ಸಜಿಪ, ಡಿ. 29 : ಕಡು ಬಡವರಿಗೆ ಆಶಾದೀಪವಾಗಿರುವ ಯುವ ಉದ್ಯಮಿ ರೊನಾಲ್ಡ್ ಮಾರ್ಟೀಸ್ ನೇತೃತ್ವದಲ್ಲಿ ಸಜೀಪ ದಸರಾ ಶತಮಾನೋತ್ಸವ ಸಮಿತಿಯ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.

ಶ್ರೀ ಶಾರದಾ ಪೂಜಾ ಮಹೋತ್ಸವ ಸುಭಾಷ್ ಯುವಕ ಮಂಡಲ (ರಿ.) ಸುಭಾಷ್ ನಗರ ಹಾಗೂ ಶಾರದಾ ಪೂಜಾ ಮಹೋತ್ಸವದ 100ನೇ ವರ್ಷದ ಸಜೀಪ ದಸರಾ ಮಹೋತ್ಸವದ ಅಂಗವಾಗಿ ಅಸಹಾಯಕರಿಗೆ “ಆಸರೆ ಯೋಜನೆ” ಅಡಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ದಿ| ನೀಲಪ್ಪ ಮೂಲ್ಯರ ಪತ್ನಿ ಸುಮನ ಇವರ ಕುಟುಂಬಕ್ಕೆ ಸುಮಾರು 3 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದು ಇಂದು ಅದರ ಗೃಹಪ್ರವೇಶ ನಡೆಯಿತು.
ಬಹಳಷ್ಟು ಮಂದಿಗೆ ಸರಿಯಾದ ಮನೆಗಳಿಲ್ಲದೇ ಕುಸಿದು ಬಿದ್ದಿರುವ ಗುಡಿಸಲಿನಲ್ಲಿ ಭಯದಿಂದ ಬದುಕುವುದನ್ನು ಮನಗಂಡ ದುಬೈ ಉದ್ಯಮಿ ರೊನಾಡ್ ಮಾರ್ಟೀಸ್ ಅವರು ಮನೆ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ 2 ಲಕ್ಷ ರೂಪಾಯಿಯನ್ನು ನೀಡಿದ್ದು ಇವರ ಜೊತೆಗೆ ಸ್ಥಳೀಯ ದಾನಿಗಳು ಹಾಗೂ ಊರಿನ ಸಂಘ ಸಂಸ್ಥೆಯವರು ಕೈಜೋಡಿಸಿದ್ದು ಇಂದು ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದ ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ರೊನಾಲ್ಡ್ ಮಾರ್ಟೀಸ್ ಮನೆಯನ್ನ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಸುಭಾಷ್ ಯುವಕ ಮಂಡಲ ಶತಮಾನೋತ್ಸವದ ಪ್ರಯುಕ್ತ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ.ಇಂದು ನಾವು ಹಲವಾರು ಬಡ ಕುಟುಂಬಕ್ಕೆ ಆಸರೆಯಾಗುತ್ತಿದ್ದೇವೆ ಇದು ಪುಣ್ಯದ ಕೆಲಸ ,ದೇವರು ನನಗೆ ಕೊಡುತ್ತಿದ್ದಾನೆ ಅದನ್ನು ನಾನು ನಿಮಗೆ ಕೊಡುತ್ತಿದ್ದೇನೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಶತಮಾನೋತ್ಸವ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಪೂಂಜ, ಸುಭಾಷ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ,ಸಿದ್ಧಿಕ್ ಕೊಲಕೆ,ಹಮೀದ್,ಗಿರೀಶ್ ಕುಮಾರ್ ಪೆರ್ವ ಕಿಶೋರ್ ಅಗರಿ,ಯೋಗಿಶ್ ಬೆಳ್ವಾಡ ಕೂಡೂರು ವಿಶ್ವನಾಥ್ ಬೆಳ್ವಾಡ, ಶ್ರೀ ವಿಷ್ಣು ಮಯ್ಯರು,ಮಾಗಣೆ ತಂತ್ರಿ ಎಮ್ ಸುಭ್ರಹ್ಮಣ್ಯ ಭಟ್,ಕಿಶೋರ್ ಅಗರಿ ,ಗಂಗಾಧರ ಕೊಲ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

