ಲಕ್ನೋ : ರಿಝ್ವಿ ಬ್ಯಾಟಿಂಗ್ ಪ್ರಾಬಲ್ಯಕ್ಕೆ ಶರಣಾದ ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ : ಏಕನಾ ಕ್ರೀಡಾಂಗಣವೆಂದರೆ ಅದು ಬೌಲರ್ ಗಳು ಪಾರಮ್ಯ ಮೆರೆಯುತ್ತಾರೆಂಬುದೇ ಲೆಕ್ಕಚಾರವಾಗಿತ್ತು. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡುವ ತಂಡವೇ ಗೆಲುವು ಸಾಧಿಸಬಹುದು ಎಂಬ ವಿಶ್ಲೇಷಣೆಯೇ ಹೆಚ್ಚಿತ್ತು. ಆರಂಭದಲ್ಲಿ ಏಕನಾ ಕ್ರೀಡಾಂಗಣದ ಪಿಚ್ ಬ್ಯಾಟರ್ ಗಳಿಗೆ ನೆರವಾದರೆ, ಆ ಬಳಿಕ ನಿಧಾನವಾಗಿ ಬೌಲಿಂಗ್ ಪಿಚ್ ಆಗಿ ಬದಲಾಗುತ್ತದೆ ಎಂಬ ಲೆಕ್ಕಚಾರವಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಬ್ಯಾಟಿಂಗ್ ಪ್ರಾಬಲ್ಯ ಸಾಧಿಸಿದ ಸಮೀರ್ ರಿಝ್ವಿಯ ಸೊಗಸಾದ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.

Advertisement

ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18.4 ಓವರ್ ಗಳಲ್ಲಿ 145 ರನ್ ಗಳನ್ನು ಗಳಿಸಿತು. ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು.

ಸಾಧಾರಣ ಮೊತ್ತ ಬೆಂಬತ್ತಿ ಹೊರಟಿದ್ದ ಡೆಲ್ಲಿ ತಂಡ ಒಂದು ಹಂತದಲ್ಲಿ 26 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿತ್ತು. ಅನುಭವಿ ಕೆಎಲ್ ರಾಹುಲ್ ಅವರು ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಮರಳಿದರೆ, ಮತ್ತೊಬ್ಬ ಆರಂಭಿಕ ಪಥುಮ್ ನಿಸ್ಸಾಂಕಾ ಒಂದು ರನ್ ಗಳಿಸಿದ್ದೇ ಸಾಧನೆಯಾಯಿತು. ಕ್ರೀಸ್ ನಲ್ಲಿ ನಿತೇಶ್ ರಾಣಾ ಅವರು ಅವರು 15 ರನ್ ಔಟಾದರು. ನಾಯಕ ಅಕ್ಷರ್ ಪಟೇಲ್ ಅವರು ಸಹ ಗೋಲ್ಡನ್ ಡಕ್ ಆದಾಗ ಡೆಲ್ಲಿ ಕತೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ತ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ 5ನೇ ವಿಕೆಟ್ ಗೆ ಮುರಿಯದ 119 ರನ್ ಗಳ ಜೊತೆಯಾಟ ಆಡಿದ ರಿಝ್ವಿ ಅವರು ತಂಡವನ್ನು ಗೆಲುವಿನ ದಡ ತಲುಪಿಸಿದರು.

ರಿಝ್ವಿ-ಸ್ಟಬ್ಸ್ ಶತಕದ ಜೊತೆಯಾಟ

ಬಹಳ ಜಾಗರೂಕತೆಯಿಂದ ಆಡಿದ ಇವರಿಬ್ಬರು ಎದುರಾಳಿ ಬೌಲರ್ ಗಳಿಗೆ ವಿಕೆಟ್ ಕೀಳಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಲಖನೌ ಬೌಲರ್ ಗಳು ಸಾಂಘಿಕ ಪ್ರಯತ್ನ ನಡೆಸಿದರೂ ಡೆಲ್ಲಿ ಗೆಲುವನ್ನು ತಡೆಯಲು ಸಾಧ್ಯವಾಗಿಲಿಲ್ಲ. 47 ಎಸೆತಗಳನ್ನು ಎದುರಿಸಿದ ರಿಝ್ವಿ ಅವರು 5 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡಿದ್ದ ಅಜೇಯ 70 ರನ್ ಬಾರಿಸಿದರು. ಇನ್ನು ಸ್ಟಬ್ಸ್ ಅವರು 32 ಎಸೆತಗಳಿಂದ 3 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 39 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ವೇಗಿಗಳಾದ ಲುಂಗಿ ಎನ್ ಗಿಡಿ ಮತ್ತು ಟಿ ನಟರಾಜನ್ ಅವರ ಮಾರಕ ದಾಳಿಗೆ ಕುಸಿಯಿತು. ಆರಂಭಿಕ ಮಿಚೆಲ್ ಮಾರ್ಷ್(28 ಎಸೆತದಲ್ಲಿ 35) ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಸಮದ್ (25 ಎಸೆತದಲ್ಲಿ 36) ಅವರನ್ನು ಹೊರತುಪಡಸಿದರೆ ಯಾರೂ ಡೆಲ್ಲಿ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಲಿಲ್ಲ. ಹೀಗಾಗಿ ತಂಡ ನಿಗದಿತ ಓವರ್ ಗೆ ಮುಂಚಿತವಾಗಿಯೇ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್
ಲಖನೌ ಸೂಪರ್ ಜೈಂಟ್ಸ್ 18.1 ಓವರ್ ಗಳಲ್ಲಿ 141 ಕ್ಕೆ ಆಲೌಟ್, ಮಿಚೆಲ್ ಮಾರ್ಷ್ 35(28), ಅಬ್ದುಲ್ ಸಮದ್ 36(25), ಶಾಬಾಝ್ ಅಹ್ಮದ್ 15(16),


ಡೆಲ್ಲಿ ಕ್ಯಾಪಿಟಲ್ಸ್ 17.1 ಓವರ್ ಗಳಲ್ಲಿ 145/4, ಸಮೀರ್ ರಿಝ್ವಿ 70(47), ತ್ರಿಸ್ಟನ್ ಸ್ಟಬ್ಸ್ 39(32), ಇತರ 20 , ಪ್ರಿನ್ಸ್ ಯಾದವ್ 20ಕ್ಕೆ 2, ಮೊಹ್ಸಿನ್ ಖಾನ್ 19ಕ್ಕೆ 1.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.