‘ಲವ್ ಸೆಕ್ಸ್ ದೋಖಾ’ ಪ್ರಿಯಕರನ ಬ್ಲ್ಯಾಕ್ ಮೇಲ್ – “ಅಮ್ಮಾ ನನ್ನನ್ನು ಕ್ಷಮಿಸಿ ಬಿಡು” ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Advertisement

Advertisement

ರಾಮನಗರ, ಡಿ.08 : ಪ್ರೀತಿ ಕುರುಡು ಅಂತಾರೆ. ಆದರೆ, ಪ್ರೀತಿಸೋ ಮುನ್ನ ಎಂತಹವರನ್ನು ಪ್ರೀತಿಸಬೇಕೆಂಬ ತಿಳುವಳಿಕೆ ಇರಬೇಕಾಗಿರುವುದು ಸತ್ಯ. ಇಲ್ಲದೇ ಇದ್ದರೆ, ನಮ್ಮ ಬದುಕಿಗೆ ನಾವೇ ಕೊಳ್ಳಿ ಇಟ್ಟಂತಾಗುತ್ತದೆ. ಅದೇ ರೀತಿಯಲ್ಲಿ, ಪ್ರೀತಿ ಹೆಸರಲ್ಲಿ ವಂಚನೆಗೊಳಗಾದ ಯುವತಿಯೊಬ್ಬಳು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

22 ವರ್ಷದ ವರ್ಷಿಣಿ ವಿಭೂತಿಕೆರೆ ಗ್ರಾಮದ ನಿವಾಸಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂಎಸ್‌ಸಿ ಮಾಡುತ್ತಿದ್ದಳು. ಡೆತ್‌ನೋಟ್‌ ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಕೆಯ ಮೃತದೇದಹ ಬಳಿ ದೊರೆತ ಡೆತ್‌ನೋಟ್‌ನಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ಎಂಬ ಯುವಕನಿಂದ ಮೋಸವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಆಕೆಯ ಡೆತ್‌ನೋಟ್‌ನಲ್ಲಿ ಏನಿದೆ?

ಆಕೆಯ ಪ್ರೇಮಿ ವಿರುದ್ಧ ಮೊದಲಿಗೆ ಸಾಲು ಸಾಲು ಆರೋಪವನ್ನು ಮಾಡಿರುವ ವರ್ಷಿಣಿ, ಇಂತಹ ಯುವಕರನ್ನು ನಂಬಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಆಕೆಯ ತಾಯಿ ಮತ್ತು ಅಧ್ಯಾಪಕರ ಬಳಿ ಕ್ಷಮೆಯಾಚಿಸಿದ್ದಾರೆ. ನʻನ್ನ ಸಾವಿಗೆ ಅಭಿದೇವರದೊಡ್ಡಿಯೇ ಕಾರಣ ಅಮ್ಮ ಸಾಧ್ಯ ಆದ್ರೆ ನನ್ನನ್ನು ಕ್ಷಮಿಸು. ಅಭಿ ನನ್ನನ್ನು ನಂಬಿಸಿ ಬ್ಲ್ಯಾಕ್‌ಮೇಲ್‌ಮಾಡಿ ನನ್ನ ಉಂಗುರ, ಹಣ ಎಲ್ಲವನ್ನು ಪಡೆದಿದ್ದಾನೆ. ನನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದ. ಲೈಮಗಿಕವಾಗಿ ಸಹಕರಿಸಿದರೆ ಮಾತ್ರ ಫೋಟೋ ಡಿಲೀಟ್‌ಮಾಡುತ್ತೇನೆ ಎನ್ನುತ್ತಿದ್ದ. ಹಾಗಾಗಿ ಭಯವಾಗಿ ಅವನ ಜೊತೆ ಇದ್ದೆ. ಪ್ರೀತಿಹೆಸರಲ್ಲಿ ನನಗೆ ಮೋಸ ಮಾಡಿದ್ದಾನೆ. ನಾನು ಗರ್ಭಿಣಿಯಾದ ನಂತರ ಆ ವಿಚಾರ ತಿಳಿದು ಗರ್ಭಪಾತ ಮಾಡಿಸಿದ್ದಾನೆʼ ʻಅಮ್ಮ ಕ್ಷಮಿಸು ನನಗೆ ಗೊತ್ತು ನಿನ್ನ ನಂಬಿಕೆಗೆ ನಾನು ಮೋಸ ಮಾಡಿಬಿಟ್ಟಿದ್ದೇನೆ. ಸಾಯೋಕು ಭಯ ಆಗುತ್ತಿದೆ. ಆದರೆ ಏನು ಮಾಡಲಿ ನನಗೆ ಬೇರೆ ದಾರಿಯೇ ಇಲ್ಲ. ನಾನು ಅಭಿಯನ್ನು ನಂಬಬಾರದಿತ್ತು. ನಂಬಿ ಮೋಸ ಹೋದೆ. ಅದೊಂದು ತಪ್ಪು ಮಾಡಿ ನನ್ನ ಜೀವನ ಎಲ್ಲಿಗೆ ತಂದುಕೊಂಡಿದ್ದೇನೆ ನೋಡಿ. ನೀವು ಆತನನ್ನು ಸುಮ್ಮನೆ ಬಿಡಬೇಡಿ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿʼ ಎಂದು ವರ್ಷಿಣಿ ತನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