ಉಳ್ಳಾಲ : ವೃದ್ಧೆಯ ಗುಡಿಸಲು ವರುಣಾರ್ಭಟಕ್ಕೆ ಆಹುತಿ – ಕುಟುಂಬಕ್ಕೆ ಅರುಣ್ ಕುಮಾರ್ ಗಟ್ಟಿ, ‘ಧನಲಕ್ಷ್ಮೀ’ ಗಟ್ಟಿ, ದಾನಿಗಳ ನೆರವಿನಿಂದ ಹೊಸ ಮನೆ ನಿರ್ಮಾಣ

ಉಳ್ಳಾಲ, ಜ. 10 : ಮೇ ತಿಂಗಳ ಕೊನೆಯಲ್ಲಿ ಸುರಿದಿದ್ದ ರಣಮಳೆಗೆ ಕೊಲ್ಯದ ಸಾರಸ್ವತ ಕಾಲನಿಯ ನಿವಾಸಿ ತೊಂಬತ್ತು ವರ್ಷದ ವೃದ್ಧೆ ಗಿರಿಜಾ ಗಟ್ಟಿ ಅವರ ಗುಡಿಸಲಿನ ಮೇಲೆ ಪಕ್ಕದ ಖಾಸಗಿ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ಮನೆ ಸಂಪೂರ್ಣ ನೆಲಸಮಗೊಂಡಿತ್ತು. ನಾಲ್ಕು ದಿವಸಗಳ ಹಿಂದಷ್ಟೆ ಮನೆ ಮಂದಿಯನ್ನ ಬೇರೆಡೆಗೆ ಸ್ಥಳಾಂತರಿಸಿದ್ದರಿಂದ ಅದೃಷ್ಟವಶಾತ್‌ ಕುಟುಂಬವು ಬದುಕುಳಿದಿತ್ತು. ಆದರೆ ಮನೆ ಕಳಕೊಂಡು ಕಂಗಾಲಾಗಿದ್ದ ವೃದ್ಧೆಗೆ ಉಳ್ಳಾಲ‌ದ ಯುವ ನಾಯಕ,ಗಟ್ಟೀಸ್ ಫಿಟ್ ಲೈನ್ ಜಿಮ್ ನ ಮಾಲಕ ಅರುಣ್ ಕುಮಾರ್ ಗಟ್ಟಿ ಮತ್ತು ಮಾಜಿ ಜಿಪಂ ಸದಸ್ಯೆ ಸಮಾಜ ಸೇವಕಿ ಧನಲಕ್ಷ್ಮಿ ಗಟ್ಟಿ ಹಾಗೂ  ಆಸರೆಯಾಗಿ ನಿಂತಿದ್ದು ದಾನಿಗಳ ನೆರವಿನಿಂದ ಸುಂದರ ಮನೆ ನಿರ್ಮಿಸುತ್ತಿದ್ದಾರೆ.

Advertisement


ಗಿರಿಜಾ ಅವರು ಸಾರಸ್ವತ ಕಾಲನಿಯ ಐದು ಸೆಂಟ್ ಸಣ್ಣ ಜಾಗದಲ್ಲಿ ಮಣ್ಣಿನ ಇಟ್ಟಿಗೆಯ ಮನೆಯನ್ನ ಕಟ್ಟಿಕೊಂಡು ಕಳೆದ ಐವತ್ತು ವರುಷಗಳಿಂದಲೂ ಅಲ್ಲಿಯೇ ನೆಲೆಸಿದ್ದರು. ಅವರ ಕಿರಿಯ ಮೊಮ್ಮಗಳ ಪತಿ ಕೊರೊನಾ ಸಂದರ್ಭದಲ್ಲಿ ಕಾಯಿಲೆಗೆ ತುತ್ತಾಗಿ ತೀರಿ ಹೋಗಿದ್ದರಿಂದ ಮೊಮ್ಮಗಳು ಸಣ್ಣ ಪ್ರಾಯದಲ್ಲೇ ವಿಧವೆಯಾಗಿದ್ದಳು. ಮೊಮ್ಮಗಳು ಮತ್ತು ಆಕೆಯ ಇಬ್ಬರು ಪುಟ್ಟ ಮಕ್ಕಳನ್ನ ಸಾಕುವ ಜವಾಬ್ದಾರಿಯೂ ಗಿರಿಜಾ ಹೆಗಲ ಮೇಲೇರಿತ್ತು. ಇಂತಹ ದಯನೀಯ ಸ್ಥಿತಿಯಲ್ಲಿಯೇ ರಣಮಳೆಗೆ ಗಿರಿಜಾ ಅವರ ಮನೆಯೂ ಕುಸಿದು ಬಿದ್ದಿತ್ತು.



