ಕಾಸರಗೋಡು : ಮಂಜೇಶ್ವರ ವಿಧಾನಸಭೆ ಚುನಾವಣೆ – ಈ ಬಾರಿಯೂ ಜಿದ್ದಾ ಜಿದ್ದಿನ ಹೋರಾಟ !

ಕಾಸರಗೋಡು, ಏ. 04 : ಈ ಹಿಂದಿನ ಎರಡು ವಿಧಾನಸಭೆ ಚುನಾವಣೆಯಲ್ಲಿ ನೆಕ್‌ ಟು ನೆಕ್‌ ಫೈಟ್‌ ಕೊಟ್ಟ ಮಂಜೇಶ್ವರದಲ್ಲಿ ಈ ಬಾರಿಯೂ ಜಿದ್ದಾ ಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಈ ಚುನಾವಣೆಯು ಕೇರಳದ ಮೊದಲ ವಿಧಾನಸಭಾ ಕ್ಷೇತ್ರ ಹಾಗೂ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರವೂ ಈ ಬಾರಿ ತೀವ್ರ ಸ್ಪರ್ಧೆ ನಡೆಯಲಿದೆ. ಪ್ರಧಾನವಾಗಿ ಹಾಲಿ ಶಾಸಕ ಎ.ಕೆ.ಎಂ.ಆಶ್ರಫ್‌, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಮತ್ತೊಮ್ಮೆ ನೇರ ಸ್ಪರ್ಧೆ ನಡೆಯಲಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಮತ್ತು ಅತೀ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ವಿಧಾನಸಭೆ ಕ್ಷೇತ್ರವಾಗಿದೆ ಮಂಜೇಶ್ವರ ವಿಧಾನಸಧಿಭೆ ಕ್ಷೇತ್ರ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 11 ಮಂದಿ ಇದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ವಿಧಾನಸಭೆಗಳ ಪೈಕಿ ಅತೀ ಹೆಚ್ಚು ಮತದಾರರು ಇಧಿದ್ದು, ಈ ಬಾರಿ 2,30,113 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ 1,15,801 ಪುರುಷ ಮತದಾರರು ಮತ್ತು 1,14,312 ಮಹಿಳಾ ಮತದಾರರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿಎ.ಕೆ.ಎಂ.ಅಶ್ರಫ್‌ ಕೇವಲ 745 ಮತಗಳ ಬಹುಮತದಿಂದ ಗೆದ್ದಿದ್ದರು. ಮಂಜೇಶ್ವರ 1987ರಿಂದ ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿಎಲ್‌ಡಿಎಫ್‌ ಸುಮಾರು ಶೇ.20-25 ಮತಗಳನ್ನು ಹೊಂದಿದೆ. ಆದರೂ ಪ್ರಮುಖ ಸ್ಪರ್ಧೆ ಯುಡಿಎಫ್‌ ಮತ್ತು ಎನ್‌ಡಿಎ ನಡುವೆ ಇದೆ. ಈ ಕ್ಷೇತ್ರವು ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದು, ಇದು ಹೆಚ್ಚಿನ ಸಂಖ್ಯೆಯ ಕನ್ನಡ ಮತ್ತು ತುಳು ಮಾತನಾಡುವ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಎರಡು ಬಾರಿ ಈ ಕ್ಷೇತ್ರದಲ್ಲಿಸಾವಿರಕ್ಕಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಸ್ಥಾನವನ್ನು ಕಳೆದುಕೊಂಡಿರುವುದನ್ನು ಗಮನಿಸಿದರೆ ಈ ಬಾರಿ ತೀವ್ರ ಪ್ರಚಾರದೊಂದಿಗೆ ಸನಿಹದಲ್ಲಿದ್ದಾರೆ.

ಕೊಂಕಣಿ ಸಮುದಾಯ ಮತಗಳು:

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೊಂಕಣಿ ಲ್ಯಾಟಿನ್‌ ಕ್ರಿಶ್ಚಿಯನ್‌ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಈ ಮೂಲಕ ಯುಡಿಎಫ್‌ಗೆ ಪರಂಪರಾಗತವಾಗಿ ಲಭಿಸುವ ಮತಗಳು ಪಕ್ಷೇತರ ಅಭ್ಯರ್ಥಿ ಜೀನ್‌ ಲವಿನಾ ಮೊಂತೇರೋ ಪಡೆಯುವ ಮತಗಳ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಕೇರಳದಲ್ಲಿಎಲ್‌ಡಿಎಫ್‌ ಮತ್ತು ಯುಡಿಎಫ್‌ ಸರಕಾರಗಳು ಕೊಂಕಣಿ ಲ್ಯಾಟಿನ್‌ ಕ್ರಿಶ್ಚಿಯನ್‌ ಸಮುದಾಯ ಮತ್ತು ಮಂಜೇಶ್ವರ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿವೆ ಎಂಬ ಹಿನ್ನೆಲೆಯಲ್ಲಿಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು. ಮಂಜೇಶ್ವರ ಕ್ಷೇತ್ರದಲ್ಲಿ ಕೊಂಕಣಿ ಕ್ರಿಶ್ಚಿಯನ್‌ ಸಮುದಾಯವು 6000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದರೂ, ಜೀನ್‌ ಲವಿನಾ ಮೊಂತೇರೋ ಎಷ್ಟು ಮತಗಳನ್ನು ಪಡೆಯುತ್ತೇವೆಯೋ ಎಂಬುದರ ಬಗ್ಗೆ ಕುತೂಹಲ ಹೊಂದಿದೆ.

