ಬೆಳ್ತಂಗಡಿ, ಜೂ. 16 : ಕುಪ್ಪೆಟ್ಟಿ – ಉಪ್ಪಿನಂಗಡಿ ರಸ್ತೆಯ ಇಲಂತಿಲ ಗ್ರಾಮದ ಪಿದಮಲೆ ಎಂಬಲ್ಲಿ
ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ತಾತ್ಕಾಲಿಕ ಮುಕ್ತಿ ನೀಡಲಾಗಿದೆ. ಶಾಸಕ ಹರೀಶ್ ಪೂಂಜಾರವರ ಮುತುವರ್ಜಿಯಿಂದ ವೆಟ್ ಮಿಕ್ಸ್ ಹಾಕಿ ರಸ್ತೆಯ ಗುಂಡಿ ಮುಚ್ಚಲಾಗಿದೆ.
ಕೆಲ ದಿನಗಳ ಹಿಂದೆ ಆಟೋ ಟೆಂಫೋ’ವೊಂದು ಇಲಂತಿಲ ಗ್ರಾಮದ ಪಿದಮಲೆ ಎಂಬಲ್ಲಿ
ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ಬಿದ್ದಿದ್ದ ಘಟನೆ ನಡೆದಿತ್ತು. ಇದೀಗ ಶಾಸಕ ಹರೀಶ್ ಪೂಂಜಾ’ರ ಮುತುವರ್ಜಿಯಿಂದ ಬೃಹತ್ ಗುಂಡಿಗೆ ತಾತ್ಕಾಲಿಕ ಮುಕ್ತಿ ನೀಡಲಾಗಿದೆ. ರಸ್ತೆಯ ದುಸ್ಥಿತಿಯನ್ನು ಪರಿಶೀಲಿಸಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಮಳೆಯ ಪರಿಣಾಮ ಉಂಟಾಗಿದ್ದ ಪಿಡಬ್ಲ್ಯುಡಿ ರಸ್ತೆಯ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಣೆಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವೆಟ್ ಮಿಕ್ಸ್ ಹಾಕಿ ರಸ್ತೆ ಸಮತಟ್ಟುಗೊಳಿಸಲಾಗಿದೆ.
ರಸ್ತೆ ಸಮಸ್ಯೆಯ ಬಗ್ಗೆ ಸರ್ಕಾರ ಮೌನ !
ಕುಪ್ಪೆಟ್ಟಿ – ಉಪ್ಪಿನಂಗಡಿ ರಸ್ತೆ ಹದಗೆಟ್ಟು ವರ್ಷಗಳೇ ಉರುಳಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ವಿಧಾನಸಭೆಯಲ್ಲೂ ಶಾಸಕ ಹರೀಶ್ ಪೂಂಜಾ ಅವರು ಧ್ವನಿಯೆತ್ತಿದ್ದರು. ಆದರೆ, ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತಿರಲಿಲ್ಲ. ಇದೀಗ ಮಳೆಗಾಲದ ಆರಂಭದ ದಿನದಲ್ಲಿ, ಸರ್ಕಾರವು ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ. ಮಳೆಗಾಲ ಆರಂಭವಾಗಿರುವ ಕಾರಣ ರಸ್ತೆ ಅಭಿವೃದ್ಧಿ ಕಾರ್ಯಗಳು ಆರಂಭ ಮಾಡುವಂತಿಲ್ಲ. ಹೀಗಾಗಿ, ಸರಕಾರದ ನಿರ್ಲಕ್ಷ್ಯತನದಿಂದಾಗಿ ಈ ಮಳೆಗಾಲದಲ್ಲಿಯೂ ಕೂಡಾ ಹದಗೆಟ್ಟ ರಸ್ತೆಯನ್ನೇ ಬಳಸಬೇಕಾದ ದುಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ……


