ನ.16ರಂದು ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇಗುಲ : 10 ದಿನಗಳಲ್ಲಿ18 ಲಕ್ಷ ದಾಟಿದ ಆನ್‌ಲೈನ್ ಕ್ಯೂ ಬುಕ್ಕಿಂಗ್

Advertisement

ಕೇರಳ : ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲವು ನ.16ರಂದು ಸಂಜೆ 5ಕ್ಕೆ ತೆರೆಯಲಿದೆ. ತಂತ್ರಿ ಕಂಠರರ್ ಮಹೇಶ್ ಮೋಹನರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನಂಬೂದಿರಿ ದೇಗುಲದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ. ಮಾಳಿಗಪ್ಪುರಂ ದೇಗುಲ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಕೈ ಮತ್ತು ಭಸ್ಮ ಹಸ್ತಾಂತರಿಸಲಾಗುವುದು. ಬಳಿಕ ಪ್ರಧಾನ ಅರ್ಚಕರು 18 ಮೆಟ್ಟಿಲಿಳಿದು ಕೊಡಿಮರ ಬಳಿಯ ಕುಂಡಕ್ಕೆ ಅಗ್ನಿಸ್ಪರ್ಶ ಮಾಡುವರು. ಬಳಿಕ ಇರುಮುಡಿ ತಲೆ ಮೇಲೆ ಹೊತ್ತ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ 18 ಮೆಟ್ಟಿಲೇರಲು ಅವಕಾಶ ನೀಡಲಾಗುತ್ತದೆ.

Advertisement

ಶಬರಿಮಲೆ ಹಾಗೂ ಮಾಳಿಗಪ್ಪುರಂ ದೇಗುಲದ ನಿಯೋಜಿತ ಪ್ರಧಾನ ಅರ್ಚಕ ಇ.ಡಿ. ಪ್ರಸಾದ್, ಮನು ನಂಬೂದಿರಿ ಮೊದಲು 18 ಮೆಟ್ಟಿಲುಗಳನ್ನು ಏರುವರು. ಸಂಜೆ 6ಕ್ಕೆ ಇ.ಡಿ. ಪ್ರಸಾದ್ ಅವರನ್ನು ಶಬರಿಮಲೆ ಹಾಗೂ ಎಂ.ಜಿ. ಮನು ನಂಬೂದಿರಿ ಅವರನ್ನು ಮಾಳಿಗಪ್ಪುರಂ ಅರ್ಚಕರನ್ನಾಗಿಸುವ ಕಾರ್ಯಕ್ರಮ ನಡೆಯಲಿದೆ. ತಂತ್ರಿಗಳು ಕಲಶ ಪೂಜೆ ನೆರವೇರಿಸಿ ಅಭಿಷೇಕ ಮಾಡಿ ನಿಯೋಜಿತ ಅರ್ಚಕರನ್ನು ದೇಗುಲಕ್ಕೆ ಕರೆದೊಯ್ದು ಮೂಲ ಮಂತ್ರ ಪಠಿಸಲಿದ್ದಾರೆ. ನ.17ರಂದು ವೃಶ್ಚಿಕ ಮಾಸದ ಪೂಜೆಗಳು ಆರಂಭವಾಗಲಿವೆ. ಡಿ.26ರಂದು ಸಂಜೆ 6.30ಕ್ಕೆ ಅಯ್ಯಪ್ಪನಿಗೆ ತಂಗ ಅಂಗಿ ತೊಡಿಸಿ ದೀಪಾರಾಧನೆ ಮಾಡಲಾಗುತ್ತದೆ. ಡಿ.27ರಂದು ಮಂಡಲ ಪೂಜೆ ಮುಗಿಸಿ ರಾತ್ರಿ 10ಕ್ಕೆ ದೇಗುಲ ಮುಚ್ಚಲಾಗುವುದು. ಡಿ.30ರಂದು ಸಂಜೆ 5ಕ್ಕೆ ಮಕರ ಮಾಸದ ಪೂಜೆಗಾಗಿ ಮತ್ತೆ ದೇಗುಲ ತೆರೆಯಲಾಗುವುದು. ಜ.14ರಂದು ಮಕರ ಜ್ಯೋತಿ ಮಹೋತ್ಸವ, ಜ.20ರಂದು ಮಕರ ಮಾಸದ ಪೂಜೆ ಮುಗಿಸಿ ದೇಗುಲ ಮುಚ್ಚಲಾಗುತ್ತದೆ.

