ಬೆಳ್ತಂಗಡಿ : ನಡ ಕನ್ಯಾಡಿ ಪರಿಸರದಲ್ಲಿ ಬೋನಿಗೆ ಬಿದ್ದ ಚಿರತೆ – ಸ್ಥಳೀಯರು ನಿಟ್ಟುಸಿರು

ಬೆಳ್ತಂಗಡಿ, ಜ. 26 : ತಾಲೂಕಿನ ನಡ ಕನ್ಯಾಡಿ ಪರಿಸರ ಪ್ರದೇಶದಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಚಿರತೆಯನ್ನು ಸೆರೆಹಿಡಿಯುವಲ್ಲಿ ಇಲಾಖೆ ಕೈಗೊಂಡ ಪತ್ತೆ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ.

Advertisement

ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿ, ಚಿರತೆ ಸಂಚರಿಸುತ್ತಿದ್ದ ಸ್ಥಳಗಳನ್ನು ಗುರುತಿಸಿ, ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಬೋನುಗಳನ್ನು ಸ್ಥಾಪಿಸಿತ್ತು. ಇದರ ಫಲವಾಗಿ ಇದೀಗ ಒಂದು ಚಿರತೆ ಬೋನಿಗೆ ಸಿಲುಕಿದೆ.
ಈ ಪ್ರದೇಶದಲ್ಲಿ ಚಿರತೆಯ ಓಡಾಟ ತೀವ್ರವಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ, ಹಲವು ಸಾಕು ಪ್ರಾಣಿಗಳ ಮೇಲೂ ದಾಳಿ ನಡೆಸಿದ್ದ ಘಟನೆಗಳು ವರದಿಯಾಗಿದ್ದವು. ಇದರಿಂದ ಸ್ಥಳೀಯರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿತ್ತು.
ಇದೀಗ ಒಂದು ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನ – ಮೂವರ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮಾ. 4ರಿಂದ ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ – ಹರೀಶ್ ಪೂಂಜಾ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

⚠️ Contents are protected on this website.