ಈ ಕುಟುಂಬದ ಕಷ್ಟವನ್ನು ಕಂಡು ಧನಲಕ್ಷ್ಮಿ ಅವರು ಮೊದಲಿಗೆ ಗಿರಿಜಾ ಅವರ ವಿಧವೆ ಮೊಮ್ಮಗಳಿಗೆ ಜೀವನೋಪಾಯಕ್ಕಾಗಿ ಕುತ್ತಾರಿನ ಶಿಶುಪಾಲನಾ ಕೇಂದ್ರದಲ್ಲಿ ಶಿಶುಪಾಲಕಿ ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದಾರೆ.ಅರುಣ್‌ಕುಮಾರ್ ಗಟ್ಟಿ ಅಗರಿಮಾರ್ ಮತ್ತು ದಾನಿಗಳ ನೆರವಿಂದ ವೃದ್ಧೆಗೆ ಮನೆ ಕಟ್ಟಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಕುಟುಂಬವನ್ನ ಬೇರೆಡೆ ಸ್ಥಳಾಂತರಿಸಿದ್ದರು. ಗೋರಿಗುಡ್ಡೆ ಕಿಟ್ಟೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಠಲ್‌ ಮಾಸ್ಟರ್ ಅವರು ತನಗೆ ಸೇರಿದ ಕೊಲ್ಯದ ಖಾಲಿ ಮನೆಯಲ್ಲಿ ಗಿರಿಜಾ ಕುಟುಂಬಕ್ಕೆ ಮೂರು ತಿಂಗಳ ಕಾಲ ಉಚಿತವಾಗಿ ಆಶ್ರಯ ನೀಡಿದ್ದರು. ಬಳಿಕ ಕುಟುಂಬವನ್ನ ಸೋಮೇಶ್ವರ ಉಚ್ಚಿಲದ ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿತ್ತು. ಕುಟುಂಬ ಸ್ಥಳಾಂತರಗೊಂಡ ನಾಲ್ವೇ ದಿನದಲ್ಲಿ ಸುರಿದ ಜಡಿಮಳೆಗೆ ಹಳೆ ಮನೆಯ ಮೇಲೆ ಶಾಲೆಯ ಆವರಣ ಗೋಡೆ ಕುಸಿದಿದ್ದು, ಭಾರೀ ಅನಾಹುತ ತಪ್ಪಿತ್ತು.

ಗಿರಿಜಾ ಕುಟುಂಬಕ್ಕೆ ಮನೆ ಕಟ್ಟಿಕೊಡಲು ಮುಂದಾದ ಅರುಣ್ ಕುಮಾರ್ ಗಟ್ಟಿ ಮತ್ತು ಧನಲಕ್ಷ್ಮಿಯವರ ಸಾಮಾಜಿಕ ಕಳಕಳಿಗೆ ಸ್ವಜಾತಿ ಭಾಂದವರು ಆರಂಭದಲ್ಲಿ 52,000 ರೂ.ಗಳಷ್ಟು ದೇಣಿಗೆ ನೀಡಿದ್ದರು. ಕಳೆದ ಡಿಸೆಂಬರ್ ತಿಂಗಳ ಸಂಕಷ್ಟ ಚತುರ್ಥಿಯಂದು ನೂತನ ಮನೆ ನಿರ್ಮಾಣ ಕಾಮಗಾರಿಗೆ ಮುಹೂರ್ತ ನೆರವೇರಿಸಲಾಗಿತ್ತು. ಸೋಮೇಶ್ವರ ಪುರಸಭೆ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಮತ್ತು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿಯವರ ಪ್ರಯತ್ನದಿಂದ ಗಿರಿಜಾ ಅವರಿಗೆ ಸರಕಾರದ ಪೃಕೃತಿ ವಿಕೋಪ ಯೋಜನೆಯಡಿ 1.20 ಲಕ್ಷ ರೂಪಾಯಿ ಪರಿಹಾರ ಧನ ಕಳೆದ ವಾರ ಬಿಡುಗಡೆಯಾಗಿದೆ.

ಗಿರಿಜಾ ಅವರ ಮನೆ ನಿರ್ಮಾಣ ಕಾಮಗಾರಿಯನ್ನು ಫೆಬ್ರವರಿ ತಿಂಗಳ ಮೊದಲ ವಾರದೊಳಗೆ ಸಂಪೂರ್ಣಗೊಳಿಸುವ ಉದ್ದೇಶವಿದೆ. ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನ ನಿರ್ಮಿಸಲಾಗುತ್ತಿದೆ. ಸ್ವಜಾತಿ ಸಮಾಜ ಭಾಂದವರಲ್ಲದೆ, ಎಲ್ಲಾ ಸಮಾಜ ಭಾಂದವರು, ಸಂಘ ಸಂಸ್ಥೆಗಳು ಉದಾರ ಮನಸ್ಸಿನಿಂದ ವಸ್ತು ರೂಪ ಮತ್ತು ಧನ ಸಹಾಯ ನೀಡಿ ಸಹಕರಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಮನೆ ನಿರ್ಮಾಣ ಕಾರ್ಯದಲ್ಲಿ ಯುವ ನಾಯಕ ಅರುಣ್ ಗಟ್ಟಿ ನನ್ನೊಂದಿಗೆ ನಿರಂತರ ಸಹಕರಿಸುತ್ತಿದ್ದು, ಗುತ್ತಿಗೆದಾರ ಸುಂದರ ಗಟ್ಟಿ ಅವರು ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸುತ್ತಿದ್ದಾರೆಂದು ಧನಲಕ್ಷ್ಮಿಗಟ್ಟಿ ತಿಳಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.