Advertisement

18 ಲಕ್ಷ ದಾಟಿದ ಆನ್‌ಲೈನ್ ಕ್ಯೂ ಬುಕ್ಕಿಂಗ್

ಶಬರಿಮಲೆ ಮಂಡಲ-ಮಕರಜ್ಯೋತಿ ತೀರ್ಥಯಾತ್ರೆಗೆ ನ.1ರಂದು ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದ್ದು, 10 ದಿನಗಳಲ್ಲಿ ಬುಕ್ಕಿಂಗ್ ಸಂಖ್ಯೆ 18 ಲಕ್ಷ ದಾಟಿದೆ. ನ.28ರವರೆಗಿನ ಬುಕ್ಕಿಂಗ್ ಸ್ಲಾಟ್ ಗಳು ಸದ್ಯ ಪೂರ್ಣಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸಹಾಯನಿಧಿ ಯೋಜನೆ

ಈ ಬಾರಿ ಆನ್‌ಲೈನ್ ಕ್ಯೂ ಬುಕ್ಕಿಂಗ್ ಮಾಡುವಾಗ ತಲಾ 5 ರೂ. ಕಡ್ಡಾಯವಲ್ಲದ ಸಹಾಯನಿಧಿ ಆರಂಭಿಸಲಾಗಿದ್ದು, ಇದುವರೆಗೆ ಒಟ್ಟು 35 ಲಕ್ಷ ರೂ. ಸಂಗ್ರಹವಾಗಿದೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ. ಈ ಸಹಾಯನಿಧಿ ಯೋಜನೆ ಮೂಲಕ ಶಬರಿಮಲೆ ತೀರ್ಥಯಾತ್ರೆ ವೇಳೆ ಆಕಸ್ಮಿಕವಾಗಿ ಸಾವಿಗೀಡಾಗುವ ಭಕ್ತರ ಆಶ್ರಿತರಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು, ಶಬರಿಮಲೆ ಹಾಗೂ ಸಂಬಂಧಿತ ವಲಯಗಳಲ್ಲಿ ಸಾವಿಗೀಡಾಗುವ ಭಕ್ತರ ಮೃತದೇಹಗಳನ್ನು ಊರಿಗೆ ಕಳುಹಿಸಲು ಸಹಾಯನಿಧಿಯನ್ನು ಮಂಡಳಿ ಘೋಷಿಸಿದೆ. ಕೇರಳದೊಳಗೆ ಮೃತದೇಹ ಸಾಗಿಸಲು 30 ಸಾವಿರ ರೂ. ಹಾಗೂ ಹೊರ ರಾಜ್ಯಗಳಿಗೆ 1 ಲಕ್ಷ ರೂ. ನೀಡಲಾಗುವುದು ಎಂದಿದ್ದಾರೆ. ಅಲ್ಲದೆ, ನಿಲಕ್ಕಲ್‌ನಲ್ಲಿ ಪಾರ್ಕಿಂಗ್ ಸೌಲಭ್ಯವನ್ನು 8 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ವಿಶೇಷ ಏಜೆನ್ಸಿ ನೇಮಿಸಲಾಗಿದೆ. ಚಾಲಕರಿಗೆ ವಿಶ್ರಾಂತಿ ಕೊಠಡಿಗಳನ್ನೂ ಸಜ್ಜುಗೊಳಿಸಲಾಗಿದೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