆ. ಈಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೇಣು ಹಾಕಿದ್ದ ಹಗ್ಗ ಕತ್ತರಿಸಿದ ಸ್ಥಿತಿಯಲ್ಲಿತ್ತು. ಪಕ್ಕದಲ್ಲೇ ಸಂಜೀತ್ ಅಲಿ ಪ್ರಜ್ಞೆತಪ್ಪಿ ಬಿದ್ದಿದ್ದನು. ಆತ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞೆ ಬಂದ ಬಳಿಕವಷ್ಟೆ ವಿಚಾರಣೆ ನಡೆಯಲಿದೆ. ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ಇವೆ.

ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಆದರೆ ಬರುವಾಗ ಒಬ್ಬರೇ ಇದ್ದರು, ಯುವತಿ ಯಾವಾಗ ಬಂದಿದ್ದರೆಂದು ಗೊತ್ತಿಲ್ಲ ಎಂಬುದಾಗಿ ಹೋಂ ಸ್ಟೇ ಕೇರ್ ಟೇಕರ್ ಹೇಳಿಕೆ ನೀಡಿದ್ದಾರೆ. ಸೋಮವಾರ ಚೆಕ್ ಔಟ್ ಸಮಯ ಮುಗಿದರೂ ಕೊಠಡಿಯ ಬಾಗಿಲು ತೆರೆಯದಿದ್ದಾಗ ಹೋಂ ಸ್ಟೇ ಕೇರ್‌ಟೇಕರ್ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲವ್ ಜಿಹಾದ್ ಕೊಲೆ

ಈ ನಡುವೆ, ‘ಇದು ಲವ್‌ ಜಿಹಾದ್ ಕೊಲೆ’ ಎಂದು ಸಾಯಿ ಸುರಭಿ ತಾಯಿ ಗೀತಾ ಆರೋಪಿಸಿದ್ದಾರೆ. ಕ್ಯಾಬ್ ಡ್ರೈವರ್ ಆಗಿದ್ದ ಸಂಜೀತ್ ಬೆಂಗಳೂರಿನ ದಯಾನಂದ್ ಸಾಗ‌ರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಸುರಭಿಗೆ ಪರಿಚಯವಾಗಿ ಪ್ರೀತಿ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ. ಈತನ ಕಾಟ ತಪ್ಪಿಸಲು ಬೇರೆ ಕಡೆ ಕಾಲೇಜಿಗೆ ಸೇರಿಸಿದರೂ ಅಲ್ಲಿಗೆ ಹೋಗಿ ಕಾಟ ಕೊಡುತ್ತಿದ್ದ. ತನ್ನ ಮಗಳನ್ನು ಮರಳು ಮಾಡಿ ಡ್ರಗ್ ಅಡಿಕ್ಟ್ ಮಾಡಿದ್ದ. ಚಿಕಿತ್ಸೆ ಕೊಡಿಸಿ ಸರಿಯಾದ ನಂತರ ಮುದ್ದೇನಹಳ್ಳಿಯಲ್ಲಿಕೆಲಸಕ್ಕೆ ಸೇರಿದ್ದಳು. ಆದರೆ, ಇಲ್ಲಿಗೂ ಬಂದು ಅವಳನ್ನು ಮರಳು ಮಾಡಿ ಹೋಂ ಸ್ಟೇಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಸಂಜೀತ್ ಅಲಿಗೆ ಪ್ರಜ್ಞೆ ಬಂದು ವಿಚಾರಣೆ ನಡೆಸಿದ ನಂತರವಷ್ಟೇ ಕೊಲೆಗೆ ಕಾರಣ ಸ್ಪಷ್ಟವಾಗಿ ತಿಳಿದು ಬರಲಿದೆ ಎಂದು ಎಸ್‌ಪಿ ಕುಶಾಲ್‌ ಚೌಕ್ಷೆ ತಿಳಿಸಿದ್ದಾರೆ.

ಕೆಲಸಕ್ಕೆ ಸೇರಿ 10 ದಿನವಾಗಿತ್ತು!

ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಹತ್ತು ದಿನಗಳ ಹಿಂದಷ್ಟೆ ಸುರಭಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದಳು. ಸತ್ಸಂಗ ಕಾರ್ಯಕ್ರಮ ಇರುವುದರಿಂದ ಶನಿವಾರ ಅದಕ್ಕೆ ಹೋಗುವುದಾಗಿ ಹೇಳಿದ್ದಳು. ಆದ್ರೆ ಆಕೆ ಹೋಗಿ ಸಂಜೀತ್ ಅಲಿಯನ್ನು ಭೇಟಿಯಾಗಿದ್ದೆ ಗೊತ್ತಿಲ್ಲ ಎಂದು ತಾಯಿ ಗೀತಾ ಹೇಳಿದ್ದಾರೆ. ಅಲಿಯ ಪರಿಚಯವಾದ ಬಳಿಕ, ಸುರಭಿ ಸಾಕಷ್ಟು ಕಿರುಕುಳ ಅನುಭವಿಸಿದ್ದಳು. ಡ್ರಗ್ಸ್ ಹಾಗೂ ಆಲ್ಕೊಹಾಲ್ ಅಭ್ಯಾಸಕ್ಕೆ ಕೂಡಾ ಒಳಪಡಿಸಿದ್ದನು. ಇದರಿಂದ ಹೊರಬರಲು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಆದ್ರೆ ಅಲ್ಲಿಂದ ಹೊರಬಂದ ಬಳಿಕವೂ ಮತ್ತೆ ಅಲಿ ಆಕೆಯನ್ನು ಸಂಪರ್ಕಿಸಿದ್ದಾನೆ. ಆಕೆ ಸತ್ತು ಬಿದ್ದಿದ್ದ ಕೊಠಡಿಯಲ್ಲಿ ಡೈರಿಯೊಂದು ಸಿಕ್ಕಿದ್ದು ಪೊಲೀಸರು ಅದರ ತನಿಖೆಯನ್ನೂ ನಡೆಸುತ್ತಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.