ಧರ್ಮಸ್ಥಳ : ನಂದಗೋಕುಲ ಟ್ರೋಫಿ Season-3 ಪಂದ್ಯಾಕೂಟ – ಶ್ರೀಮುಡಿ ಕ್ರಿಕೆಟರ್ಸ್ ಚಾಂಪಿಯನ್ಸ್

ಧರ್ಮಸ್ಥಳ, ಡಿ. 18 : ಪೂಜ್ಯ ಖಾವಂದರ ಶುಭಾಶೀರ್ವಾದಗಳೊಂದಿಗೆ ಹಾಗೂ ಪೂಜ್ಯ ಸಣ್ಣಧನಿಗಳ ಮಾರ್ಗದರ್ಶನಗಳೊಂದಿಗೆ, ಶ್ರೀ ಶ್ರೇಯಣ್ಣ ಮತ್ತು ಶ್ರೀ ನಿಶು ಅಣ್ಣನವರ ಸಹಕಾರದೊಂದಿಗೆ ನಂದಗೋಕುಲ ಫ್ರೆಂಡ್ಸ್ ಜೋಡುಸ್ಥಾನ ಧರ್ಮಸ್ಥಳ ಇವರ ಸಾರಥ್ಯದಲ್ಲಿ ನಂದಗೋಕುಲ ಟ್ರೋಫಿ Season-3 ಧರ್ಮಸ್ಥಳದ ಅನ್ನಪೂರ್ಣ ಛತ್ರದ ಹಿಂಬದಿ ಮೈದಾನದಲ್ಲಿ ನಡೆಯಿತು. ಈ ಕ್ರೀಡಾಕೂಟದ ಚಾಂಪಿಯನ್ ಆಗಿ ಪ್ರಶಾಂತ್ ಭಂಡಾರಿ ಮಾಲಕತ್ವದ ಶ್ರೀಮುಡಿ ಕ್ರಿಕೆಟರ್ಸ್ ತಂಡವು ಹೊರಹೊಮ್ಮಿದೆ. ದ್ವೀತೀಯ ಸ್ಥಾನವನ್ನು ಅವಿನಾಶ್ ಶೆಟ್ಟಿ ಮಾಲಕತ್ವದ ಅಸ್ಪಿರೆಂಟ್ಸ್ ತನ್ನದಾಗಿಸಿಕೊಂಡಿದೆ. ಇನ್ನು, ತೃತೀಯ ಸ್ಥಾನ – ಸದಾಶಿವ ಕಾಫಿ ಡೇ ಮಾಲಕತ್ವದ ಕಾಫಿ ಡೇ ತಂಡ, ಚತುರ್ಥ ಸ್ಥಾನ ಸುದರ್ಶನ್ ಶೆಟ್ಟಿ ಮಾಲಕತ್ವದ ಸಾನಿಧ್ಯ ಕ್ರಿಕೆಟರ್ಸ್ ತೃಪ್ತಿಪಟ್ಟುಕೊಂಡಿತು.

