ಕುಂದಾಪುರ: ಕೋಡಿ ಸೀವಾಕ್ ಬಳಿ ಅಸಹಾಯಕ ಮಹಿಳೆ, ಮೂವರು ಮಕ್ಕಳ ರಕ್ಷಣೆ

Advertisement

ಕುಂದಾಪುರ, ಫೆ. 13 : ಅಸಹಾಯಕರಾಗಿ ನಿಂತಿದ್ದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು ಪೊಲೀಸರು ರಕ್ಷಿಸಿದ ಘಟನೆ ಕೋಡಿ ಸೀವಾಕ್ ಸಮೀಪದ ‘ಸೀವಾಕ್ ರೆಸ್ಟೋ ಕೆಫೆ’ ಬಳಿ ನಡೆದಿದೆ.

Advertisement

ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುಕ್ತಾ ಬಾಯಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕೋಡಿ ಬೀಟ್ ಸಿಬ್ಬಂದಿ ಗೋಪಾಲ ಖಾರ್ವಿ ಅವರೊಂದಿಗೆ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಮಹಿಳೆಯನ್ನು ಗಮನಿಸಿ ವಿಚಾರಣೆ ನಡೆಸಿದರು. ಈಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿಯ ಸ್ಲಂ ನಿವಾಸಿ ಬದ್ರೇಶ್ ಎಂಬವರ ಪತ್ನಿ ಸಂಗೀತಾ (27) ಎಂದು ತಿಳಿದುಬಂದಿದೆ. ಈಕೆ ತನ್ನ ಮಕ್ಕಳಾದ ಅಜಯ್ (9), ಖುಷಿ (8) ಮತ್ತು ರೋಜಾ (5) ಅವರೊಂದಿಗೆ ಯಾವುದೇ ಆಧಾರವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದರು.

Advertisement

ತನ್ನ ಮತ್ತು ಮಕ್ಕಳ ಭವಿಷ್ಯ ಹಾಗೂ ಶಿಕ್ಷಣಕ್ಕಾಗಿ ಮಹಿಳೆ ಸಹಾಯ ಕೋರಿದಾಗ, ಎಸ್‌ಐ ಮುಕ್ತಾ ಬಾಯಿ ಮತ್ತು ಗೋಪಾಲ ಖಾರ್ವಿ ಅವರು ಸಮಾಲೋಚನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಅವರ ಸಹಕಾರದೊಂದಿಗೆ ಮಕ್ಕಳನ್ನು ಉಡುಪಿಯ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನಕ್ಕೆ ದಾಖಲಿಸಲಾಯಿತು. ಕೋಡಿ ಸೀವಾಕ್ ರೆಸ್ಟೋ ಕೆಫೆ ನಡೆಸುತ್ತಿರುವ ಜ್ಯೋತಿ ಮತ್ತು ವಿಕಾಸ್ ದಂಪತಿಗಳು ಸ್ವಯಂಪ್ರೇರಿತರಾಗಿ ಸಂಗೀತಾಗೆ ಆಶ್ರಯ ಮತ್ತು ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಸದ್ಯ ಆಕೆಯನ್ನು ಅವರ ಆರೈಕೆಯಲ್ಲಿ ಇರಿಸಲಾಗಿದೆ. ಪೊಲೀಸರ ಈ ಸಮಯೋಚಿತ ನಿರ್ಧಾರ ಮತ್ತು ಸಾರ್ವಜನಿಕರ ಸಹಕಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