ಸುದೀರ್ಘ ಸಂಬಂಧದ 7ರ ಕಥೆ ಮುಗಿಯಿತು, ಎಂಎಸ್ ಧೋನಿ’ಗಿನ್ನು ಎಂಟರ ನಂಟು !

ಚೆನ್ನೈ, ಮಾ. 18 : ಐಪಿಎಲ್ ಆರಂಭದಿಂದಲೂ 7ನೇ ನಂಬರ್ ಜೆರ್ಸಿ ಧರಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಪ್ರಸಕ್ತ ಋತುವಿನಲ್ಲಿ 8ನೇ ನಂಬರ್ ಜೆರ್ಸಿ ಧರಿಸುವುದಾಗಿ ಪ್ರಕಟಿಸಿದ್ದಾರೆ. ಈ ಬದಲಾವಣೆ ಏಕೆ ಎಂಬುದು ನಿಮಗೆ ಕೂಡಲೇ ತಿಳಿಯಲಿದೆ ಎನ್ನುವ ಮೂಲಕ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.

Advertisement

‘ಕೆಲವು ಸಂಖ್ಯೆಗಳು ಸದಾ ನಿಮ್ಮೊಂದಿಗೆ ಇರುತ್ತವೆ. ಇದರಲ್ಲಿ 7 ಕೂಡ ಒಂದು. ಆದರೆ ನಾನು ಇನ್ನು 8ಕ್ಕೆ ಬದಲಾಗುತ್ತಿದ್ದೇನೆ. ಏಕೆ ಎಂಬುದು ನಿಮಗೆ ಶೀಘ್ರವೇ ತಿಳಿಯಲಿದೆ’ ಎಂದು ಧೋನಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಒಂದಿದೆ. ಇದರಲ್ಲಿ ಒಬ್ಬ ವ್ಯಕ್ತಿ, ಧೋನಿಯ 7ನೇ ಸಂಖ್ಯೆಯ ಜೆರ್ಸಿಯನ್ನು 8ಕ್ಕೆ ಬದಲಾಯಿಸುತ್ತಿರುವ ದೃಶ್ಯವಿದೆ.

ಒಂದು ವರ್ಷದ ಬಳಿಕ ಕ್ರೀಸ್ ಇಳಿಯುವ 43 ವರ್ಷದ ಧೋನಿ, ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2025ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೊಸದಿಲ್ಲಿಯಲ್ಲಿ ಆಡಿದ್ದರು. ಅಲ್ಲಿಯ ತನಕ ನಂ.7 ಜೆರ್ಸಿ ಧರಿಸಿದ್ದರು.

ನಂ. 8: ಜಡೇಜ ಜೆರ್ಸಿ

ಈವರೆಗೆ ಚೆನ್ನೈ ಪರ 8ನೇ ನಂಬರ್ ಜೆರ್ಸಿಯನ್ನು ಧರಿಸುತ್ತ ಬಂದವರು ರವೀಂದ್ರ ಜಡೇಜ. ಈ ಬಾರಿ ಅವರು ರಾಜಸ್ಥಾನ್ ಪಾಲಾಗಿದ್ದಾರೆ. ಹೀಗಾಗಿ 8ನೇ ನಂಬರ್ ಜೆರ್ಸಿಯೊಂದು ಖಾಲಿ ಉಳಿಯಲಿದೆ. ಇದನ್ನು ಧೋನಿ ಧರಿಸಲಿದ್ದಾರೆ. ಹಾಗಾದರೆ ಧೋನಿ ಅವರ ನಂ.7 ಜೆರ್ಸಿ ಯಾರು ಧರಿಸಲಿದ್ದಾರೆ ಎಂಬುದು ಮತ್ತೊಂದು ಕುತೂಹಲವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.