ಉಡುಪಿ : ಬಿಜೆಪಿ ಶಾಸಕರನ್ನೂ ಬಿಡದ ಹ್ಯಾಕರ್ಸ್ : ವಾಟ್ಸ್ಯಾಪ್ ಹ್ಯಾಕ್ ಮಾಡಿ, ಹಣಕ್ಕಾಗಿ ಸಂದೇಶ ಕಳುಹಿಸಿ ವಂಚನೆಗೆ ಯತ್ನ

ಉಡುಪಿ, ಡಿ. 31 : ಇಂದು ತಂತ್ರಜ್ಞಾನ ಯುಗದಲ್ಲಿ ಹ್ಯಾಕರ್ಸ್ ಗಳು ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ವಂಚಿಸುತ್ತಲೇ ಇದ್ದಾರೆ. ಜನ ಸಾಮಾನ್ಯರ ಅಕೌಂಟ್ ಗಳನ್ನು ಹ್ಯಾಕ್ ಮಾಡುವುದು ಸಾಮಾನ್ಯವಾದಂತೆ ಇದೀಗ ರಾಜಕೀಯ ವ್ಯಕ್ತಿಗಳು, ಪ್ರಭಾವಿಗಳು, ಉದ್ಯಮಿಗಳನ್ನು ಹ್ಯಾಕ್ ಮಾಡಲು ಆರಂಭಿಸಿದ್ದಾರೆ. ಇದೀಗ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಸೈಬರ್ ವಂಚಕರು ಶಾಸಕರ ಹೆಸರಿನಲ್ಲಿ ಅವರ ಸಂಪರ್ಕದಲ್ಲಿರುವವರಿಗೆ ಹಣಕ್ಕಾಗಿ ಸಂದೇಶ ಕಳುಹಿಸುತ್ತಿದ್ದಾರೆ.

Advertisement

ಕಿಡಿಗೇಡಿಗಳು ಶಾಸಕರ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ, ಅವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರ ಸಂಖ್ಯೆಗೆ ಮೆಸೇಜ್ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ. ಕೆಲವು ವ್ಯಕ್ತಿಗಳಿಗೆ ಮೆಸೇಜ್ ಮಾಡಿ, ನಿಮ್ಮಿಂದ ನನಗೆ ಒಂದು ಅಗತ್ಯ ಸಹಾಯವಾಗಬೇಕು ಎಂದು ಹೇಳಿ, ಆ ಬಳಿಕ ಹಣದ ಅವಶ್ಯಕತೆಯಿದೆ ಎಂದು ವಂಚಕರು ಮೆಸೇಜ್ ಮಾಡಿದ್ದಾರೆ. ವಾಟ್ಸಾಪ್ ಹ್ಯಾಕ್ ಆಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಶಾಸಕರು, ತಮ್ಮ ಸ್ನೇಹಿತರು ಮತ್ತು ಆಪ್ತರಿಗೆ ಜಾಗರೂಕರಾಗಿರುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಶಾಸಕರ ಕಚೇರಿಯೂ ಪ್ರಕಟಣೆ ಹೊರಡಿಸಿದ್ದು, “ಹ್ಯಾಕ್ ಮಾಡಲಾದ ಸಂಖ್ಯೆಯಿಂದ ಅನೇಕ ಜನರಿಗೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸಂದೇಶಗಳು ಬಂದಿವೆ. ಸಾರ್ವಜನಿಕರು ಇಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಮತ್ತು ಹಣವನ್ನು ಕಳುಹಿಸಬಾರದು” ಎಂದು ಮನವಿ ಮಾಡಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.