ಪುದುವೆಟ್ಟು : ವಿಶ್ವ ವಿಶೇಷಚೇತನರ ದಿನಾಚರಣೆ – ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

ಪುದುವೆಟ್ಟು, ಡಿ. 12 : ವಿಶ್ವ ವಿಶೇಷಚೇತನರ ದಿನಾಚರಣೆಯ ಅಂಗವಾಗಿ ಪುದುವೆಟ್ಟು ಗ್ರಾ.ಪಂ ಸಭಾಂಗಣದಲ್ಲಿ ಡಿ. 11ರಂದು ನಡೆದ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯು ನಡೆಯಿತು.

Advertisement

ಗ್ರಾಮ ಸಭೆಯಲ್ಲಿ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರವಾಗಿ ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಮಾಹಿತಿ ನೀಡಿದರು. ಗ್ರಾಮ ಸಭೆಗೆ ಸಹಯೋಗ ನೀಡಿದ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಇದರ ಸಲಹಾ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞ ಮುಂಡಾಜೆ ಮಾತನಾಡಿ, ಸಂಘದ ಸದಸ್ಯತ್ವ ವಿಶೇಷಚೇತನರಿಗಾಗಿಯೇ ರಾಜ್ಯಮಟ್ಟದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನಲ್ಲಿ ಈಗ ಇರುವ ವ್ಯವಹಾರ ವಿವರ, ಸಾಲಸೌಲಭ್ಯಗಳ ಮಾಹಿತಿ, ವಿಕಲಚೇತನರ ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.

ಪುದುವೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 43 ಮಂದಿ ಗುರುತಿನ ಚೀಟಿ ಪಡೆದ ವಿಶೇಷಚೇತರಿದ್ದು, ಅವರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಪೂರಕ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯತ್ ಹೊಂದಿದೆ ಎಂದು ಗ್ರಾ.ಪಂ. ಅಧ್ಯಕ್ಷ ಪೂರ್ಣಾಕ್ಷ ತಿಳಿಸಿದರು. ನಮ್ಮ ಪಂಚಾಯತ್ ನಿಂದ ವಿಶೇಷಚೇತನರ ಮೀಸಲು ಅನುದಾನವನ್ನು ಅವರಿಗಾಗಿಯೇ ವಿನಿಯೋಗಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಪುದುವೆಟ್ಟು ಪಂಚಾಯತ್ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವುದರಿಂದ 5% ಮೀಸಲು ಅನುದಾನದ ಪ್ರಮಾಣ ಕಡಿಮೆ ಇದೆ. ಅದಾಗ್ಯೂ ಲಭ್ಯ ಅನುದಾನದಲ್ಲಿ ದಾನಿಗಳ ಸಹಕಾರದೊಂದಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಯಶವಂತ್ ಗೌಡ, ಭಾಸ್ಕರ, ರೇಣುಕಾ, ವನಿತಾ, ಅಪ್ಪಿ, ಇಂದಿರಾ, ಜಯಲಕ್ಷ್ಮಿ, ರಾಮೇಂದ್ರ, ಸೌಭಾಗ್ಯ ಸೊಸೈಟಿಯ ಸಲಹಾ ಸಮಿತಿ ಸದಸ್ಯೆ ಸಿ.ಕೆ ಚಂದ್ರಕಲಾ, ಮೆನೇಜರ್ ಸಹನ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು. ಪಿಡಿಒ ರವಿ ಎನ್.ಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿಲ್ ಕಲೆಕ್ಟರ್ ರವಿಶಂಕರ್ ನಿರೂಪಿಸಿದರು. ವಿಕಲಚೇತನರು ಮತ್ತು ಅವರ ಪೋಷಕರ ಅಹವಾಲು ಸ್ವೀಕರಿಸಲಾಯಿತು. ಕೆಲವು ಬೇಡಿಕೆಗಳಿಗೆ ಎಂಆರ್‌ಡಬ್ಲ್ಯೂ ಮೂಲಕ ಪರಿಹಾರವನ್ನೂ ಕಂಡುಕೊಳ್ಳಲಾಯಿತು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಮೀಮಾ ಬಾನು ಧನ್ಯವಾದ ಸಲ್ಲಿಸಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.