Advertisement

ಡಿ. 17 ಮತ್ತು 18ರಂದು ನಡೆದ LEGENDS ಕ್ರಿಕೆಟ್ SEASON 03 ಧರ್ಮಸ್ಥಳ ಗ್ರಾಮದ 30 ವರ್ಷ ಮೇಲ್ಪಟ್ಟ ಲೆಜೆಂಡ್ ಕ್ರಿಕೆಟ್ ತಾರೆಗಳ ಕೂಡುವಿಕೆಯಲ್ಲಿ ಓವರ್ ಆರ್ಮ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ – ಶ್ರೀ ಮುಡಿ ತಂಡದ ಆಟಗಾರ ಮಹೇಂದ್ರ (120ಕ್ಕೂ ಹೆಚ್ಚು ರನ್, 08 ವಿಕೆಟ್), ಬೆಸ್ಟ್ ಲೆಜೆಂಡ್ ಆಟಗಾರ ಪ್ರಶಸ್ತಿ ಸೀಗಲ್ ತಂಡದ ಲೋಕೇಶ್ ಕುಲಾಲ್, ಬೆಸ್ಟ್ ಫೀಲ್ಡರ್ ಪ್ರಶಸ್ತಿ ಕಾಫಿ ಡೇ ತಂಡದ ಸಂಪತ್ ಜೈನ್, ಬೆಸ್ಟ್ ಬೌಲರ್ ಪ್ರಶಸ್ತಿ ಆಸ್ಪಿರೆಂಟ್ಸ್ ತಂಡದ ರಮೇಶ್ ರಮ್ಮಿ, ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಕಾಫಿ ಡೇ ತಂಡದ ಸ್ವರೂಪ್ ಜೈನ್ ತಮ್ಮದಾಗಿಸಿಕೊಂಡರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಗೌಡ ಧರ್ಮಸ್ಥಳ, ಹಿರಿಯ ಕ್ರಿಕೆಟ್ ತಾರೆ, ಕೊಡುಗೈ ದಾನಿ ಲೋಕೇಶ್ ಕುಲಾಲ್, ಹಿರಿಯ ಆಟಗಾರ ಜ್ಞಾನೇಶ್ ಧರ್ಮಸ್ಥಳ, ಕ್ರೀಡಾಕೂಟದ ಅಧ್ಯಕ್ಷರಾಗಿರುವ ಶಿವಂ ಧರ್ಮಸ್ಥಳ, ನಂದಗೋಕುಲ ಫ್ರೆಂಡ್ಸ್ ಜೋಡುಸ್ಥಾನ ಧರ್ಮಸ್ಥಳ ಇದರ ಅಧ್ಯಕ್ಷರಾಗಿರುವ ತಿಲಕೇಶ್ ಕುಲಾಲ್, ಶೃಂಗಾರ್ ಮಾಸ್ಟರ್ ಕಟ್ಸ್ ಮಾಲಕ ಅಭಿಜಿತ್ ಭಂಡಾರಿ, ಕೊಡುಗೈ ದಾನಿ ಹರೀಶ್ ಅಚ್ಚು, ಕೊಡುಗೈ ದಾನಿ ವಸಂತ ಸುವರ್ಣ ಹಾಗೂ ತಂಡಗಳ ಮಾಲಕರು ಉಪಸ್ಥಿತರಿದ್ದರು. ಶ್ರೇಯಸ್ ಕಾರ್ಯಕ್ರಮದ ನಿರೂಪಣೆಗೈದರು. ಕ್ರೀಡಾಕೂಟದ ವೀಕ್ಷಕ ವಿವರಣೆಗಾರರಾಗಿ ವಿಜಯ್ ಅತ್ತಾಜೆಯಿದ್ದರು.

ಇನ್ನು, ನಂದಗೋಕುಲ ಟ್ರೋಫಿ Season-3 ಪಂದ್ಯಾಕೂಟದಲ್ಲಿ ಪ್ರಶಾಂತ್ ಭಂಡಾರಿ ಮಾಲಕತ್ವದ ಶ್ರೀಮುಡಿ ಕ್ರಿಕೆಟರ್ಸ್, ಅವಿನಾಶ್ ಶೆಟ್ಟಿ ಮಾಲಕತ್ವದ ಅಸ್ಪಿರೆಂಟ್ಸ್, ಸುದರ್ಶನ್ ಶೆಟ್ಟಿ ಮಾಲಕತ್ವದ ಸಾನಿಧ್ಯ ಕ್ರಿಕೆಟರ್ಸ್, ಸದಾಶಿವ ಕಾಮದೇನು ಮಾಲಕತ್ವದ ಕಾಫಿ ಡೇ ಲೆಜೆಂಡ್ಸ್, ಕಿರಣ್ ಶೆಟ್ಟಿ ಮಾಲಕತ್ವದ ಸೀಗುಲ್ ಕ್ರಿಕೆಟರ್ಸ್, ನೀಧಿಶ್ ಶೆಟ್ಟಿ ಮತ್ತು ಅರುಣ್ ರಾವ್ ಮತ್ತಿಲ ಮಾಲಕತ್ವದ ಕೆ ಎಫ್ ಸಿ ಕನ್ಯಾಡಿ ಈ ಆರು ತಂಡಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.