ಮೈಸೂರು : ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಇಲ್ಲಿನ ನೂತನ ರಾಜಗೋಪುರ ಲೋಕಾರ್ಪಣೆ – ಅತಿಥಿಯಾಗಿ ಮೈಸೂರು ಮಹಾರಾಜರಿಗೆ ಆಹ್ವಾನ

ಮೈಸೂರು : ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಇಲ್ಲಿನ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ, ಅಥರ್ವ ಶೀರ್ಷ ಗಣಯಾಗ ಹಾಗೂ ಮಹಾಚಂಡಿಕಾ ಯಾಗವು ಡಿಸೆಂಬರ್ 06, 07 ಹಾಗೂ 08ರಂದು ವೈಭವದಿಂದ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರನ್ನು ಭಜನಾ ಮಂದಿರದ ಆಡಳಿತ ಮಂಡಳಿಯವರು ಭೇಟಿ ಮಾಡಿ, ಆಮಂತ್ರಣ ಪತ್ರ ನೀಡಿ, ಆಹ್ವಾನಿಸಲಾಯಿತು.

Advertisement

ಡಿಸೆಂಬರ್ 07ರಂದು ಸಂಜೆ ಗಂಟೆ 04:00ರಿಂದ ಜಿಲ್ಲೆಯ ಪ್ರತಿಷ್ಠಿತ ಕಲಾ ತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ, ಪಿಲಿನಲಿಕೆ, ಕೌಡಲ ತೈಯ್ಯಂ, ಟ್ಯಾಬ್ಲೋ, ಚೆಂಡೆ, ವಾಲಗ, ಕೊಂಬು ಹಾಗೂ ಭಜನಾ ತಂಡಗಳೊಂದಿಗೆ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು, ಮಹಾಸಂಸ್ಥಾನಮ್ ಅವರನ್ನು ಯತಿವರ್ಯರೊಂದಿಗೆ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ಸಂಜೆ 05:30 ಗಂಟೆಗೆ ನೂತನ ರಾಜಗೋಪುರದ ಲೋಕಾರ್ಪಣೆ, ಶ್ರೀ ದುರ್ಗಾ ಗಣಪತಿ ಸಭಾಭವನ ಲೋಕಾರ್ಪಣೆಗೊಳ್ಳಲಿದೆ. ಸಂಜೆ 06:00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.