ಮುಂಡಾಜೆ : ಕಾಪು ಶ್ರೀ ಉಳ್ಳಾಯ ಉಳ್ಳಾಳ್ತಿ ಕ್ಷೇತ್ರದ ನವೀಕರಣಕ್ಕೆ ನ. 16ರಂದು ಶಿಲಾನ್ಯಾಸ ಕಾರ್ಯಕ್ರಮ

ಮುಂಡಾಜೆ : ಗ್ರಾಮದ ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯ ಕಾಪು ಎಂಬಲ್ಲಿರುವ ಶ್ರೀ ಉಳ್ಳಾಯ -ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದು, ಶ್ರೀ ಉಳ್ಳಾಯ ಉಳ್ಳಾಲ್ತಿ ಕಟ್ಟೆಯ ಕಾಮಗಾರಿ ಆರಂಭಿಸಲು ನವೆಂಬರ್ 16ನೇ ಭಾನುವಾರ ಬೆಳಿಗ್ಗೆ 10.37ಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಕಾಪು ನರ್ಸರಿ ಬಳಿ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಸುಮಾರು 1,200 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರ ಬಂಗ ಅರಸರ ಕಾಲದಲ್ಲಿ ಸ್ಥಾಪಿಸಲ್ಪಟ್ಟು ಮುಂದೆ ಗ್ರಾಮಸ್ಥರಿಂದ ಆರಾಧಿಸಿಕೊಂಡು ಬರುತ್ತಿದ್ದ ಕ್ಷೇತ್ರ, ಇತ್ತೀಚೆಗೆ ಸುಮಾರು ವರ್ಷಗಳಿಂದ ಗ್ರಾಮಸ್ಥರು, ಯಾತ್ರಿಕರು ಶುಭ ಸಮಾರಂಭಕ್ಕೆ ಹೋಗುವ ಹಿಂದೂ ಬಾಂಧವರು ಇಲ್ಲಿಯ ದೈವಗಳಿಗೆ ಶ್ರದ್ದಾ ಭಕ್ತಿಯಿಂದ ಸೇವೆ ಪೂಜೆ ಮಾಡಿ ಪ್ರಾರ್ಥಿಸಿ ಹೋಗುತ್ತಿರುವುದು ನಿತ್ಯ ವಾಡಿಕೆಯಾಗಿದೆ. ಪ್ರತಿ ಸಂಕ್ರಮಣದಂದು ವಿಶೇಷ ಪೂಜೆ, ಪರ್ವಸೇವೆಯು ಇಲ್ಲಿ ನಡೆದುಕೊಂಡು ಬರುತ್ತಿದೆ. ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ, ತೋಟತ್ತಾಡಿ, ಕಲ್ಮಂಜ ಗ್ರಾಮಗಳ ವ್ಯಾಪ್ತಿಯನ್ನು ಈ ಕ್ಷೇತ್ರವು ಹೊಂದಿರುತ್ತದೆ ಎಂಬುದು ಪ್ರಶ್ನಾ ಚಿಂತನೆಯಿಂದ ತಿಳಿದು ಬಂದಿರುತ್ತದೆ. ಶ್ರೀ ಕ್ಷೇತ್ರದ ಅಭಿವೃದ್ಧಿ ಬಗ್ಗೆ 5 ಗ್ರಾಮಗಳ ಸದಸ್ಯರನ್ನೊಳಗೊಂಡ ಆಡಳಿತ ಸಮಿತಿ ರಚಿಸಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಮುಂದೆ ಸಂಪೂರ್ಣ ಅಭಿವೃದ್ಧಿ ಮಾಡುವರೇ ಮೊದಲ ಹಂತದ ಕಾಮಗಾರಿ ಸುಮಾರು 20 ಲಕ್ಷದ ಅಂದಾಜು ಪತ್ರ ತಯಾರಿಸಲಾಗಿದೆ. ಶ್ರೀ ಉಳ್ಳಾಯ -ಉಳ್ಳಾಲ್ತಿ ಸಾನಿಧ್ಯಕಟ್ಟೆ, ಹೋಗುವ ದಾರಿ, ಕ್ಷೇತ್ರ ಸ್ಥಳ ವಿಸ್ತರಣೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ 2026 ಮಾರ್ಚ್ ಮುಂಚಿತವಾಗಿ ನವೀಕೃತ ಕ್ಷೇತ್ರವಾಗಿ ನಿರ್ಮಿಸಿ ದೈವಗಳ ಪುನಃ ಪ್ರತಿಷ್ಠಾಪನೆ ಆಗಬೇಕೆಂಬುದು ಆಡಳಿತ ಸಮಿತಿ ಹಾಗೂ ಗ್ರಾಮಸ್ಥರ ಸಂಕಲ್ಪವಾಗಿದೆ. ಶ್ರೀ ಉಳ್ಳಾಯ-ಉಳ್ಳಾಲ್ತಿ ಕ್ಷೇತ್ರದ ಅಭಿವೃದ್ಧಿ, ನವೀಕರಣಕ್ಕೆ ಸಹೃದಯಿಗಳಾದ ತಾವು ತನು-ಮನ-ಧನಗಳಿಂದ ಭಕ್ತಗಣ ಸಹಕರಿಸಬೇಕೆಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ವಿನಂತಿಯನ್ನು ಮಾಡಿಕೊಂಡಿದೆ.

ಮೊದಲ ಹಂತದ ಕಾಮಗಾರಿಯ ಅಂದಾಜು ವೆಚ್ಚವನ್ನು ನಿರ್ಣಯಿಸಲಾಗಿದ್ದು, ಉಳ್ಳಾಲ್ತಿ ಕಟ್ಟೆ – 07 ಲ.ರೂ., ಉಳ್ಳಾಯ ಕಟ್ಟೆ – 07 ಲ.ರೂ., ಪ್ರತಿಷ್ಠೆ, ಇತರ – 03 ಲ.ರೂ., ಕೋಲ – 02 ಲ.ರೂ., ದಾರಿ ದುರಸ್ತಿ – 01 ಲ.ರೂ. ವೆಚ್ಚವಾಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಭಕ್ತಾಭಿಮಾನಿಗಳು ತನು-ಮನ-ಧನಗಳಿಂದ ಸಹಕರಿಸಬೇಕೆಂದು ಆಡಳಿತ ಮಂಡಳಿ ವಿನಂತಿ ಮಾಡಿಕೊಂಡಿದೆ.

ತಮ್ಮ ದೇಣಿಗೆ ಕಾಣಿಕೆಯನ್ನು ಕ್ಷೇತ್ರದ ಉಳಿತಾಯ ಖಾತೆ :

ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಬರೋಡಾ ಮುಂಡಾಜೆ
SB ಖಾತೆ ಹೆಸರು : ಶ್ರೀ ಉಳ್ಳಾಯ-ಉಳ್ಳಾಲ್ತಿ ಆಡಳಿತ ಮಂಡಳಿ
ಖಾತೆ ಸಂಖ್ಯೆ : 70880100004589
IFSC CODE : BARBOVJMDJE

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.