ಮುಂಬೈ : ವಾಂಖೆಡೆ ಮೈದಾನದಲ್ಲಿ ಬ್ಯಾಟ್ಸ್ ಮನ್ ಗಳ ಅಬ್ಬರ – ಕೊನೆಗೆ ಗೆದ್ದು ಬೀಗಿದ ಮುಂಬೈ

ಮುಂಬೈ, ಮಾ. 30 : ವಾಂಖೆಡೆ ಮೈದಾನದಲ್ಲಿ ಬ್ಯಾಟ್ಸ್ ಮನ್ ಗಳ ಅಬ್ಬರಕ್ಕೆ ಹರಿದ ರನ್ ಹೊಳೆಯೇ ಹರಿದು ಬಂತು. ಕೊನೆಗೆ ಮುಂಬೈ ತಂಡವೇ ಮೇಲುಗೈ ಸಾಧಿಸಿಬಿಟ್ಟಿತು. ಕೋಲ್ಕತಾ ನೀಡಿದ 221 ರನ್‌ ಗಳ ಬೃಹತ್ ಗುರಿ ಬೆನ್ನತ್ತಿದ ಮುಂಬೈ 5 ಎಸೆತಗಳು ಬಾಕಿ ಇರುವಂತೆಯೇ 224 ರನ್ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು. ಅಲ್ಲದೇ ಇದು ಮುಂಬೈ ತಂಡದ ಗರಿಷ್ಠ ಚೇಸ್ ಎನಿಸಿಕೊಂಡಿತು.

Advertisement

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ತಂಡ ನಿಗದಿತ ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 220 ರನ್ ಕಲೆ ಹಾಕಿತು. ಈ ಬೃಹತ್ ಗುರಿ ಬೆನ್ನತ್ತಲು ಬ್ಯಾಟಿಂಗ್‌ಗೆ ಇಳಿದ ರೋಹಿತ್ ಶರ್ಮಾ ಹಾಗೂ ರಿಕಲ್ಟನ್ ಜೋಡಿ ಮೊದಲ ವಿಕೆಟ್‌ಗೆ 11.5 ಓವರ್‌ಗಳಲ್ಲಿ 148 ರನ್‌ಗಳ ಜತೆಯಾಟ ನೀಡಿ ಭದ್ರ ಬುನಾದಿ ಒದಗಿಸಿದರು. ರೋಹಿತ್ 38 ಎಸೆತಗಳಲ್ಲಿ 78 ರನ್ ಕಲೆಹಾಕಿದರೆ, ರಿಕಲ್ಟನ್ 43 ಎಸೆತಗಳಲ್ಲಿ 81 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ನಾಯಕ ಅಜಿಂಕ್ಯಾ ರಹಾನೆ 67 ರನ್ ಗಳಿಸಿದರೆ, ರಘುವಂಶಿ 51 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಉಭಯ ತಂಡದ ಬೌಲರ್‌ಗಳಿಂದ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

221 ರನ್‌ಗಳ ಗುರಿ ಬೆನ್ನತ್ತಿದ ಮುಂಬೈಗೆ ರೋಹಿತ್ ಸಿಡಿಲಬ್ಬರ ಬ್ಯಾಟಿಂಗ್ ನೆರವಾಯಿತು. ಮೊದಲ ವಿಕೆಟ್‌ಗೆ ರಿಕಲ್ಟನ್ ಜತೆಗೂಡಿ ರೋಹಿತ್ ಒದಗಿಸಿದ 148 ರನ್ ಪಂದ್ಯದ ಗತಿಯನ್ನು ಬದಲಾಯಿಸಿತು. ಹೀಗಾಗಿ ಮುಂಬೈ ಸುಲಭವಾಗಿ ಜಯ ಸಾಧಿಸಿತು. ಐಪಿಎಲ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ 2012ರಲ್ಲಿ ಮುಂಬೈ ಕೊನೆಯ ಬಾರಿ ಗೆದ್ದಿತ್ತು. ಇದಾದ ಬಳಿಕ ಪ್ರತಿವರ್ಷವೂ ಅಂದರೆ 13 ಆವೃತ್ತಿಗಳಲ್ಲಿ ಮೊದಲ ಪಂದ್ಯವನ್ನು ಸೋತಿತ್ತು. ಅಂದರೆ ಸುಮಾರು 5108 (14 ವರ್ಷ) ದಿನದ ಬಳಿಕ ಮೊದಲ ಪಂದ್ಯ ಗೆಲ್ಲುವ ಮೂಲಕ ಈ ಈ ಸೋಲಿನ ಸರಣಿಯನ್ನು ಮೊಟಕುಗೊಳಿಸಿತು.

ಮುಂಬೈ ತಂಡ 6ನೇ ಬಾರಿ ಐಪಿಎಲ್‌ನಲ್ಲಿ 200+ ರನ್ ಚೇಸ್ ಮಾಡಿ ಗೆಲುವು ಸಾಧಿಸಿತು. ಪಂಜಾಬ್ 8 ಬಾರಿ ಈ ಸಾಧನೆ ಮಾಡಿದೆ. ರೋಹಿತ್ ಐಪಿಎಲ್‌ ನಲ್ಲಿ ತಮ್ಮ 50ನೇ ಅರ್ಧ ಶತಕ ಪೂರ್ಣಗೊಳಿಸಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿಕೊಂಡರು. ವಿರಾಟ್ (74), ವಾರ್ನರ್ (66), ಧವನ್ (53) ಈ ಹಿಂದಿನ ಸಾಧಕರೆನಿಸಿಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.