ಮೆಕ್ಸಿಕೋ : ತುರ್ತು ಲ್ಯಾಂಡಿಂಗ್ ವೇಳೆ ವ್ಯವಹಾರ ಕೇಂದ್ರಕ್ಕೆ ಅಪ್ಪಳಿಸಿದ ವಿಮಾನ – 7 ಮಂದಿ ಮೃತ್ಯು

ಮೆಕ್ಸಿಕೋ : ಪುಟ್ಟ ಖಾಸಗಿ ವಿಮಾನವೊಂದು ತುರ್ತು ಲ್ಯಾಂಡಿಂಗ್ ವೇಳೆ ವ್ಯವಹಾರ ಕೇಂದ್ರವೊಂದರ ಚಾವಣಿಗೆ ಬಡಿದ ಘಟನೆ ಸ್ಕ್ಯಾನ್ ಮಾಂಟಿಯೊ ಅಟೆಸ್ಕೊದಲ್ಲಿ ನಡೆದಿದೆ. ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.

Advertisement

ಅಕಪುಲ್ಲೊದಿಂದ ಹೊರಟಿದ್ದ ವಿಮಾನ ಮೆಕ್ಸಿಕೋ ಸಿಟಿಯಿಂದ 31 ಮೈಲು ಪಶ್ಚಿಮಕ್ಕೆ ಇರುವ ಟ್ಯುಲುಕಾ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ಅಪಘಾತ ಸಂಭವಿಸಿದ ಸ್ಥಳ ವಿಮಾನ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಕೈಗಾರಿಕಾ ಪ್ರದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಎಂಟು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗಳಿದ್ದರು. ಆದರೆ ದುರಂತ ಸಂಭವಿಸಿದ ಹಲವು ಗಂಟೆಗಳ ಬಳಿಕವೂ ಏಳು ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಮೆಕ್ಸಿಕೊದ ಸರ್ಕಾರಿ ನಾಗರಿಕ ರಕ್ಷಣಾ ಸಂಯೋಜಕ ಆ್ಯಡ್ರಿನ್ ಹೆರ್ನಾಂಡಿಸ್ ಹೇಳಿದ್ದಾರೆ. ವಿಮಾನ ಫುಟ್ಬಾಲ್ ಮೈದಾನವೊಂದರಲ್ಲಿ ತುರ್ತಾಗಿ ಇಳಿಯುವ ಪ್ರಯತ್ನದಲ್ಲಿದ್ದಾಗ, ವ್ಯವಹಾರ ಕೇಂದ್ರವೊಂದರ ಚಾವಣಿಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭ ಸಂಭವಿಸಿದ ಭೀಕರ ಬೆಂಕಿಯಿಂದಾಗಿ 130 ಮಂದಿಯನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಸ್ಯಾನ್ ಮಾಟಿಯೊ ಅಟೆಸ್ಕೊ ಮೇಯರ್ ಅನಾ ಮುನೀಝ್ ಅವರು ಮಾಹಿತಿ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.