ಅಹಮದಾಬಾದ್ : ಅಂಪೈರ್ ತೀರ್ಪು ಪಾಲಿಸದ ಅಫ್ಘಾನಿಸ್ತಾನದ ಮೊಹಮ್ಮದ್ ನಬಿಗೆ ದಂಡ !

Advertisement

ಅಹಮದಾಬಾದ್, ಫೆ. 12 : ದಕ್ಷಿಣ ಆಫ್ರಿಕಾ ವಿರುದ್ಧದ ಬುಧವಾರದ ಐಸಿಸಿ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಅಂಪೈರ್ ತೀರ್ಪನ್ನು ಪಾಲಿಸದ ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿಗೆ ದಂಡ ಹಾಕಲಾಗಿದೆ.
ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ 14 ನೇ ಓವರ್‌ನಲ್ಲಿ ಬೌಲರ್ ಲುಂಗಿ ಎನ್‌ಗಿಡಿ ಅವರ ರಿಸ್ಟ್ ಬ್ಯಾಂಡ್ (wrist band) ಕುರಿತು ನಬಿ ಅಂಪೈರ್‌ಗಳೊಂದಿಗೆ ದೀರ್ಘಕಾಲದ ವಾಗ್ವಾದದಲ್ಲಿ ತೊಡಗಿದ್ದರು. ಈ ವಿಚಾರವಾಗಿ ನಬಿ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ.

Advertisement

ಅಂಪೈರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಅವರು ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘಿಸಿದ್ದಾರೆ. ನಬಿ ಅಪರಾಧವನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಇಂಟರ್ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಡೇವಿಡ್ ಗಿಲ್ಬರ್ಟ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಸ್ವೀಕರಿಸಿದರು, ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಗುರುವಾರ (ಫೆ.12) ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಅಪರಾಧವಾಗಿರುವುದರಿಂದ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ. ಅಫ್ಘಾನಿಸ್ತಾನ ಮತ್ತು ದ.ಆಫ್ರಿಕಾ ಪಂದ್ಯವು ಈ ಬಾರಿಯ ವಿಶ್ವಕಪ್ ನ ಅತ್ಯಂತ ರೋಚಕ ಪಂದ್ಯವಾಗಿತ್ತು. ಡಬಲ್ ಸೂಪರ್ ಓವರ್ ಕಂಡ ಪಂದ್ಯದಲ್ಲಿ ಕೊನೆ ದ.ಆಫ್ರಿಕಾ ಗೆಲುವು ಸಾಧಿಸಿತು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