ರಫೇಲ್‌ ಹಾಗೂ P-8I ವಿಮಾನಗಳ ಖರೀದಿಗೆ ಕೇಂದ್ರದಿಂದ ಗ್ರೀನ್‌ ಸಿಗ್ನಲ್‌ : 3.25 ಲಕ್ಷ ಕೋಟಿಯ ಮೆಗಾ ಒಪ್ಪಂದ

ಹೊಸದಿಲ್ಲಿ, ಫೆ. 12 : ಭಾರತದ ಅತಿದೊಡ್ಡ ಢಿಫೆನ್ಸ್ ಡೀಲ್ ಗೆ ಅನುಮೋದನೆ ದೊರೆತಿದ್ದು, ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾಕ್ಕೆ ನಡುಕ ಶುರುವಾದಂತಿದೆ. ಆಪರೇಷನ್‌ ಸಿಂಧೂರ ಸಮಯದಲ್ಲಿ ಭಾರತಕ್ಕೆ ಬ್ರಹ್ಮಾಸ್ತ್ರವಾಗಿದ್ದ ರಫೇಲ್‌ ಜೆಟ್‌ ವಾಯುಪಡೆಯ ಶಕ್ತಿಯನ್ನು ಇನ್ನಷ್ಟು ಹಿಮ್ಮಡಿಗೊಳಿಸಲು ಸಮಯ ಕೂಡಿಬಂದಿದ್ದು, ಇದರ ಜೊತೆಗೆ ನೌಕಾಪಡೆಗಾಗಿ 6 P-8i ಕಡಲ ಗಸ್ತು ವಿಮಾನಗಳ ಖರೀದಿಗೆ ರಕ್ಷಣಾ ಸ್ವಾಧೀನ ಮಂಡಳಿ ( DAC ) ಫೆ.11 ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

Advertisement

ಗುರುವಾರ ರಕ್ಷಣಾ ಸಚಿವ ರಾಜ್ ನಾಥ್‌ ಸಿಂಗ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 114 ರಫೇಲ್‌ ಜೆಟ್‌ ಖರೀದಿಗೆ ಅನುಮೋದನೆ ದೊರೆತಿದ್ದು, ಈ ತಿಂಗಳ ಕೊನೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೇಲ್‌ ಮ್ಯಾಕ್ರೋನ್‌ ಅವರ ಭೇಟಿಗೆ ಮುನ್ನವೇ ಈ 3.25 ಲಕ್ಷ ಕೋಟಿಯ ಮೆಗಾ ಒಪ್ಪಂದಕ್ಕೆ ಗ್ರೀನ್‌ ಸಿಗ್ನಲ್‌ ದೊರಕಿದೆ. ಈ ಮೆಗಾ ಡೀಲ್‌ ವಿಚಾರವಾಗಿ ಕಳೆದ ತಿಂಗಳು ಜನವರಿಯಲ್ಲಿ ರಕ್ಷಣಾ ಖರೀದಿ ಮಂಡಳಿಯಿಂದ ಅನುಮೋದನೆ ಪಡೆದ ನಂತರ ಸ್ವಾಧೀನ ಪ್ರಕ್ರಿಯೆಯು ಮುಂದುವರಿಯುವ ಮೊದಲು ಪ್ರಸ್ತಾವನೆಗೆ ಭದ್ರತೆಯ ಕ್ಯಾಬಿನೆಟ್ ಸಮಿತಿಯಿಂದ (CCS) ಅಂತಿಮ ಅನುಮೋದನೆ ಪಡೆಯಬೇಕಿದೆ. ಇದರ ಜೊತೆಗೆ ಈಗಾಗಲೇ ಡಸಾಲ್ಟ್ ಏವಿಯೇಷನ್ ಜೊತೆಗಿನ ಔಪಚಾರಿಕ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರವೇ ಅಂತಿಮ ಒಪ್ಪಂದ ಅನುಮೋದನೆ ಒಪ್ಪಂದ ಪೂರ್ಣವಾಗುವ ನಿರೀಕ್ಷೆಯಿದೆ.

ಮೇಡ್ ಇನ್‌ ಇಂಡಿಯಾ‌ ಆಗಲಿದ್ಯಾ ರಫೇಲ್ ವಿಮಾನ?
ರಫೇಲ್ ಒಪ್ಪಂದವು 30 ಬಿಲಿಯನ್ ಯುರೋ ಮೌಲ್ಯದ್ದಾಗಿದ್ದು, ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬನೆಯನ್ನು ಗಮನದಲ್ಲಿಟ್ಟುಕೊಂಡು, ವಿಮಾನಗಳು ಬಹಳಷ್ಟು ಸ್ಥಳೀಯ ವಿಷಯವನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತಿದ್ದು, ಈ ಒಪ್ಪಂದ ಖಚಿತವಾದರೆ, ಭಾರತಕ್ಕೆ 114 ರಫೇಲ್‌ ಜೆಟ್‌ ಗಳು ಸಿಗಲಿದ್ದು, ಇದರಲ್ಲಿ ಶೇ.80ರಷ್ಟು ಅಂದರೆ 9‌0 ವಿಮಾನಗಳನ್ನು ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಜೋಡಣೆ ಮಾಡಿ ತಯಾರಿಸಲಾಗುವುದು.

ನೌಕಾಪಡೆಗೆ ಶಕ್ತಿ ತುಂಬಲಿರುವ USನ P-8I ಒಪ್ಪಂದ
ಕೇವಲ ಭಾರತೀಯ ವಾಯುಪಡೆಗೆ ಮಾತ್ರವಲ್ಲದೆ, ನೌಕಾಪಡೆಯ ಶಕ್ತಿಯನ್ನೂ ಹೆಚ್ಚಿಸುವಲ್ಲಿಯೂ DAC ಗಮನವಹಿಸಿದ್ದು, ನೌಕಾಪಡೆಗೆ 6 ಹೆಚ್ಚುವರಿ P-8i ಕಡಲ ಕಣ್ಗಾವಲು ವಿಮಾನಗಳಿಗೆ ಅನುಮೋದನೆ ನೀಡದೆ. ಈಗಾಗಲೇ ನೌಕಾಪಡೆಯ ಬಳಿ 12 P-8i ಇದೆ. ಆದರೆ, ಇದರ ಸಾಮರ್ಥ್ಯವನ್ನು ಹೆಚ್ಚಿಸಲು ಈಗಾಗಲೇ ಅಮೆರಿಕಾದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆಗಳು ನಡೆಯುತ್ತಿದೆ. ಆದಾಗ್ಯೂ, ಅಮೆರಿಕಾದ ನೆಡೆಗಳಿಂದ ಉಂಟಾಗುತ್ತಿರುವ ಕಠಿಣ ಪರಿಸ್ಥಿತಿಗಳಿಂದ ಇದು ಕೊಂಚ ತಡವಾಗಬಹುದು ಎಂದು ಊಹಿಸಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.