ಗಂಡು ಮಗುವಿಗಾಗಿ ಹಂಬಲ : ಹೆಣ್ಣೆಂದು ಮೂರು ದಿನದ ಮಗುವನ್ನು ಉಸಿರುಗಟ್ಟಿಸಿ ಕೊಂದ ರಾಕ್ಷಸಿ ತಾಯಿ ! ಬೆಳಗಾವಿಯಲ್ಲಿ ಭೀಕರ ಘಟನೆ

ಬೆಳಗಾವಿ : ಮೂವರು ಹೆಣ್ಣು ಮಕ್ಕಳಾದ ಬಳಿಕ ಗಂಡು ಮಗುವಿಗಾಗಿ ಹಂಬಲಿಸಿದ್ದಳು ಆ ರಾಕ್ಷಸಿ ತಾಯಿ..! ಆದರೆ, ನಾಲ್ಕನೇ ಹೆರಿಗೆಯಲ್ಲೂ ಕೂಡಾ ಹೆಣ್ಣು ಮಗುವೇ ಜನನವಾಯಿತು..! ಖುಷಿ ಪಡಬೇಕಾಗಿದ್ದ ತಾಯಿ ಮಗು ಹೆಣ್ಣೆಂದು ತಿಳಿದ ತಕ್ಷಣವೇ ತನ್ನ ನಾಲ್ಕನೇ ನವಜಾತು ಶಿಶುವನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಭೀಕರ ಘಟನೆ ಜಿಲ್ಲೆಯ ರಾಮದುರ್ಗಾ ಎಂಬಲ್ಲಿ ನಡೆದಿದೆ. ಆ ರಾಕ್ಷಸೀ ತಾಯಿ ಆಶ್ವಿನಿ ಹಳಕಟ್ಟಿ ಎಂದು ಗುರುತಿಸಲಾಗಿದೆ. ಕೊಲೆ ಎಂಬುದು ದೃಢವಾದ ಬಳಿಕ, ಇದೀಗ ಆಕೆಯು ಜೈಲುಕಂಬಿ ಸೇರಿದ್ದಾಳೆ.

Advertisement

ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ತಾಯಿ ಈಗಾಗಲೇ ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದು, ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದಳು. ನವೆಂಬರ್ 23 ರಂದು, ಆಶೀನಿ ಹಳಕಟ್ಟಿ ಎಂಬ ಆರೋಪಿಯು ಮುಡಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮರುದಿನವೇ ಆಕೆ ಹಿರೇಮುಲಂಗಿಯಲ್ಲಿರುವ ತನ್ನ ತವರಿಗೆ ಮರಳಿದ್ದಳು. ಮಂಗಳವಾರ ಬೆಳಿಗ್ಗೆ, ಆಕೆಯ ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ, ಆಶ್ವಿನಿ ಕೇವಲ ಮೂರು ದಿನದ ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ನಂತರ ಆಕೆ ಮಗುವಿಗೆ ಉಸಿರಾಡುತ್ತಿಲ್ಲ ಎಂದು ನಾಟಕವಾಡಿ ರಾದ್ಧಾಂತ ಸೃಷ್ಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಶಿಶುವನ್ನು ತಕ್ಷಣವೇ ರಾಮದುರ್ಗ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ವೈದ್ಯರು ಮಗು ಉಸಿರುಗಟ್ಟುವಿಕೆ ಮತ್ತು ಕತ್ತು ಹಿಸುಕುವಿಕೆಯಿಂದ ಮೃತಪಟ್ಟಿದೆ ಎಂದು ದೃಢಪಡಿಸಿದರು. ಪ್ರಶ್ನಿಸಿದಾಗ, ಆರೋಪಿ ತಾಯಿ ತನ್ನ ಭೀಕರ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಶ್ವಿನಿ ಹಳಕಟ್ಟಿಯನ್ನು ಬಂಧಿಸಲಾಗಿದ್ದು, ಸುರೇಬಾನ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಹೆರಿಗೆಯಾದ ಕಾರಣ ಆಕೆಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ಉಪ ಪೊಲೀಸ್ ವರಿಷ್ಠಾಧಿಕಾರಿ ಚಿದಂಬರ ಮಡಿವಾಳರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನ – ಮೂವರ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮಾ. 4ರಿಂದ ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ – ಹರೀಶ್ ಪೂಂಜಾ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

⚠️ Contents are protected on this website.