ಎಂಟು ಗ್ರಾಪಂಗಳು:


ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಪೈವಳಿಕೆ, ಪುತ್ತಿಗೆ ಹಾಗೂ ವರ್ಕಾಡಿ ಗ್ರಾಪಂಗಳನ್ನು ಒಳಗೊಂಡಿದೆ. ಈ ಎಲ್ಲಗ್ರಾಪಂಗಳಲ್ಲಿಯುಡಿಎಫ್‌ ಆಡಳಿತ ನಡೆಸುತ್ತಿದೆ.

2026 ರ ಅಭ್ಯರ್ಥಿಗಳು

ಎ.ಕೆ.ಎಂ.ಆಶ್ರಫ್‌- ಮುಸ್ಲೀಂಲೀಗ್‌ (ಯುಡಿಎಫ್‌)
ಕೆ.ಸುರೇಂದ್ರನ್‌- ಬಿಜೆಪಿ (ಎನ್ ಡಿಎ)
ಕೆ.ಆರ್‌.ಜಯಾನಂದ- ಸಿಪಿಐಎಂ
ಸಂಜೀವ- ಬಿಎಸ್‌ಪಿ
ಕಣ್ಣೂರು ಅಬ್ದುಲ್ಲಮಾಸ್ಟರ್‌- ಪಕ್ಷೇತರ
ಅಬ್ದುಲ್‌ ಲತೀಫ್‌ ಐ.- ಪಕ್ಷೇತರ
ಜೀನ್‌ ಲವಿನಾ ಮೊಂತೇರೊ- ಪಕ್ಷೇತರ
ಜಾನ್‌ ಡಿಸೋಜ ಐ.- ಪಕ್ಷೇತರ
ಮೊಹಮ್ಮದ್‌ ಆಶ್ರಫ್‌- ಪಕ್ಷೇತರ
ಮೊಹಮ್ಮದ್‌ ಆಶ್ರಫ್‌ ಕೆ.ಎಂ.- ಪಕ್ಷೇತರ
ಡಿ.ಸುರೇಂದ್ರನ್‌ ನಾಯರ್‌- ಪಕ್ಷೇತರ

2021 ರ ಫಲಿತಾಂಶ

2021 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಮುಸ್ಲೀಂ ಲೀಗ್‌ ಅಭ್ಯರ್ಥಿ ಎ.ಕೆ.ಎಂ.ಆಶ್ರಫ್‌ಗೆ ಶೇ.2.05 ಮತಗಳ ಇಳಿಕೆಯೂ, ಬಿಜೆಪಿಗೆ ಶೇ.2.38 ಮತ್ತು ಸಿಪಿಐಎಂಗೆ ಶೇ.0.38 ಮತಗಳ ಹೆಚ್ಚಳವಾಗಿತ್ತು.

ಎ.ಕೆ.ಎಂ.ಆಶ್ರಫ್‌(ಮುಸ್ಲೀಂಲೀಗ್‌) 65858 ಮತಗಳು
ಕೆ.ಸುರೇಂದ್ರನ್‌ (ಬಿಜೆಪಿ) 65013 ಮತಗಳು
ವಿವಿ ರಮೇಶನ್‌(ಸಿಪಿಐಎಂ) 40,639 ಮತಗಳು
ಪ್ರವೀಣ್‌ ಕುಮಾರ್‌ ಎಸ್‌.(ಅಣ್ಣಾ ಡಿಎಚ್‌ಆರ್‌ಎಂ) 251 ಮತಗಳು
ಜಾನ್‌ ಡಿಸೋಜ (ಪಕ್ಷೇತರ) 181 ಮತಗಳು
ಸುರೇಂದ್ರನ್‌ ಎಂ.(ಪಕ್ಷೇತರ) 387 ಮತಗಳು

ಫಲಿತಾಂಶ: ಎಕೆಎಂ ಆಶ್ರಫ್‌ 745 ಮತಗಳ ಅಂತರದಿಂದ ಗೆಲುವು

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.