ಹೈದರಾಬಾದ್, ಜ. 29 : ಸಾಮಾಜಿಕ ಜಾಲತಾಣ ಇನ್ ಸ್ಟ್ರಾಗ್ರಾಮ್ ನಲ್ಲಿ ಪರಿಚಿತನಾಗಿದ್ದ ವ್ಯಕ್ತಿಯೊಂದಿಗೆ ವಿವಾಹವನ್ನು ವಿರೋಧಿಸಿದ ಪೋಷಕರನ್ನು ನರ್ಸ್ ಒಬ್ಬಳು ಅರಿವಳಿಕೆ( Anesthesia) ಚುಚ್ಚುಮದ್ದು ನೀಡಿ ಕೊಲೆ ಮಾಡಿ ಜೈಲು ಪಾಲಾಗಿದ್ದಾಳೆ. ಆರೋಪಿ ಬಿ. ಸುರೇಖಾ ಎಂಬಾಕೆಯಾಗಿದ್ದು, ವೃತ್ತಿಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಪ್ರಮಾಣದ ನಿದ್ರಾಜನಕ ಇಂಜೆಕ್ಷನ್ ನೀಡಿ ಮೂಲಕ ತನ್ನ ಪೋಷಕರನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಪಿ ಶ್ರೀನಿವಾಸ್ ರೆಡ್ಡಿ, ಧರೂರ್ ಪೊಲೀಸರು ಒಂದೇ ದಿನದೊಳಗೆ ಜೋಡಿ ಕೊಲೆಯನ್ನು ಭೇದಿಸಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆಯಿಂದ ಸುರೇಖಾ ಇಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿ ಆತನನ್ನು ಮದುವೆಯಾಗಲು ಬಯಸಿದ್ದಳು. ಆಕೆಯ ಪೋಷಕರು ಆಕ್ಷೇಪಿಸಿದಾಗ, ಆಕೆ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಳು” ಎಂದು ತಿಳಿಸಿದ್ದಾರೆ.
ಜನವರಿ 24 ರಂದು, ಸುರೇಖಾ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ಅರಿವಳಿಕೆ ಔಷಧಿಗಳನ್ನು ಕದ್ದು ಮನೆಗೆ ಬಂದಿದ್ದಳು. ಅದೇ ದಿನ ರಾತ್ರಿ, ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದ ತನ್ನ ತಾಯಿ ಲಕ್ಷ್ಮೀ ಗೆ ನಿದ್ರೆ ಮಾಡಲು ಇಂಜೆಕ್ಷನ್ ನೀಡುವುದಾಗಿ ಹೇಳಿದ್ದಳು. ಮಗಳನ್ನು ನಂಬಿ ಲಕ್ಷ್ಮೀ ಒಪ್ಪಿಕೊಂಡಿದ್ದರು. ಆದರೆ ಹೆಚ್ಚಿನ ಡೋಸೇಜ್ ಮಾರಕವೆಂದು ಸಾಬೀತಾಯಿತು. ನಂತರ, ಅವಳ ತಂದೆ ದಶರಥ್ ಮನೆಗೆ ಹಿಂದಿರುಗಿದಾಗ, ಕೃಷಿ ಕೆಲಸದಿಂದ ದಣಿದಿದ್ದೀರಿ ಎಂದು ಅದೇ ನಿದ್ರಾಜನಕವನ್ನು ಚುಚ್ಚಿದ್ದಾಳೆ. ಇಬ್ಬರೂ ಹಾಯ್ ಡೋಸ್ ನಿಂದಾಗಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಮರುದಿನ ಬೆಳಗ್ಗೆ, ಸುರೇಖಾ ಕಂಗಾಲಾದವರಂತೆ ನಟಿಸಿ ತನ್ನ ಹೆತ್ತವರು ಎಚ್ಚರಗೊಳ್ಳುತ್ತಿಲ್ಲ ಎಂದು ಗೋಳಿಡುತ್ತಾ ನೆರೆಹೊರೆಯವರಿಗೆ ಹೇಳಿದ್ದಾಳೆ. ಆಕೆಯ ಸಹೋದರ ಅಶೋಕ್ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಅನುಮಾನಗೊಂಡ ಅಶೋಕ್ ನೀಡಿದ ದೂರಿನ ಆಧಾರದ ಮೇಲೆ, ಧಾರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಆರಂಭದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯ ವರದಿಗಳು ನಿದ್ರಾಜನಕ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿವೆ. ಸುರೇಖಾಳನ್ನು ಬಂಧಿಸಲಾಯಿತು, ವಿರುದ್ಧವಾದ ಹೇಳಿಕೆ ನೀಡಿ ಅಂತಿಮವಾಗಿ ತಪ್ರೊಪ್ಪಿಕೊಂಡಿದ್ದಾಳೆ. ಹತ್ಯೆಯಾದವರು, ನಕ್ಕಲಿ ದಶರಥ್ (59) ಮತ್ತು ಲಕ್ಷ್ಮೀ (54) ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದ ರೈತರು. ಇಬ್ಬರು ಹೆಣ್ಣುಮಕ್ಕಳು ಮತ್ತು ಪುತ್ರ ಅಶೋಕ್ ಓದುತ್ತಿದ್ದ ಮತ್ತು ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಕಿರಿಯ ಮಗಳು ಸುರೇಖಾ ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಸದ್ಯ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

