ನಾಯಕತ್ವ ಬದಲಾವಣೆ ವಿಚಾರ ಎಚ್ ಸಿ ಮಹದೇವಪ್ಪ ಮಾರ್ಮಿಕ ಮಾತು : ನಾಯಿ ಯಾರು ಹಾಗೂ ನಾಯಿಯ ಬಾಲ ಯಾರು ಎಂದು ವಿಪಕ್ಷ !

ಬೆಂಗಳೂರು, ಫೆ. 17 : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಹಳಷ್ಟು ಸದ್ದು ಮಾಡುತ್ತಿರುವ ಸಮಯದಲ್ಲೇ ಇದೀಗ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಮಾರ್ಮಿಕ ಮಾತುಗಳು ರಾಜ್ಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ನಾಯಿ ಯಾರು ಹಾಗೂ ನಾಯಿಯ ಬಾಲ ಯಾರು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.

Advertisement

ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಎಚ್‌ಸಿ ಮಹದೇವಪ್ಪ ಅವರು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಕುತೂಹಲಕಾರಿ ಹೇಳಿಕೆ ನೀಡಿದ್ದರು. “ಇಲ್ಲಿ ನಾಯಕತ್ವದ ಚರ್ಚೆ ಎಲ್ರಿ ಇದೆ? ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲಾ ಪದೇ ಪದೇ ಹಿಡಿದು ಒಳಗೆ ಹಾಕಿ ಅಂತ ಹೇಳ್ತಾ ಇದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ” ಎಂದು ಹೇಳಿದ್ದರು. ಹೀಗ್ಯಾಕೆ ಹೇಳುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ಹೈಕೋರ್ಟ್ ಹೇಳಿದ್ದನ್ನು ಹೇಳಿದೆ ನಾನು. ನಾನು ನಾಯಕರು ನಾಯಿಗಳು ಅಂತ ಹೇಳಿದ್ನಾ? ಹೈಕಮಾಂಡ್ ಗೆ ಡೈರೆಕ್ಷನ್ ಕೊಡೋರು ಯಾರು? ನಾನಾ ನೀವಾ ? ಬಾಲವೇ ನಾಯಿಯನ್ನು ಅಲ್ಲಾಡಿಸದರೆ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು.

ಮಹದೇವಪ್ಪ ಹೇಳಿಕೆ ನಾನಾ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಯಾರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಅರ್ಥದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆರ್ ಅಶೋಕ್ ಕೂಡಾ ಟ್ವೀಟ್ ಮಾಡಿ ಮಹದೇವಪ್ಪ ಅವರ ಹೇಳಿಕೆಯ ಹಿಂದಿನ ಮರ್ಮವನ್ನು ಪ್ರಶ್ನಿಸಿದ್ದಾರೆ. ನಾಯಕತ್ವ ಬದಲಾವಣೆ ವಿಷಯವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, “ಹೈಕೋರ್ಟ್ ಪದೇ ಪದೇ ಬೀದಿ ನಾಯಿಗಳಲ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಹೇಳುತ್ತಲೇ ಇದೆ. ಇಲ್ಲಿ ನಾಯಕತ್ವ ಗಟ್ಟಿಯಾಗಿದೆ. ನಾಯಿಯನ್ನು ಬಾಲ ಅಲ್ಲಾಡಿಸಲು ಸಾಧ್ಯವೇ? ವರಿಷ್ಠರಿಗೆ ನಾವು ನೀವೆಲ್ಲಾ ಸೂಚನೆ ಕೊಡಲು ಸಾಧ್ಯವೇ?” ಎಂದು ಬಹಳ ಮಾರ್ಮಿಕವಾಗಿ ಉತ್ತರ ನೀಡಿದ್ದೀರಿ. ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ, ನಿಮ್ಮ ಮಾತಿನ ಪ್ರಕಾರ ನಾಯಿ ಯಾರು?ಬಾಲ ಯಾರು? ನಾವು ನೀವೆಲ್ಲಾ ಅಂದರೆ ಯಾರ್ಯಾರು? ಸ್ವಲ್ಪ ಸ್ಪಷ್ಟನೆ ನೀಡಿ ಡಾ.ಮಹಾದೇವಪ್ಪನವರೇ ಎಂದು ಪ್ರಶ್ನಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.