ನವದೆಹಲಿ, ಅ. 01 : ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (fly dubai) ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಹೊತ್ತಿರುವ ತನ್ನ ಸಹ-ಪೈಲಟ್ ವಿರುದ್ಧ ಹೋರಾಡಿ ವಿಮಾನವನ್ನು ರಕ್ಷಿಸಿದ “ಹೀರೋ” ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ರಿಯಲ್ ಹೀರೋ. ಅಂತಹ ಗಂಭೀರ ಪರಿಸ್ಥಿತಿಯಲ್ಲಿ ಸ್ವತಃ ತಾವು ಗಾಯಗೊಂಡಿದ್ದರೂ ಕೂಡ ಪ್ರಯಾಣಿಕರನ್ನು ರಕ್ಷಿಸಲು ತೆಗೆದುಕೊಂಡ ನಿರ್ಧಾರ ಅವರ ಧೈರ್ಯವನ್ನು ತೋರಿಸುತ್ತದೆ. ಅವರ ಈ ಸಾಹಸವು ನೂರಾರು ಜನರ ಜೀವ ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ಭಾರತಕ್ಕೆ ಕ್ಯಾಪ್ಟನ್ ಮಚ್ಚರ್ ಬಗ್ಗೆ ಹೆಮ್ಮೆಯಿದೆ. ಇದನ್ನೂ ಓದಿ:ಕಾಕ್‌ಪಿಟ್‌ನಲ್ಲಿ ಪೈಲಟ್‌ನಿಂದ ಮಾರಣಾಂತಿಕ ಹಲ್ಲೆ ನಡೆದರೂ 174 ಜೀವ ರಕ್ಷಿಸಿದ್ದು ಭಾರತೀಯ ಕ್ಯಾಪ್ಟನ್!
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

