ಬೆಳ್ತಂಗಡಿ, ಡಿ. 17 : ಶಾಸಕರಾದ ಹರೀಶ್ ಪೂಂಜರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿಸೆಂಬರ್ 20ರ ಶನಿವಾರ ದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ.
- ಪೂರ್ವಾಹ್ನ – 9.30ಕ್ಕೆ – ಗ್ರಾಮ ಪಂಚಾಯತ್ ಮಚ್ಚಿನ.
- ಪೂರ್ವಾಹ್ನ – 11.00ಕ್ಕೆ – ಗ್ರಾಮ ಪಂಚಾಯತ್ ಮಾಲಾಡಿ
- ಅಪರಾಹ್ನ – 2.00ಕ್ಕೆ – ಸಿ.ಎ ಬ್ಯಾಂಕ್ ಹಾಲ್ ಕಳಿಯ
- ಸಂಜೆ – 4.00ಕ್ಕೆ – ಗ್ರಾಮ ಪಂಚಾಯತ್ ಬಳೆಂಜ
ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರ ಕಚೇರಿ ಪ್ರಕಟನೆ ಮೂಲಕ ವಿನಂತಿಸಿದೆ.

